federal ಹೆಡರಲ್‍
ಗುಣವಾಚಕ
  1. (ರಾಜನೀತಿಶಾಸ್ತ್ರ) ಹೆಡರಲ್‍; ಸಂಯುಕ್ತ (ರಾಜ್ಯಾಡಳಿತ ವ್ಯವಸ್ಥೆಯ); ಅನೇಕ ಪ್ರಾಂತ್ಯಗಳು ತಮ್ಮ ಆಂತರಿಕ ವ್ಯವಹಾರಗಳಲ್ಲಿ ಸ್ವತಂತ್ರವಾಗಿದ್ದು ಇತರ ವ್ಯವಹಾರಗಳಲ್ಲಿ ಒಂದಾಗಿರುವ: the federal government of the US ಅಮೆರಿಕ ಸಂಯುಕ್ತ ಸಂಸ್ಥಾನಗಳ ಸರ್ಕಾರ.
  2. ಸಂಯುಕ್ತ ರಾಷ್ಟ್ರದ; ಸಂಯುಕ್ತ ಕೂಟಕ್ಕೆ ಸಂಬಂಧಪಟ್ಟ.
  3. (ರಾಜ್ಯಸರ್ಕಾರದಿಂದ ಬೇರೆಯಾದಂತೆ) ಕೇಂದ್ರಸರ್ಕಾರಕ್ಕೆ ಸಂಬಂಧಪಟ್ಟ.
  4. (ಅಮೆರಿಕದ ಅಂತರ್ಯುದ್ಧದಲ್ಲಿ) ಕೇಂದ್ರ ಸರ್ಕಾರವನ್ನು ಅನುಮೋದಿಸಿದ, ಬೆಂಬಲಿಸಿದ ಉತ್ತರ ರಾಜ್ಯಗಳ.
  5. (ದೇವತಾಶಾಸ್ತ್ರ) ಭಗವಂತನಿಗೂ ಅವನ ಪ್ರಥಮಸೃಷ್ಟಿಯಾದ ಆಡಮನಿಗೂ, ಭಗವಂತನಿಗೂ ಅವನ ಅಂಶಪುತ್ರನಾದ ಕ್ರಿಸ್ತನಿಗೂ ಆದ ಒಪ್ಪಂದವನ್ನಾಧರಿಸಿದ.
  6. (ಬ್ರಿಟಿಷ್‍ ವಿಶ್ವವಿದ್ಯಾನಿಲಯದ ವಿಷಯದಲ್ಲಿ) ಬಹುಮಟ್ಟಿಗೆ ಸ್ವತಂತ್ರ ಘಟಕಗಳಂತೆ ಕೆಲಸಮಾಡುವ ಕಾಲೇಜುಗಳ ಕೂಟವುಳ್ಳ.
ಪದಗುಚ್ಛ
  1. federal district, territory, etc. ಯಾವುದೇ ರಾಷ್ಟ್ರದ ಹೆಡರಲ್‍ ಸರ್ಕಾರ ಇರುವ ಪ್ರಾಂತ, ಪ್ರದೇಶ, ಮೊದಲಾದವು.
  2. Federal Reserve system (ಅಮೆರಿಕನ್‍ ಪ್ರಯೋಗ) ಹೆಡರಲ್‍ ಪದ್ಧತಿ; ಕೇಂದ್ರೀಯ ಗವರ್ನರುಗಳ ಮಂಡಳಿಯ ನಿಯಂತ್ರದಲ್ಲಿರುವ, 12 ಪ್ರಾಂತಗಳಲ್ಲೂ ಒಂದೊಂದು ಹೆಡರಲ್‍ ರಿಸರ್ವ್‍ ಬ್ಯಾಂಕ್‍ ಎಂಬ ಬ್ಯಾಂಕ್‍ ಉಳ್ಳ, ತನ್ನ ಸದಸ್ಯಬ್ಯಾಂಕುಗಳ ಮೇಲೆ ಪರಮಾಧಿಕಾರವುಳ್ಳ ಹೆಡರಲ್‍ ಬ್ಯಾಂಕಿಂಗ್‍ ಪದ್ಧತಿ.