See also 2feel
1feel ಹೀಲ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ felt).
ಸಕರ್ಮಕ ಕ್ರಿಯಾಪದ
  1. ಮುಟ್ಟಿ ನೋಡು; ಮುಟ್ಟಿ ಪರೀಕ್ಷಿಸು: feel the pulse of ನಾಡಿ ನೋಡು; ನಾಡಿ ಪರೀಕ್ಷಿಸು.
  2. (ರೂಪಕವಾಗಿ) ಎಚ್ಚರಿಕೆಯಿಂದ ಭಾವನೆಗಳನ್ನು ಯಾ ಇಂಗಿತಗಳನ್ನು ಕಂಡುಹಿಡಿ, ಅರಿ.
  3. (ಸೈನ್ಯ) (ಪ್ರದೇಶವನ್ನು) ಹುಡುಕಿ ನೋಡು; ಪರೀಕ್ಷಿಸಿ ನೋಡು; ತಪಾಸಣೆ ಮಾಡು; ಶೋಧನೆಮಾಡು; (ಶತ್ರುವಿನ ಬಲವನ್ನು) ಪರೀಕ್ಷಿಸು.
  4. ಮುಟ್ಟಿ ಗ್ರಹಿಸು; ಸ್ಪರ್ಶದಿಂದ ಅರಿ, ತಿಳಿ: I felt that he was cold ಅವನ ಮೈ ತಣ್ಣಗಿದ್ದದ್ದನ್ನು ಮುಟ್ಟಿ ಅರಿತೆ.
  5. ಸ್ಪರ್ಶಜ್ಞಾನ ಹೊಂದಿರು; (ಸಂವೇದನೆ, ಭಾವನೆ, ಅರಿವು, ದೃಢನಂಬಿಕೆಗಳನ್ನು) ಪಡೆದಿರು; ಹೊಂದಿರು: felt the force of the argument ವಾದದ ಶಕ್ತಿಯನ್ನು ಅರಿತ.
  6. ಅನುಭವಿಸು; ಪ್ರಭಾವಕ್ಕೆ, ಪರಿಣಾಮಕ್ಕೆ – ಒಳಗಾಗು: felt the storm severely ಅವನು ಬಿರುಗಾಳಿಯ ಪ್ರಭಾವವನ್ನು ತೀವ್ರವಾಗಿ ಅನುಭವಿಸಿದ.
  7. ಮನಸ್ಸಿಗೆ ಹಚ್ಚಿಕೊ, ತಟ್ಟು: he feels the censure keenly ಅವನ ಖಂಡನೆ ಅವನ ಮನಸ್ಸಿಗೆ ತೀವ್ರವಾಗಿ ತಟ್ಟಿದೆ.
  8. ಅಸ್ಪಷ್ಟ ಆಧಾರದ ಮೇಲೆ (ಯಾವುದಾದರೂ ಸತ್ಯವನ್ನು) ಗುರುತಿಸು. ಕಾಣು: I feel that it is not correct ನನಗೆ ಅದು ಸರಿಯಲ್ಲವೆಂದು ಕಾಣುತ್ತದೆ.
  9. ಅರಿವಿರುವಂತೆ ಯಾ ಅನುಭವವಾದಂತೆ ವರ್ತಿಸು: ship feels her helm ಹಡಗಿಗೆ ಚುಕ್ಕಾಣಿಯ ಅರಿವಿರುವಂತಿದೆ.
  10. ಕೈಯಿಂದ ತಡಕಾಡಿಕೊಂಡು ಪಡೆ ಯಾ ಹೋಗು: he felt his way through the dark room ಕತ್ತಲೆಯ ಕೋಣೆಯಲ್ಲಿ ಅವನು ತಡಕಾಡಿಕೊಂಡು ಹೋದ.
  11. ಎಣಿಸು; ತಿನ್ನಿಸು; ಭಾವಿಸು; ಪರಿಗಣಿಸು: I feel it necessary to make correction ತಿದ್ದುಪಡಿ ಮಾಡಬೇಕೆಂದು ನನಗೆ ಅನ್ನಿಸುತ್ತದೆ.
  12. (ಅಶಿಷ್ಟ) (ಅನೇಕವೇಳೆ up ಒಡನೆ) ಜನನಾಂಗಗಳನ್ನು ನೇವರಿಸು, ತಡವು, ಮುತ್ತಿಡು.
ಅಕರ್ಮಕ ಕ್ರಿಯಾಪದ
  1. ಮುಟ್ಟಿತಿಳಿ: lost all ability to feel in his fingertips ಬೆರಳುತುದಿಯಿಂದ ಮುಟ್ಟಿತಿಳಿಯುವ ಶಕ್ತಿಯನ್ನೆಲ್ಲ ಕಳೆದುಕೊಂಡ.
  2. (ಕೈಯಿಂದ) ತಡಕಾಡು; ಹುಡುಕು: I felt in every fold of the pockets ಜೇಬುಗಳ ಪ್ರತಿಯೊಂದು ಪದರದಲ್ಲೂ ತಡಕಾಡಿದೆ.
  3. ಮುಟ್ಟಿನೋಡು; ಕೈಯಿಂದ ಮುಟ್ಟಿ ಕಂಡುಹಿಡಿಯಲು ಪ್ರಯತ್ನಪಡು: the surgeon felt if any bones were broken ಯಾವುದಾದರೂ ಎಲುಬುಗಳು ಮುರಿದಿವೆಯೇ ಎಂದು ಶಸ್ತ್ರವೈದ್ಯ ಮುಟ್ಟಿ ನೋಡಿದ.
