felicity ಹ(ಹೆ)ಲಿಸಿಟಿ
ನಾಮವಾಚಕ
  1. ಸೌಖ್ಯ; ಸುಖ(ದಿಂದಿರುವುದು); ಆನಂದ ಸ್ಥಿತಿ: marital felicity ದಾಂಪತ್ಯಸೌಖ್ಯ.
  2. ಪರಮಾನಂದ; ಪರಮಸುಖ.
  3. ಸುಖಸಂತೋಷ ನೀಡುವಂಥದು; ಸುಖಕಾರಣ.
  4. ವರ; ಪ್ರಸಾದ; ಸೌಭಾಗ್ಯ: it was Cromwell’s felicity to detect this gift of government ಆಡಳಿತ ನಡೆಸುವ ಯೋಗ್ಯತೆಯನ್ನು ಗುರುತಿಸಿದ್ದು ಕ್ರಾಮ್‍ವೆಲ್‍ನ ಸೌಭಾಗ್ಯವಾಗಿತ್ತು.
  5. ಪದಲಾಲಿತ್ಯ; ಮಾತಿನಲ್ಲಿ – ಹೃದಯಂಗಮತೆ, ಔಚಿತ್ಯ, ಸೌಲಭ್ಯ.
  6. ಔಚಿತ್ಯವುಳ್ಳ ಮಾತು; ಉಚಿತವಚನ; ಆಯ್ದಮಾತು; ಸೊಗಸಾದ ಪ್ರಯೋಗ.
  7. (ಪ್ರಾಚೀನ ಪ್ರಯೋಗ) ಒಳ್ಳೆಯ ಅದೃಷ್ಟ.