See also 2fetch  3fetch
1fetch ಹೆಚ್‍
ಸಕರ್ಮಕ ಕ್ರಿಯಾಪದ
  1. (ಮನುಷ್ಯನನ್ನು) ಕರೆತರು; ಹೋಗಿ ಕರೆದುಕೊಂಡು ಬರು: fetch a doctor ಒಬ್ಬ ವೈದ್ಯನನ್ನು ಕರೆದುಕೊಂಡು ಬಾ.
  2. (ವಸ್ತುವನ್ನು) ಹೋಗಿತರು; ತೆಗೆದುಕೊಂಡು ಬರು.
  3. (ರಕ್ತ, ಕಣ್ಣೀರು, ಮೊದಲಾದವನ್ನು) ಬರಿಸು; ಸುರಿಯುವಂತೆ ಮಾಡು.
  4. (ಬೆಲೆ) ತರು; (ಬೆಲೆಗೆ) ಮಾರಾಟವಾಗು: his land fetched Rs.5,000 ಅವನ ಈನು 5,000 ರೂಪಾಯಿಗಳನ್ನು ತಂದಿತು.
  5. ಮೋಹಗೊಳಿಸು; ಆಕರ್ಷಿಸು; ಆಸಕ್ತಿ ಹುಟ್ಟಿಸು; ಮನಸೆಳೆ; ಆಹ್ಲಾದ ಉಂಟುಮಾಡು: her beauty fetched the coldest hearts ಅವಳ ಸೌಂದರ್ಯ ಅತ್ಯಂತ ಭಾವಶೂನ್ಯ ಹೃದಯಗಳನ್ನೂ ಮೋಹಗೊಳಿಸಿತು.
  6. ರೇಗಿಸು; ಕಿರಿಕಿರಿಮಾಡು.
  7. (ನಿಟ್ಟುಸಿರು) ಕರೆ: fetched a sigh ನಿಟ್ಟುಸಿರುಗರೆದ.
  8. (ಉಸಿರು) ಎಳೆ: fetched a breath ಉಸಿರೆಳೆದ.
  9. (ಏಟು) ಕೊಡು; ಪೆಟ್ಟು ಕೊಡು: fetch him a box on the ears ಅವನ ಕೆನ್ನೆಗೆ, ಕಪಾಲಕ್ಕೆ ಒಂದೇಟು ಕೊಡು.
ಅಕರ್ಮಕ ಕ್ರಿಯಾಪದ

ಹೋಗಿ ವ್ಯಕ್ತಿಗಳನ್ನು ಕರೆತರು ಯಾ ವಸ್ತುಗಳನ್ನು ತೆಗೆದುಕೊಂಡು ಬಾ .

ನುಡಿಗಟ್ಟು
  1. fetch and carry
    1. ಸರಕುಗಳನ್ನು ಹೊತ್ತುಕೊಂಡು ಹಿಂದಕ್ಕೂ ಮುಂದಕ್ಕೂ ಓಡಾಡು.
    2. ಆಳಾಗಿರು: he expects his daughter to fetch and carry for him all day ಇಡೀ ದಿವಸ ತನ್ನ ಮಗಳು ತನ್ನ ಆಳಾಗಿರಬೇಕೆಂದು ಆತ ನಿರೀಕ್ಷಿಸುತ್ತಾನೆ.
  2. fetch up
    1. ವಾಂತಿ ಬರಿಸು, ತರು.
    2. ನಿಲ್ಲು; ನಿಂತು ಹೋಗು.
See also 1fetch  3fetch
2fetch ಹೆಚ್‍
ನಾಮವಾಚಕ
  1. (ವಸ್ತುವನ್ನು) ಹೋಗಿ ತರುವುದು; ತೆಗೆದುಕೊಂಡು ಬರುವುದು.
  2. ಮನುಷ್ಯನನ್ನು ಕರೆತರುವುದು, ಕರೆದುಕೊಂಡು ಬರುವುದು.
  3. ಠಕ್ಕು; ಮೋಸ, ಠವುಳಿ; ತಂತ್ರ; ಕಪಟೋಪಾಯ: the mere fetches of a doctor ವೈದ್ಯನ ಕೇವಲ ತಂತ್ರಗಳು.
  4. (ಕೊಲ್ಲಿಯಲ್ಲಿ ಯಾ ಕಡಲಿನಲ್ಲಿ ಒಂದು ಸ್ಥಾನದಿಂದ ಇನ್ನೊಂದು ಸ್ಥಾನದವರೆಗೂ ವಿಸ್ತರಿಸಿರುವ, ಗಾಳಿ ಯಾ ಅಲೆಗಳು ಅಡೆತಡೆಯಿಲ್ಲದೆ ಚಲಿಸಬಹುದಾದ) ಪ್ರದೇಶ; ಹರವು.
See also 1fetch  2fetch
3fetch ಹೆಚ್‍
ನಾಮವಾಚಕ

(ಮನುಷ್ಯ ಸಾಯುವ ಮುಂಚೆ ಬಂಧುಮಿತ್ರರಿಗೆ ಕಾಣಿಸಿಕೊಳ್ಳುವುದೆಂದು ಹೇಳುವ, ಅವನ) ಪಡಿನೆರಳು; ಛಾಯಾರೂಪ.