See also 2feeling
1feeling ಹೀಲಿಂಗ್‍
ನಾಮವಾಚಕ
  1. ಸ್ಪರ್ಶನ; ಮುಟ್ಟಿನೋಡುವುದು; ಮುಟ್ಟಿ ತಿಳಿಯುವುದು.
  2. (ಮುಖ್ಯವಾಗಿ) ಸ್ಪರ್ಶ; ಸ್ಪರ್ಶಜ್ಞಾನ; ಸ್ಪರ್ಶಾನುಭವ.
  3. ಸಂವೇದನೆ; ಅನುಭವ; ಇಂದ್ರಿಯಾನುಭವ.
  4. (ಆಸೆ, ಭಯ, ಮೊದಲಾದ) ಭಾವ; ರಾಗ.
  5. (ಬಹುವಚನದಲ್ಲಿ) ಮನಸ್ಸು; ಭಾವನೆಗಳು; ಮನಸ್ಸಿನ ಸೂಕ್ಷ್ಮತೆ: hurts my feelings ನನ್ನ ಮನಸ್ಸನ್ನು ನೋಯಿಸುತ್ತದೆ.
  6. (ಇತರರ ಕಷ್ಟಕ್ಕಾಗಿ) ಮರುಕ; ಅನುಕಂಪ; ಸಹಾನುಭೂತಿ: good feeling ಸದ್ಭಾವ; ಸಹಾನುಭೂತಿ.
  7. ಭಾವನೆ; ಅನಿಸಿಕೆ; ಅರಿವು: had a feeling of safety ಕ್ಷೇಮದ ಭಾವನೆ ಇದ್ದಿತು.
  8. ಪೂರ್ತಿಯಾಗಿ ಕಾರಣ ಕೊಡಲಾಗದಂಥ ಅಭಿಪ್ರಾಯ, ನಂಬಿಕೆ.
  9. ಭಾವನೆ; ಮನೋಭಾವ; ಅಭಿಪ್ರಾಯ: the general feeling was against it ಸಾಮಾನ್ಯವಾಗಿ ಎಲ್ಲರ ಭಾವನೆ ಅದಕ್ಕೆ ವಿರೋಧವಾಗಿತ್ತು.
  10. ಪ್ರಜ್ಞೆಯಿರುವ ಸ್ಥಿತಿ.
  11. (ಮನಶ್ಶಾಸ್ತ್ರ) ಸಂವೇದನೆ ಯಾ ಇಚ್ಛೆ; ಬಯಕೆ ಯಾ ಭಾವ.
  12. (ಮನಶ್ಶಾಸ್ತ್ರ) ಯಾವುದೇ ಮಾನಸಿಕ ಸ್ಥಿತಿಯ ನೋವು ನಲಿವಿನ ಅಂಶ.
  13. (ಮನಶ್ಶಾಸ್ತ್ರ) ಅಂತರ್ಬೋಧೆಯಿಂದ ಹುಟ್ಟಿದ ನಂಬಿಕೆ; ಒಳ ಅರಿವಿನ ನಂಬಿಕೆ.
  14. (ಕಲೆ) ಭಾವ; ರಸ: a painting with a feeling of spaciousness ವೈಶಾಲ್ಯದ ಭಾವ ಉಂಟುಮಾಡುವ ವರ್ಣಚಿತ್ರ. a poem without feeling ಭಾವಶೂನ್ಯವಾದ ಕವನ. to sing with feeling ಭಾವಪೂರ್ಣವಾಗಿ ಹಾಡುವುದು.
See also 1feeling
2feeling ಹೀಲಿಂಗ್‍
ಗುಣವಾಚಕ
  1. ಸಂವೇದನೆಯುಳ್ಳ.
  2. ಸೂಕ್ಷ್ಮ ಸ್ವಭಾವದ; ಮೃದುಭಾವದ.
  3. ಅನುಕಂಪದ; ಮರುಗುವ; ಕನಿಕರದ; ಸಹಾನುಭೂತಿಯುಳ್ಳ: a feeling heart ಮರುಗುವ ಹೃದಯ.
  4. ಭಾವ ತೋರುವ; ಭಾವ ವ್ಯಕ್ತಪಡಿಸುವ; ಭಾವಪೂರಿತ: a feeling reply to the charge ಆಪಾದನೆಗೆ ಭಾವಪೂರಿತ ಉತ್ತರ.
  5. ಹೃತ್ಪೂರ್ವಕ; ಹೃದಯತುಂಬಿದ: a feeling pleasure ಹೃತ್ಪೂರ್ವಕವಾದ ಸಂತೋಷ.