See also 2favourite
1favourite ಹೇವರಿಟ್‍
ನಾಮವಾಚಕ
  1. (ಇತರರಿಗಿಂತ, ಇತರ ವಸ್ತುಗಳಿಗಿಂತ) ವಿಶೇಷ ಪ್ರೀತಿಪಾತ್ರ.
  2. ಅತ್ಯಂತ ಪ್ರಿಯ; ಅಚ್ಚುಮೆಚ್ಚಿನವನು; ನೆಚ್ಚಿನವನು; ದೊರೆಯಿಂದ ಯಾ ಮೇಲಿನ ಅಧಿಕಾರಿಯಿಂದ ಆರಿಸಲ್ಪಟ್ಟು ಅತಿ ಮನ್ನಣೆಗೆ ಪಾತ್ರನಾದವನು.
  3. (ಕ್ರೀಡೆ) ನಿರೀಕ್ಷಿತ ವಿಜೇತ; ವಿಜಯಿ ಎಂದು ಎಲ್ಲರೂ ಸಾಮಾನ್ಯವಾಗಿ ನಿರೀಕ್ಷಿಸುವ ಸ್ಪರ್ಧಿ.
  4. (ಕುದುರೆ ರೇಸು) ಖಾಯಿಷಿ ಕುದುರೆ; ಸ್ಪರ್ಧಿಗಳ ಪೈಕಿ ಪಂದ್ಯ ಗೆಲ್ಲುವುದೆಂದು ಎಲ್ಲರೂ ನಿರೀಕ್ಷಿಸುವ ಕುದುರೆ.
ಪದಗುಚ್ಛ

favourite son (ಅಮೆರಿಕನ್‍ ಪ್ರಯೋಗ) ಪ್ರಿಯ ಪುತ್ರ; ಅಮೆರಿಕದ ಅಧ್ಯಕ್ಷಸ್ಥಾನಕ್ಕೆ ಒಂದು ಸಂಸ್ಥಾನದ ಪ್ರತಿನಿಧಿಗಳು ಯಾರನ್ನು ಆರಿಸಬಯಸುತ್ತಾರೋ ಅವನು.

See also 1favourite
2favourite ಹೇವರಿಟ್‍
ಗುಣವಾಚಕ
  1. (ಇತರರಿಗಿಂತ, ಇತರ ವಸ್ತುಗಳಿಗಿಂತ) ಹೆಚ್ಚು ಪ್ರೀತಿಪಾತ್ರವಾದ.
  2. (ವ್ಯಕ್ತಿ, ಪ್ರಾಣಿ, ವಸ್ತುಗಳ ವಿಷಯದಲ್ಲಿ) ಪ್ರಿಯವಾದ; ಅಚ್ಚುಮೆಚ್ಚಿನ.