  4. ಇಂದ್ರಿಯ ಸಂವೇದನೆ ಹೊಂದಿರು: the meanest thing that feels ಸಂವೇದನ ಶಕ್ತಿಯುಳ್ಳ ಅತಿ ಕ್ಷುದ್ರ ವಸ್ತು. the dead do not feel ಸತ್ತವರಿಗೆ ಸಂವೇದನೆ ಇರುವುದಿಲ್ಲ.
  5. ಯಾವುದೇ ಒಂದು ದೈಹಿಕ, ನೈತಿಕ, ಯಾ ಭಾವುಕ ಸ್ಥಿತಿ – ಉಂಟಾಗು ಯಾ ಇರು: feel cold, hungry, sad ನೆಗಡಿ, ಹಸಿವು, ದುಃಖ ಆಗು. how are you feeling today? ಇವತ್ತು ನೀನು ಹೇಗಿರುವೆ?
  6. ಮರುಗು; ಮರುಕಪಡು; ಸಹಾನುಭೂತಿ ತೋರು; ಕನಿಕರಪಡು; ಅನುಕಂಪ ತೋರಿಸು; ಕರುಣೆತೋರು: capable of feeling for the povertystricken ಬಡತನದಿಂದ ನರಳುವವರಿಗೆ ಮರುಗುವ ಶಕ್ತಿಯುಳ್ಳ.
  7. (ಇರುವಂತೆ) ತೋರು; ಅನಿಸು; ಕಾಣಿಸು: air feels chilly ಗಾಳಿ ಕೊರೆಯುವಂತೆ ತೋರುತ್ತದೆ. this feels like velvet ಇದು ಮಖಮಲ್ಲಿನಂತೆ ತೋರುತ್ತದೆ.
ಪದಗುಚ್ಛ
  1. a felt want ಅಗತ್ಯವಾಗಿ ಬೇಕೆನಿಸಿದ್ದು; ಆವಶ್ಯಕತೆ.
  2. feel like ಮಾಡಲು ಇಷ್ಟಪಡು; ಮಾಡಲು ಮನಸ್ಸುಳ್ಳವನಾಗು.
  3. feel one’s feet
    1. ಭದ್ರವಾಗಿ ಕಾಲೂರಿ ನಿಲ್ಲು.
    2. (ರೂಪಕವಾಗಿ) ಭದ್ರವಾಗಿ ಕಾಲೂರಿ ನಿಲ್ಲು; ಹಾಯಾಗಿರು; ಆರಾಮವಾಗಿರು.
  4. feel one’s legs = ಪದಗುಚ್ಛ \((3)\).
  5. feel up to work etc. ಕೆಲಸ ಮೊದಲಾದವಕ್ಕೆ ಶಕ್ತನಾಗಿರು, ಸಮರ್ಥನಾಗಿರು.
ನುಡಿಗಟ್ಟು
  1. feel in one’s bones ಖಂಡಿತವಾಗಿರು; ಖಾತ್ರಿಯಾಗಿರು; ಯಾವ ಸಂಶಯವೂ ಇಲ್ಲದಿರು.
  2. feel no pain (ಅಶಿಷ್ಟ) ತುಂಬಾ ಕುಡಿದಿರು; ಜ್ಞಾನವಿಲ್ಲದಂತೆ ಕುಡಿದಿರು.
  3. feel one’s oats.
  4. feel one’s way
    1. ದಾರಿಯನ್ನು ಹುಡುಕಿಕೊಂಡು ಹೋಗು.
    2. ಜೋಕೆಯಿಂದ ಮುಂದುವರಿ.
  5. feel (quite) oneself
    1. ಆರೋಗ್ಯವಾಗಿರು.
    2. ಸ್ವಸ್ಥಚಿತ್ತನಾಗಿರು.
  6. feel up (ಅಶಿಷ್ಟ) = 1feel ಸಕರ್ಮಕ ಕ್ರಿಯಾಪದ \((12)\).
  7. make one’s presence felt ಇತರರ ಮೇಲೆ ತನ್ನ ಪ್ರಭಾವ ಬೀರು.
See also 1feel
2feel ಹೀಲ್‍
ನಾಮವಾಚಕ
  1. ಸ್ಪರ್ಶ; ಮುಟ್ಟುವುದು: firm to the feel ಮುಟ್ಟುವುದಕ್ಕೆ ಗಟ್ಟಿಯಾಗಿದೆ.
  2. ಸ್ಪರ್ಶನ; ಮುಟ್ಟಿನೋಡುವುದು; ಮುಟ್ಟಿ ಪರೀಕ್ಷಿಸುವುದು; ಸ್ಪರ್ಶಪರೀಕ್ಷೆ.
  3. ಅನುಭವ; ಅರಿವು; ಅನಿಸಿಕೆ: a feel of sadness ದುಃಖದ ಅನುಭವ.
  4. ಹುಟ್ಟುಗುಣ; ಸಹಜ ಶಕ್ತಿ: to have a feel for what is right ಸರಿಯಾಗಿರುವುದನ್ನು ತಿಳಿಯುವ ಸಹಜಶಕ್ತಿ ಇರು.