fertile ಹರ್ಟೈಲ್‍
ಗುಣವಾಚಕ
  1. ಕಸುವಾದ, ಸಮೃದ್ಧಿಯಾಗಿ ಫಲನೀಡುವ; ಫಲವತ್ತಾದ; ಉರ್ವರ; ಸಮೃದ್ಧಫಲಿ.
  2. (ರೂಪಕವಾಗಿ) ಫಲದಾಯಕ; ಫಲಪ್ರದ; ಫಲನೀಡುವ: fertile imagination ಫಲದಾಯಕ ಕಲ್ಪನಾಶಕ್ತಿ.
  3. (ಬೀಜದ ವಿಷಯದಲ್ಲಿ) ಫಲಕೊಡುವ; ಹೊಸ ಸಸಿಯಾಗುವ ಶಕ್ತಿಯುಳ್ಳ.
  4. (ಮೊಟ್ಟೆ ಮೊದಲಾದವುಗಳ ವಿಷಯದಲ್ಲಿ) ಮರಿಯಾಗಬಲ್ಲ.
  5. ಪ್ರಜನಕ; ಸಂತಾನಶೀಲ; ಸಂತಾನಶಕ್ತ: few men of fertile age ಸಂತಾನಶೀಲ ವಯಸ್ಸಿನ ಕೆಲ ಗಂಡಸರು.
  6. (ಬೈಜಿಕ ಭೌತವಿಜ್ಞಾನ) ಫಲವಂತ; ಯುರೇನಿಯಮ್‍ $-238$, ಥೋರಿಯಮ್‍ $-232$ ಬೀಜಗಳಂತೆ, ನ್ಯೂಟ್ರಾನನ್ನು ನುಂಗಿ ವಿದಳನೀಯ ಬೀಜವನ್ನು ನೀಡಬಲ್ಲ.