See also 2ferry
1ferry ಹೆರಿ
ಸಕರ್ಮಕ ಕ್ರಿಯಾಪದ
  1. ದೋಣಿಯಲ್ಲಿ, ವಿಮಾನದಲ್ಲಿ, ಯಾ ಕೆಲಸದ ಗಾಡಿಯಲ್ಲಿ – ದಾಟಿಸು ಯಾ ಸಾಗಿಸು.
  2. ದೋಣಿ ನಡೆಸು.
  3. (ವಿಮಾನವನ್ನು) ಕಾರ್ಖಾನೆಯಿಂದ ವಿಮಾನ ನಿಲ್ದಾಣಕ್ಕೆ ಹಾರಿಸು.
ಅಕರ್ಮಕ ಕ್ರಿಯಾಪದ
  1. ದೋಣಿಯಲ್ಲಿ ದಾಟು.
  2. (ದೋಣಿಯ ವಿಷಯದಲ್ಲಿ) (ನದಿ, ಕಾಲುವೆ, ಖಾರಿ, ಮೊದಲಾದವುಗಳ ಮೇಲೆ ಇತ್ತಿಂದತ್ತ) ಹರಿದಾಡು; ಹೋಗಿಬರು.
See also 1ferry
2ferry ಹೆರಿ
ನಾಮವಾಚಕ
  1. (ನದಿ ಮೊದಲಾದವುಗಳನ್ನು, ದೋಣಿ ಮೊದಲಾದವುಗಳಿಂದ) ದಾಟುವ ಸ್ಥಳ; ಕಡವು; ಹಾಯ್ಗಡ.
  2. (ನದಿ ಮೊದಲಾದವುಗಳನ್ನು ದೋಣಿ ಮೊದಲಾದವುಗಳಿಂದ) ದಾಟುವ ಏರ್ಪಾಡು; ಹಾಯುವ ವ್ಯವಸ್ಥೆ.
  3. (ನ್ಯಾಯಶಾಸ್ತ್ರ) ಸಾಗಣೆ ಹಕ್ಕು; ದೋಣಿ ಮೊದಲಾದವುಗಳನ್ನು ನಡೆಸುವ ಮತ್ತು ಅದಕ್ಕಾಗಿ ಸುಂಕ ವಿಧಿಸುವ ಹಕ್ಕು.
  4. ಗಗನಯಾತ್ರಿಯನ್ನು ಗ್ರಹ ಮೊದಲಾದವುಗಳ ಮೇಲ್ಮೈಯಿಂದ (ಗಗನದ ಮಾತೃ) ನೌಕೆಗೆ ಒಯ್ಯುವ ಸಾಧನ.
ferry ಹರಿ
ಗುಣವಾಚಕ
  1. ಹರ್‍ ಮರಗಳಿಂದ ತುಂಬಿರುವ; ಭದ್ರದಾರುಗಳು ಸಮೃದ್ಧಿಯಾಗಿರುವ.
  2. ಹರ್‍ ಮರದ ಯಾ ಅದಕ್ಕೆ ಸಂಬಂಧಪಟ್ಟ.