See also 2feast
1feast ಹೀಸ್ಟ್‍
ನಾಮವಾಚಕ
  1. ಮತೀಯ ವಾರ್ಷಿಕೋತ್ಸವ, ವರ್ಷದ ಹಬ್ಬ.
  2. ಹಳ್ಳಿಯ ವಾರ್ಷಿಕೋತ್ಸವ; ವರ್ಷದ ಊರಹಬ್ಬ.
  3. ಹಬ್ಬದೂಟ; ಭಾರಿ ಸವಿಯೂಟ; (ಮುಖ್ಯವಾಗಿ ಬಹುಜನ ಅತಿಥಿಗಳು ಸೇರುವ ಸಾರ್ವಜನಿಕ) ಔತಣ; ಭೋಜನಕೂಟ; ಮೇಜವಾನಿ.
  4. (ರೂಪಕವಾಗಿ) ಹಬ್ಬ; ರಸದೂಟ; ಇಂದ್ರಿಯಗಳಿಗೋ ಮನಸ್ಸಿಗೋ ಆಗುವ ತೃಪ್ತಿ, ತಣಿವು: feast of reason ಬುದ್ಧಿಗೆ – ರಸದೂಟ, ಔತಣ; ಬುದ್ಧಿಯನ್ನು ತಣಿಸುವ ರಸಮಯವಾದ ಮಾತು, ಭಾಷಣ.
ಪದಗುಚ್ಛ
  1. immovable feast ಪ್ರತಿವರ್ಷವೂ ನಿರ್ದಿಷ್ಟ ದಿನ ಬರುವ ಹಬ್ಬ.
  2. movable feast
    1. ವರ್ಷೇವರ್ಷೇ ಬೇರೆಬೇರೆ ದಿನ ಬರುವ ಹಬ್ಬ.
    2. (ಹಾಸ್ಯ ಪ್ರಯೋಗ) ಅಕಾಲ ಭೋಜನ; ಅವೇಳೆ ಊಟ; ನಿಯಮಿತ ಕಾಲ ಬಿಟ್ಟು ಮಾಡುವ ಊಟ.
See also 1feast
2feast ಹೀಸ್ಟ್‍
ಸಕರ್ಮಕ ಕ್ರಿಯಾಪದ
  1. (ರಾತ್ರಿ ಮೊದಲಾದವುಗಳನ್ನು)
    1. ಹಬ್ಬದ ಸಮಾರಂಭದಲ್ಲಿ ಕಳೆ.
    2. ಭಾರಿ ಔತಣದಲ್ಲಿ ಕಳೆ.
  2. (ಅತಿಥಿಗಳನ್ನು, ತನ್ನ ಕಣ್ಣುಗಳನ್ನು, ಸೌಂದರ್ಯ ಮೊದಲಾದವುಗಳಿಂದ) ತಣಿಸು; ಸಂತೃಪ್ತಿ ಪಡಿಸು; ಹಬ್ಬ ಮಾಡಿಸು.
ಅಕರ್ಮಕ ಕ್ರಿಯಾಪದ
  1. ಹಬ್ಬಮಾಡು; ಹಬ್ಬ ಆಚರಿಸು.
  2. ಹಬ್ಬದಲ್ಲಿ ಭಾಗವಹಿಸು.
  3. ಹಬ್ಬದ ಊಟ ಮಾಡು; ಭಾರಿ ಸವಿಯೂಟ ಮಾಡು.