See also 2fatigue
1fatigue ಹಟೀಗ್‍
ನಾಮವಾಚಕ
  1. (ಶ್ರಮ ಯಾ ಕೆಲಸದಿಂದಾಗುವ) ಆಯಾಸ; ಬಳಲಿಕೆ; ದಣಿವು; ಸುಸ್ತು.
  2. ಬಳಲಿಕೆ; ದೌರ್ಬಲ್ಯ; ದಣಿವು; ಲೋಹವೇ ಮೊದಲಾದ ಪದಾರ್ಥವನ್ನು ಬಹುಕಾಲ ಉಪಯೋಗಿಸಿದುದರ ಪರಿಣಾಮವಾಗಿ ಅದರಲ್ಲುಂಟಾಗುವ ದೌರ್ಬಲ್ಯ.
  3. ಶ್ರಮಗೆಲಸ; ಬಳಲಿಸುವ, ಆಯಾಸಕರ, ದಣಿಸುವ – ಕೆಲಸ.
  4. ದುರ್ಬಲತೆ; ನಿಶ್ಶಕ್ತಿ; ಸ್ನಾಯು, ಅಂಗ, ಮೊದಲಾದವು ತುಂಬ ಕಾಲ ಕೆಲಸ ಮಾಡಿದುದರಿಂದ ಅವುಗಳ ಸಾಮರ್ಥ್ಯ ಯಾ ಶಕ್ತಿ ಕುಂದುವಿಕೆ.
  5. = fatigue-party.
  6. (ಬಹುವಚನದಲ್ಲಿ) = fatigue-dress.
  7. ಸೈನಿಕನ ಸೈನ್ಯೇತರ ಉದ್ಯೋಗ.
See also 1fatigue
2fatigue ಹಟೀಗ್‍
ಸಕರ್ಮಕ ಕ್ರಿಯಾಪದ
  1. ದಣಿಸು; ಬಳಲಿಸು; ಆಯಾಸಗೊಳಿಸು; ಸುಸ್ತುಮಾಡು.
  2. ದುರ್ಬಲಗೊಳಿಸು; ನಿಶ್ಶಕ್ತಿಗೊಳಿಸು; ದಣಿಸು; ಬಳಲಿಸು; ಬಹುಕಾಲ ಉಪಯೋಗಿಸುವ ಮೂಲಕ (ಲೋಹ ಮೊದಲಾದವನ್ನು) ದುರ್ಬಲಗೊಳಿಸು.