fender ಹೆಂಡರ್‍
ನಾಮವಾಚಕ
  1. ನಿವಾರಕ; ತಡೆ; ಕಾಪು; ರಕ್ಷಣೆ; ರಕ್ಷಕ; ಯಾವುದೇ ವಸ್ತು ಹತ್ತಿರ ಬರದಂತೆ, ಡಿಕ್ಕಿಯಾಗದಂತೆ ಮಾಡುವ ಸಲಕರಣೆ.
  2. (ನೌಕಾಯಾನ) (ಹಡಗುಗಳು ಒಂದಕ್ಕೊಂದು ಉಜ್ಜದಂತೆ) ಹಡಗಿನ ಪಕ್ಕದಲ್ಲಿ ತೂಗುಹಾಕುವ ಹಳೆಯ ತಂತಿಗಳು, ಗೋಣಿತಟ್ಟು, ಮೊದಲಾದವು.
  3. ಕೆಂಡತಡೆ; ಬೆಂಕಿಗೂಡಿನಿಂದ ಹೊರಕ್ಕೆ ಕೆಂಡ ಉರುಳಿಬರದಂತೆ ತಡೆಯುವ ಲೋಹದ ಚೌಕಟ್ಟು.
  4. (ಅಮೆರಿಕನ್‍ ಪ್ರಯೋಗ) (ಮೋಟಾರುಕಾರಿನ ಡಿಕ್ಕಿಯ ಹೊಡೆತವನ್ನು ಕಡಮೆಮಾಡುವ) ಬಂಪರು.