feeder ಹೀಡರ್‍
ನಾಮವಾಚಕ
  1. ಆಹಾರ ಕೊಡುವವನು; ಆಹಾರ ಒದಗಿಸುವವ.
  2. ಉಣಿಸಿಗ; ಊಟ ಮಾಡಿಸುವವ; ಹೊಟ್ಟೆಗೆ ಹಾಕುವವ.
  3. ಕೊಲ್ಲುವುದಕ್ಕಾಗಿ ಪ್ರಾಣಿಗಳನ್ನು ಕೊಬ್ಬಿಸುವವನು.
  4. (ಅಹಂಕಾರ, ಆಸೆ, ಮೊದಲಾದವುಗಳನ್ನು) ತಣಿಸುವವ; ತೃಪ್ತಿಪಡಿಸುವವ.
  5. (ಪ್ರಾಣಿಗಳಿಗೆ ಯಾ ಪಕ್ಷಿಗಳಿಗೆ ತಿನಿಸು ನೀಡುವ) ತೊಟ್ಟಿ; ಗೊಂತು; ಗೋದಣ.
  6. ಭೋಜಕ; ಭೋಕ್ತ; ತಿನ್ನುವವ; ಆಹಾರತೆಗೆದುಕೊಳ್ಳುವವ.
  7. (ನಾಟಕ ಅಶಿಷ್ಟ) (ನಟರಿಗೆ) ಸೂಚನೆಗಾರ; ಸೂಚನೆಗಳನ್ನು ಒದಗಿಸುವವ.
  8. (ಕಾಲ್ಚೆಂಡಾಟ) ಚೆಂಡನ್ನು ಇನ್ನೊಬ್ಬನಿಗೆ ಕಳಿಸುವವ.
  9. ಹಾಲು ಬುಡ್ಡಿ; ಮಗುವಿಗೆ ಆಹಾರ ಊಡಿಸುವ ಸೀಸೆ.
  10. (ಬ್ರಿಟಿಷ್‍ ಪ್ರಯೋಗ) ಜೊಲ್ಲುಪಟ್ಟಿ; ಎಂಜಲುಪಟ್ಟಿ; ಮಗುವಿನ ಗಲ್ಲಪಟ್ಟಿ.
  11. ಕೂಡುಹೊಳೆ; ಉಪನದಿ (ರೂಪಕವಾಗಿ ಸಹ).
  12. (‘ರೌಂಡರ್ಸ್‍’ ಆಟಗಳಲ್ಲಿ) ದಾಂಡುಗಾರನಿಗೆ ಚೆಂಡನ್ನು ಎಸೆಯುವ ಆಟಗಾರ.
  13. ಹೀಡರು; ಊದು ಉಪಕರಣ; ಬೆಂಕಿ ಮೊದಲಾದವಕ್ಕೆ ಉರುವಲು ಒದಗಿಸುವ ಯಂತ್ರದಲ್ಲಿ ಅದಕ್ಕೆ ಬೇಕಾದ ಸಾಮಗ್ರಿಯನ್ನು ಒದಗಿಸುವ ವ್ಯಕ್ತಿ ಯಾ ಸಲಕರಣೆ.
  14. ಹೀಡರು:
    1. ಉಪಮಾರ್ಗ; ಪ್ರಧಾನ ಸಂಚಾರಮಾರ್ಗಕ್ಕೆ ಹೊರ ಪ್ರಾಂತದಲ್ಲಿರುವ ಸ್ಥಳಗಳನ್ನು ಸೇರಿಸುವ ರಸ್ತೆ, ರೈಲುಮಾರ್ಗ, ಯಾ ವಾಯುಮಾರ್ಗ.
    2. ಉಪತಂತಿ; ವಿತರಣ ಕೇಂದ್ರಕ್ಕೆ ವಿದ್ಯುತ್ತನ್ನು ಒಯ್ಯುವ ತಂತಿ ಯಾ ಮೇನು.
    3. ಉಪನಾಲೆ; ಜಲಾಶಯ ಮೊದಲಾದವಕ್ಕೆ ನೀರು ಸರಬರಾಜು ಮಾಡುವ ಸಣ್ಣ ಕಾಲುವೆ.
  15. (ಮಾರಲು) ಕೊಬ್ಬಿಸಿದ ಪ್ರಾಣಿ.
ಪದಗುಚ್ಛ
  1. gross feeder ಕೊಳಕು ಆಹಾರ ತಿನ್ನುವವ.
  2. large feeder ಹೊಟ್ಟೆಬಾಕ; ಕೂಳುಬಕ್ಕ; ತಿಂಡಿಪೋತ; ತೀನಾಳಿ; ತುಂಬಾ ತಿನ್ನುವವನು.
  3. quick feeder ಬೇಗಬೇಗ ತಿನ್ನುವವ; ಶೀಘ್ರಾಶಿ.