See also 2fell  3fell  4fell  5fell  6fell
1fell ಹೆಲ್‍
ನಾಮವಾಚಕ
  1. (ಪ್ರಾಣಿಯ) ಚರ್ಮ ತೊಗಲು; ಅಜಿನ; ಕೂದಲುಳ್ಳ ಚರ್ಮ.
  2. ಮನುಷ್ಯನ ಚರ್ಮ.
  3. ದಟ್ಟ ಯಾ ಜಡೆಗಟ್ಟಿದ – ಕೂದಲು, ಉಣ್ಣೆ ಯಾ ಕುರಿತುಪ್ಪಟ.
ಪದಗುಚ್ಛ

fell of hair ಕೆದರಿದ ತಲೆ; ಬಾಚದ ತಲೆಗೂದಲು.

See also 1fell  3fell  4fell  5fell  6fell
2fell ಹೆಲ್‍
ನಾಮವಾಚಕ
  1. (ಹೆಸರುಗಳಲ್ಲಿ ಬರುವ) ಬೆಟ್ಟ; ಗುಡ್ಡ: ಕುಂದ: Sca fell.
  2. ಉತ್ತರ ಇಂಗ್ಲಂಡಿನ ಕುರುಚಲು ಕಾಡು.
See also 1fell  2fell  4fell  5fell  6fell
3fell ಹೆಲ್‍
ಗುಣವಾಚಕ

(ಕಾವ್ಯಪ್ರಯೋಗ) ಭಯಂಕರ; ಕಠಿನ; ಕಠೋರ; ಕರಾಳ; ಕ್ರೂರ; ಉಗ್ರ; ರೌದ್ರ; ನಿರ್ದಯ; ಮಾರಕ; ವಿನಾಶಕರ: a fell disease ಭಯಂಕರ ಕಾಯಿಲೆ.

ನುಡಿಗಟ್ಟು

at (or in) one fell swoop ಒಂದೇ (ಮಾರಕ) ಏಟಿಗೆ; ಒಂದೇ (ಮಾರಕ) ಹೊಡೆತಕ್ಕೆ.

See also 1fell  2fell  3fell  5fell  6fell
4fell ಹೆಲ್‍
ಸಕರ್ಮಕ ಕ್ರಿಯಾಪದ
  1. (ಮನುಷ್ಯನನ್ನು ಯಾ ಪ್ರಾಣಿಯನ್ನು ಏಟಿನಿಂದಲೋ ಆಯುಧದಿಂದಲೋ) ಹೊಡೆದು ಕೆಡಹು; ಕಡಿದುರುಳಿಸು.
  2. (ಮರವನ್ನು) ಕಡಿದುಹಾಕು; ಕತ್ತರಿಸಿ ಕೆಡವು; ತುಂಡರಿಸಿ ಉರುಳಿಸು, ಬೀಳಿಸು.
  3. (ಹೊಲಿಗೆ ಯಾ ಚಾಚು ಏಣನ್ನು) ಮಡಿಸಿ ಹೊಲಿ.
See also 1fell  2fell  3fell  4fell  6fell
5fell ಹೆಲ್‍
ನಾಮವಾಚಕ

ಕತ್ತರಿಸಿ ಹಾಕಿದ ನಾಟಾಗಳ ಮೊತ್ತ, ಪ್ರಮಾಣ.

See also 1fell  2fell  3fell  4fell  5fell
6fell ಹೆಲ್‍
ಕ್ರಿಯಾಪದ

1fall ಕ್ರಿಯಾಪದದ ಭೂತರೂಪ.