See also 2father
1father ಹಾದರ್‍
ನಾಮವಾಚಕ
  1. ತಂದೆ; ಅಪ್ಪ; ಪಿತ; ಜನಕ.
  2. (ರೂಪಕವಾಗಿ) ಮೂಲ; ಆಕರ; ಜನಕ: the horseless carriage was the father of the modern automobile ಕುದುರೆಯಿಲ್ಲದ ಗಾಡಿಯೇ ಆಧುನಿಕ ಮೋಟಾರು ವಾಹನದ ಮೂಲ.
  3. (ಸಡಿಲವಾಗಿ) ಮಾವ ಯಾ ಮಲತಂದೆ ಯಾ ದತ್ತು ತಂದೆ.
  4. (ಜನಾಂಗ, ಕುಟುಂಬ, ಮೊದಲಾದವುಗಳ) ಪೂರ್ವಜ; ಮೂಲಪುರುಷ.
  5. ನಿರ್ಮಾತೃ; ಪ್ರವರ್ತಕ; ಉತ್ಪಾದಕ; ರಚನೆಮಾಡಿದವನು; ಪ್ರಾರಂಭಕರ್ತ; ಮೊದಲಿಗ; ಪ್ರಾರಂಭಕಾಲದ ಮುಂದಾಳು: the father of the modern psychology ಆಧುನಿಕ ಮನಶ್ಶಾಸ್ತ್ರದ ಪ್ರಾರಂಭಕರ್ತ.
  6. ತಂದೆ; ಪಿತ; ತಂದೆಯಂತೆ ಗೌರವಕ್ಕೆ ಅರ್ಹನಾದವ: father of his country ನಾಡಿನ ತಂದೆ; ರಾಷ್ಟ್ರಪಿತ.
  7. ಧರ್ಮಗುರು; ಆಚಾರ್ಯ; ಧಾರ್ಮಿಕ ಗುರು.
  8. (Father) ದೇವರು; ಭಗವಂತ.
  9. ಪಿತ; ಕ್ರೈಸ್ತ ಮತದ ತ್ರಿಮೂರ್ತಿಗಳಲ್ಲಿ ಆದಿವ್ಯಕ್ತಿ.
  10. ಪಿತ; ಪಾಪನಿವೇದನೆ ಕೇಳುವ ಪಾದ್ರಿ.
  11. ಪಿತ; ಕ್ರೈಸ್ತ ಸಂನ್ಯಾಸಿ ಮಠದ ಹಿರಿಯ.
  12. (Father) ಹಾದರ್‍; ಪಾದ್ರಿಯ ