See also 2feature
1feature ಹೀಚರ್‍
ನಾಮವಾಚಕ
  1. (ಸಾಮಾನ್ಯವಾಗಿ ಬಹುವಚನದಲ್ಲಿ) ಮುಖಲಕ್ಷಣ; ರೂಪ; ಚಹರೆ; (ಮುಖ್ಯವಾಗಿ ಆಕಾರ ಮತ್ತು ನೋಟಕ್ಕೆ ಸಂಬಂಧಿಸಿದ) ಮುಖಭಾಗ(ಗಳು).
  2. (ವಸ್ತುವಿನ) ವೈಶಿಷ್ಟ್ಯ; ವೈಲಕ್ಷಣ್ಯ; ವಿಶಿಷ್ಟ ಯಾ ಗಮನ ಸೆಳೆಯುವ ಲಕ್ಷಣ, ಅಂಶ: religious doubt is a feature of our age ಧರ್ಮವನ್ನು ಕುರಿತ ಸಂದೇಹ ನಮ್ಮ ಕಾಲದ ವಿಶಿಷ್ಟ ಲಕ್ಷಣ.
  3. (ಮುಖ್ಯವಾಗಿ ವೃತ್ತಪತ್ತಿಕೆ, ನಿಯತಕಾಲಿಕ, ಮೊದಲಾದವುಗಳಲ್ಲಿ) ವಿಶೇಷ ಲೇಖನ, ಪ್ರಮುಖ ಲೇಖನ, ಮೊದಲಾದವು.
  4. (ನೀಡಿದ) ವಿಶೇಷ ಆಕರ್ಷಣೆ: a sale on cameras was the feature of the day ಕ್ಯಾಮರಾಗಳ ರಿಯಾಯಿತಿ ಮಾರಾಟ ಅಂದಿನ ವಿಶೇಷ ಆಕರ್ಷಣೆಯಾಗಿತ್ತು.
  5. (ರೇಡಿಯೋ) ವಿಶೇಷ ಕಾರ್ಯಕ್ರಮ; ನಿರ್ದಿಷ್ಟ ವಸ್ತುವನ್ನು ಕುರಿತ, ನಾಟಕ ಮೊದಲಾದ ವಿಶೇಷ ರೇಡಿಯೋ ಕಾರ್ಯಕ್ರಮ.
  6. ದೀರ್ಘಚಿತ್ರ; ಅನೇಕ ರೀಲುಗಳುಳ್ಳ, ತಕ್ಕಷ್ಟು ದೀರ್ಘವಾದ ಚಲನಚಿತ್ರ.
ಪದಗುಚ್ಛ
  1. feature film = 1feature(6).
  2. feature picture = 1feature(6).
See also 1feature
2feature ಹೀಚರ್‍
ಸಕರ್ಮಕ ಕ್ರಿಯಾಪದ
  1. ಚಹರೆಯಾಗಿರು; ಮುಖ್ಯಲಕ್ಷಣವಾಗಿರು; ವೈಶಿಷ್ಟ್ಯವಾಗಿರು; ವೈಲಕ್ಷಣ್ಯವಾಗಿರು; ವಿಶಿಷ್ಟಗುರುತಾಗಿ ಕಾಣು; ಹೆಗ್ಗುರುತಾಗಿ ಕಾಣು: industrial expansion featured the last century ಔದ್ಯೋಗಿಕ ವಿಸ್ತರಣ ಕಳೆದ ಶತಮಾನದ ಮುಖ್ಯ ಲಕ್ಷಣವಾಗಿ ಕಾಣುತ್ತದೆ.
  2. ಚಿತ್ರಿಸು; ಪ್ರಧಾನ ಲಕ್ಷಣಗಳನ್ನು ಗುರುತುಮಾಡು.
  3. (ಚಲನಚಿತ್ರ) ಪರದೆಯ ಮೇಲೆ – ತೋರಿಸು, ಪ್ರದರ್ಶಿಸು.
  4. ಮುಖ್ಯನೋಟವಾಗಿ – ಬಿಡು, ಪ್ರದರ್ಶಿಸು.
  5. ವಿಶೇಷ ಪ್ರಾಧಾನ್ಯಕೊಡು; ಪ್ರಾಮುಖ್ಯಕೊಡು.