See also 2feedback  3feedback
1feedback ಹೀಡ್‍ಬ್ಯಾಕ್‍
ನಾಮವಾಚಕ
  1. ಪ್ರತ್ಯಾದಾನ:
    1. ವಿದ್ಯುನ್ಮಂಡಲದ ಯಾ ವರ್ಧಕದ ಉತ್ಪನ್ನ ಸಂಜ್ಞೆಯ ಸ್ವಲ್ಪ ಭಾಗವನ್ನು ಮೊದಲಿಗೆ ಯಾ ಹಿಂದಿನ ಹಂತಕ್ಕೆ ಒಯ್ಯುವುದು.
    2. ಹಾಗೆ ಹಿಂದಿನ ಹಂತಕ್ಕೆ ಒಯ್ದ ಸಂಜ್ಞೆ.
    3. (ಮುಖ್ಯವಾಗಿ ಜೀವವಿಜ್ಞಾನ ಮನಶ್ಶಾಸ್ತ್ರ ಮತ್ತು ಸಮಾಜ ವ್ಯವಸ್ಥೆಗಳ ವಿಷಯದಲ್ಲಿ) ಯಾವುದಾದರೂ ಪ್ರತಿಕ್ರಿಯೆಯನ್ನು ಬಲಗೊಳಿಸಲು ಯಾ ಮಾರ್ಪಡಿಸಲು, ಅದರ ಕೆಲವು ಪರಿಣಾಮಗಳನ್ನು ಮೂಲಕ್ಕೆ ಯಾ ಹಿಂದಿನ ಹಂತಕ್ಕೆ ಒಯ್ಯುವುದು.
  2. (ಪ್ರಯೋಗ, ಪ್ರಕ್ರಿಯೆ, ಮೊದಲಾದವುಗಳ ವಿಷಯದಲ್ಲಿ)
    1. (ಅವುಗಳ) ಪರಿಣಾಮದ (ಬಗೆಗಿನ) ಮಾಹಿತಿ.
    2. (ಅವುಗಳಿಗೆ) ಪ್ರತಿಕ್ರಿಯೆ.
See also 1feedback  3feedback
2feedback ಹೀಡ್‍ಬ್ಯಾಕ್‍
ಗುಣವಾಚಕ

ಪ್ರತ್ಯಾದಾನದ ಯಾ ಅದಕ್ಕೆ ಸಂಬಂಧಿಸಿದ.

See also 1feedback  2feedback
3feedback ಹೀಡ್‍ಬ್ಯಾಕ್‍
ಸಕರ್ಮಕ ಕ್ರಿಯಾಪದ

( ಅಕರ್ಮಕ ಕ್ರಿಯಾಪದ ಸಹ)

  1. (ವಿದ್ಯುನ್ಮಂಡಲ, ಜೀವವಿಜ್ಞಾನ, ಮನಶ್ಶಾಸ್ತ್ರ, ಮತ್ತು ಸಮಾಜ ವ್ಯವಸ್ಥೆಗಳ ವಿಷಯದಲ್ಲಿ) ಪ್ರತ್ಯಾದಾನದ ಮೂಲಕ ಯಾ ಅದರ ರೂಪದಲ್ಲಿ ಒದಗಿಸು, ನೀಡು.
  2. ಪ್ರಯೋಗ, ಪ್ರತಿಕ್ರಿಯೆ, (ಮೊದಲಾದವುಗಳ) ಪರಿಣಾಮದ ಮಾಹಿತಿ ಯಾ ಪ್ರತಿಕ್ರಿಯೆ ನೀಡು.