See also 2female
1female ಹೀಮೇಲ್‍
ಗುಣವಾಚಕ
  1. ಹೆಣ್ಣು; ಸ್ತ್ರೀಲಿಂಗದ: female child ಹೆಣ್ಣುಮಗು. female dog ಹೆಣ್ಣುನಾಯಿ.
  2. (ಸಸ್ಯಗಳು ಯಾ ಅವುಗಳ ಅಂಗಗಳ ವಿಷಯದಲ್ಲಿ) ಹೆಣ್ಣು.
  3. (ಸಸ್ಯಗಳ ವಿಷಯದಲ್ಲಿ) ಫಲಿ; ಹಣ್ಣು ಬಿಡುವ.
  4. (ಸಸ್ಯಗಳ ವಿಷಯದಲ್ಲಿ) ಹೆಣ್ಣು; ಪುಂಕೇಸರವಿರದೆ ಶಲಾಕೆಗಳು ಮಾತ್ರ ಇರುವ.
  5. (ಸಸ್ಯಗಳ ವಿಷಯದಲ್ಲಿ) (ಬಣ್ಣ ಮೊದಲಾದವುಗಳ ಕಾರಣ) ಹೆಣ್ಣನ್ನು ನೆನಪಿಗೆ ತರುವ: female fern ಹೆಣ್ಣು ಜರೀಗಿಡ.
  6. ಸ್ತ್ರೀಯರ; ಸ್ತ್ರೀಯರಿಗೆ, ಹೆಂಗಸರಿಗೆ ಸಂಬಂಧಿಸಿದ; ಸ್ತ್ರೀಸಂಬಂಧಿ; ಸ್ತ್ರೀ: female suffrage ಸ್ತ್ರೀಯರ ಮತದಾರಿಕೆ, ಓಟು ಮಾಡುವ ಹಕ್ಕು.
  7. ಸ್ತ್ರೀಪ್ರಾಣಿಗಳ; ಹೆಣ್ಣು ಪ್ರಾಣಿಗಳಿಗೆ ಸಂಬಂಧಿಸಿದ.
  8. (ಓಜಸ್ಸು, ಶಕ್ತಿ, ಮೊದಲಾದವುಗಳಲ್ಲಿ) ಕೀಳುತೆರನ; ನಿರ್ಬಲವಾದ: female sapphire ಬಿಳಿಚಿರುವ ನೀಲಮಣಿ.
  9. (ಯಂತ್ರಸಲಕರಣೆ ಮೊದಲಾದವುಗಳಲ್ಲಿ ಗಂಡುಭಾಗವನ್ನು ಹೊಂದಿಸಲು ಅನುಕೂಲಿಸಿರುವ) ಹೆಣ್ಣಂಗ; ಹೆಣ್ಣುಭಾಗ; ಸ್ತ್ರೀಭಾಗ: female screw ಹೆಣ್ಣು ತಿರುಪು; ತಿರುಪುಗೂಟದ ಬಳೆ, ಗುಂಡಿ.
ಪದಗುಚ್ಛ

female impersonator ಸ್ತ್ರೀಪಾತ್ರಧಾರಿ ಪುರುಷ; ನಾಟಕ ಮೊದಲಾದವುಗಳಲ್ಲಿ ಹೆಂಗಸಿನ ವೇಷಭೂಷಣಗಳನ್ನು ಧರಿಸಿ ನಟಿಸುವ ಗಂಡಸು.

See also 1female
2female ಹೀಮೇಲ್‍
ನಾಮವಾಚಕ
  1. ಹೆಣ್ಣು; ಹೆಂಗಸು; ಸ್ತ್ರೀ; ಹೆಣ್ಣು – ಪ್ರಾಣಿ ಯಾ ಜೀವಿ: the law is harsh on all females ಕಾಯಿದೆ ಹೆಣ್ಣುಜಾತಿಗೆ ಕಠೋರವಾಗಿದೆ.
  2. (ಹೀನಾರ್ಥಕ ಪ್ರಯೋಗ ಯಾ ಹಾಸ್ಯ ಪ್ರಯೋಗ) ಹೆಂಗಸು; ಹುಡುಗಿ: a young female has called ಒಬ್ಬ ಪ್ರಾಯದ ಹೆಂಗಸು ಬಂದಿದ್ದಾಳೆ.