fellowship ಹೆಲೋಷಿಪ್‍
ನಾಮವಾಚಕ
  1. ಸಹಭಾಗಿತ್ವ; ಪಾಲುಗಾರಿಕೆ; ಸಹಾಸಕ್ತಿ.
  2. ಸಹವಾಸ; ಸಾಹಚರ್ಯ; ಸ್ನೇಹ; ಸಖ್ಯ; ಸೌಹಾರ್ದ; ಮೈತ್ರಿ.
  3. ಜೊತೆಗಾರರ – ತಂಡ, ಗುಂಪು, ಕೂಟ, ಸಂಘ.
  4. (ಕೆಲಸಗಾರರು, ವ್ಯಾಪಾರಿಗಳು, ಮೊದಲಾದವರ) ಮಂಡಲಿ; ಸಂಘ; ಸಂಸ್ಥೆ.
  5. ಭ್ರಾತೃಮಂಡಲಿ; ಸೋದರಬಳಗ: building up a new cosmopolitan fellowship ಹೊಸದಾದ ಒಂದು ಸರ್ವಸಮದರ್ಶಿ ಭ್ರಾತೃಮಂಡಲಿ ನಿರ್ಮಿಸುತ್ತ.
  6. ಹೆಲೋಷಿಪ್‍:
    1. ಕಾಲೇಜಿನ ಯಾ ವಿದ್ವತ್ಸಂಸ್ಥೆಯ ಹೆಲೋಗೆ ಕೊಡುವ ಗೌರವದ ಸ್ಥಾನಮಾನಗಳು, ವೇತನ.
    2. ಸ್ನಾತಕೋತ್ತರ ವಿದ್ಯಾರ್ಥಿವೇತನ.
ಪದಗುಚ್ಛ
  1. good fellowship ಒಳ್ಳೆಯ ಸ್ನೇಹ; ಸೌಹಾರ್ದ.
  2. right hand of fellowship ವಿಶ್ವಾಸದ ಹಸ್ತ; ಸದಸ್ಯತ್ವದ ಚಿಹ್ನೆ; ಸದಸ್ಯನನ್ನಾಗಿ ಸ್ವೀಕರಿಸುವ ಗುರುತಾಗಿ ನೀಡುವ ಕೈ.