See also 2fee
1fee ಹೀ
ನಾಮವಾಚಕ
  1. (ಚರಿತ್ರೆ) ಉಂಬಳಿ; ದತ್ತಿ; ಊಳಿಗಮಾನ್ಯ ಜಹಗೀರು.
  2. ಉತ್ತರಾಧಿಕಾರದಿಂದ ಪಡೆದ ಆಸ್ತಿ; ವಂಶಾನುಕ್ರಮವಾಗಿ ಪ್ರಾಪ್ತವಾದ ಆಸ್ತಿ.
  3. (ಅಧಿಕಾರಿಗೆ ಅವನ ಕೆಲಸವನ್ನು ನಿರ್ವಹಿಸಿದ್ದಕ್ಕಾಗಿ ಕೊಡುವ) ಸಂಬಳ; ವೇತನ; ಹಣ.
  4. (ವಕೀಲ, ವೈದ್ಯ ಯಾ ವೃತ್ತಿಗಾರನಿಗೆ ಕೊಡುವ) ಹೀಜು; ರುಸುಮು; ಸಂಭಾವನೆ.
  5. ಪರೀಕ್ಷಾ ಶುಲ್ಕ; ಪ್ರವೇಶಧನ; ಪರೀಕ್ಷೆ, ಸಂಘ, ಮೊದಲಾದವಕ್ಕೆ ಪ್ರವೇಶ ಪಡೆಯಲು ಕೊಡುವ ಹಣ.
  6. (ಬಹುವಚನದಲ್ಲಿ) ಶಿಕ್ಷಣಶುಲ್ಕ; ಶಾಲೆ, ಕಾಲೇಜು, ಮೊದಲಾದವುಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಕಾಲಕಾಲಕ್ಕೆ ಕೊಡಬೇಕಾದ ಹೀಜು.
  7. ಇನಾಮು; ಬಹುಮಾನ; ಬಕ್ಷೀಸು.
  8. ಹೀಜು; ರುಸುಮು; ಹುಟ್‍ಬಾಲ್‍ ಮೊದಲಾದ ಆಟಗಾರರನ್ನು ವರ್ಗಾಯಿಸಲು ಕೊಡುವ ಹಣ.
ಪದಗುಚ್ಛ
  1. at a pin’s fee ಒಂದು ಸೂಜಿಯ ಬೆಲೆಯಷ್ಟು; ಗುಲಗಂಜಿ ಬೆಲೆಯಷ್ಟು.
  2. fee simple ಅನಿರ್ಬಂಧದ ಅಸ್ತಿ; ನಿರುಪಾಧಿಕ ಆಸ್ತಿ; ನಿಗದಿಯಾದ ವರ್ಗದ ವಾರಸುದಾರರಿಗೇ ಸಲ್ಲಬೇಕೆಂಬ ನಿರ್ಬಂಧವಿರದ ಆಸ್ತಿ.
  3. fee tail ಸೋಪಾಧಿಕ ಅಸ್ತಿ; ನಿರ್ಬಂಧವುಳ್ಳ ಆಸ್ತಿ; ಗೊತ್ತಾದ ವರ್ಗದ ವಾರಸುದಾರರಿಗೇ ಸಲ್ಲಬೇಕೆಂಬ ನಿರ್ಬಂಧವುಳ್ಳ ಆಸ್ತಿ.
  4. hold in fee (simple) ಸ್ವಾಮ್ಯ ಪಡೆದಿರು; ನಿರುಪಾಧಿಕ ಆಸ್ತಿಯ ಮೇಲೆ ನಿರ್ಬಂಧಿತ ಯಾ ನಿರ್ಬಂಧರಹಿತವಾದ ಹಕ್ಕನ್ನು ಪಡೆದಿರು; ಸಂಪೂರ್ಣ ಸ್ವಾಮ್ಯ ಪಡೆದಿರು.
  5. retaining fee ಮುಂಗಡ ರುಸುಮು; ಮುನ್ನಿಗದಿಯ ಹೀಸು; ನ್ಯಾಯವಾದಿ ಮೊದಲಾದವರಿಗೆ ಮುಂದೆ ಆವಶ್ಯಕತೆ ಬಂದಾಗ ಅವರ ಸೇವೆಯನ್ನು ಬಳಸಿಕೊಳ್ಳಲು ಕೊಡುವ ರುಸುಮು.
See also 1fee
2fee ಹೀ
ಸಕರ್ಮಕ ಕ್ರಿಯಾಪದ
  1. ರುಸುಮು ಕೊಡು.
  2. ರುಸುಮು ಕೊಟ್ಟು ಗೊತ್ತು ಮಾಡಿಕೊ: fee a barrister ಹಣ ಕೊಟ್ಟು ವಕೀಲನನ್ನು ಗೊತ್ತು ಮಾಡಿಕೊ.
  3. ಇನಾಮು, ಬಕ್ಷೀಸು, ಬಹುಮಾನ – ಕೊಡು; ಮಾಡಿದ ಯಾ ಮಾಡಲಿರುವ ಸೇವೆಗಾಗಿ ಹಣ ಕೊಡು: fee a waiter ಪರಿಚಾರಕನಿಗೆ ಇನಾಮು ಕೊಡು.