fenestra ಹಿನೆಸ್ಟ್ರ
ನಾಮವಾಚಕ
(ಬಹುವಚನ fenestrae ಉಚ್ಚಾರಣೆ–ಹಿನೆಸ್ಟ್ರೀ).
  1. (ಅಂಗರಚನಾಶಾಸ್ತ್ರ) ಹಿನೆಸ್ಟ್ರ; ಕಿರುಗಂಡಿ; ಸಣ್ಣಕಿಂಡಿ; ಮೂಳೆ ಮೊದಲಾದವುಗಳಲ್ಲಿನ ಚಿಕ್ಕ ರಂಧ್ರ, ಮುಖ್ಯವಾಗಿ ಒಳಗಿವಿಯಲ್ಲಿರುವ ಹಿನೆಸ್ಟ್ರ ಒವಾಲಿಸ್‍ ಮತ್ತು ಹಿನೆಸ್ಟ್ರ ರೊಟಂಡಗಳಲ್ಲಿ ಒಂದು.
  2. (ಶಸ್ತ್ರವೈದ್ಯ) ನಡುಗಿವಿಯ ಮಧ್ಯಭಿತ್ತಿಯಲ್ಲಿ ಮಾಡಿದ ರಂಧ್ರ.
  3. ಶಸ್ತ್ರಚಿಕಿತ್ಸೆಯ ಉಪಕರಣದಲ್ಲಿನ ಕಂಡಿ, ರಂಧ್ರ, ಸಣ್ಣತೂತು.