See also 2fear
1fear ಹಿಅರ್‍
ನಾಮವಾಚಕ
  1. ಹೆದರಿಕೆ; ಅಂಜಿಕೆ; ದಿಗಿಲು; ಗಾಬರಿ; ಭಯ; ಭೀತಿ.
  2. ಭಯಭಕ್ತಿ: the fear of God ದೇವರ (ವಿಷಯದಲ್ಲಿ) ಭಯಭಕ್ತಿ.
  3. ಭಯ; ಕ್ಷೇಮಕ್ಕಾಗಿ ಕಳವಳ: in fear of his life ಜೀವಭಯದಿಂದ; ಜೀವ ಎಲ್ಲಿ ಹೋಗುವುದೋ ಎಂಬ ಕಳವಳದಿಂದ.
ಪದಗುಚ್ಛ
  1. for fear of (ಅದು ಸಂಭವಿಸಬಹುದೆಂಬ) ಹೆದರಿಕೆಯಿಂದ; ಭಯದಿಂದ.
  2. for fear of (that) (ಅದು) ಆಗದಿರಲೆಂದು, ಸಂಭವಿಸದಿರಲೆಂದು; (ಅದರ) ಅಪಾಯದಿಂದ ತಪ್ಪಿಸಿಕೊಳ್ಳಲು, ಪಾರಾಗಲು.
ನುಡಿಗಟ್ಟು
  1. no fear (ಆಡುಮಾತು) ಖಂಡಿತ ಸಾಧ್ಯವಿಲ್ಲ; ಖಂಡಿತ ಇಲ್ಲ; ಬಿಲ್‍ಕುಲ್‍ ಇಲ್ಲ; ಇಲ್ಲವೇ ಇಲ್ಲ; I invite him to dinner! and in his own hotel! no fear! ನಾನು ಅವನನ್ನು ಊಟಕ್ಕೆ ಕರೆಯುವುದೇ! ಅದೂ ಅವನ ಹೋಟೆಲಿನಲ್ಲಿ! ಖಂಡಿತ ಸಾಧ್ಯವಿಲ್ಲ!
  2. put the fear of God into ಗಾಬರಿಪಡಿಸು; ದಿಗಿಲು ಹುಟ್ಟಿಸು; ಭಯ ಪಡಿಸು.
  3. without fear or favour ಹೆದರಿಕೆಯ ಹಂಗು ಇಲ್ಲದೆ; ನಿಷ್ಪಕ್ಷಪಾತವಾಗಿ; ನಿರ್ದಾಕ್ಷಿಣ್ಯವಾಗಿ.
See also 1fear
2fear ಹಿಅರ್‍
ಸಕರ್ಮಕ ಕ್ರಿಯಾಪದ
  1. (ಒಬ್ಬ ವ್ಯಕ್ತಿ, ಒಂದು ಪ್ರಾಣಿ, ಮೊದಲಾದವುಗಳಿಗೆ) ಭಯಪಡು; ಅಂಜು; ಹೆದರು; ದಿಗಿಲುಪಡು; ಗಾಬರಿಗೊಳ್ಳು.
  2. (ಮಾಡಲು) ಹಿಂದುಮುಂದು ನೋಡು; ಹಿಂದೆಗೆ; ಹಿಂಜರಿ.
  3. (ದೇವರಲ್ಲಿ) ಭಯ ಭಕ್ತಿ ಇಡು.
  4. (ಕೇಡು ಆದೀತೆಂದು) ಹೆದರು; (ಕೇಡಿನ ನಿರೀಕ್ಷಣೆಯಿಂದ) ಕಳವಳಗೊಳ್ಳು; ಗಾಬರಿಪಡು.
ಅಕರ್ಮಕ ಕ್ರಿಯಾಪದ

ಹೆದರು; ಅಂಜು; ಭಯಪಡು; ದಿಗಿಲು ಬೀಳು; ಗಾಬರಿಯಾಗು; ಆತಂಕಗೊಳ್ಳು.

ನುಡಿಗಟ್ಟು
  1. fear me (ಪ್ರಾಚೀನ ಪ್ರಯೋಗ, ಆತ್ಮಾರ್ಥಕ) ನನಗೇಕೋ ಭಯವಾಗುತ್ತಿದೆ.
  2. never fear ಹಾಗಾಗುವ ಅಪಾಯವೇನೂ ಇಲ್ಲ.