feathering ಹೆದರಿಂಗ್‍
ನಾಮವಾಚಕ
  1. ಗರಿಗಳಿಂದ – ಅಣಿಗೊಳಿಸುವುದು, ಅಲಂಕರಿಸುವುದು, ಅಸ್ತರಿಹಾಕುವುದು, ಯಾ ಮುಚ್ಚುವುದು.
  2. ಗರಿಯಂತಹ ಅಲಂಕರಣ ಮಾಡುವುದು, ಅಲಂಕರಣವಾಗುವುದು.
  3. ಗರಿಯಂತೆ (ಹಗುರವಾಗಿ) ತೇಲುವುದು, ಚಲಿಸುವುದು, ಯಾ ಒಲೆದಾಡುವುದು.
  4. = 1feather(8).
  5. (ವಿಮಾನಯಾನ) ಗಾಳಿಯ ನಿರೋಧ ಕಡಮೆಯಾಗುವಂತೆ ನೋದಕದ (ಪ್ರೊಪೆಲರಿನ) ಅಲಗುಗಳನ್ನು ತಿರುಗಿಸುವುದು.
  6. (ಬೇಟೆ ನಾಯಿಯ ವಿಷಯದಲ್ಲಿ) ವಾಸನೆ ಹುಡುಕುತ್ತಿರುವಾಗ ಮೈ, ಬಲಗಳನ್ನು ಅಲುಗಾಡಿಸುವುದು.
  7. (ಪಕ್ಷಿಯ) ಗರಿ; ಗರಿಗಳ ಸಮೂಹ.
  8. ಬಾಣಕ್ಕೆ ತೊಡಿಸಿದ ಗರಿಗಳು.
  9. ಗರಿ:
    1. ಪ್ರಾಣಿಯ ಮೈಗೂದಲಲ್ಲಿ ಹಕ್ಕಿಯ ಗರಿಗಳಂತಹ ರಚನೆ.
    2. (ವಾಸ್ತುಶಿಲ್ಪ) ಕಲ್ಲುಕಡೆದು ಕಲಾಕೃತಿ ರಚಿಸುವುದರಲ್ಲಿ ಕೋಡಿನಂತಿರುವ ಭಾಗಗಳು.
    3. ಹೂವಿನಲ್ಲಿ ಹಕ್ಕಿಯ ಗರಿಯಂತಿರುವ ಗುರುತು.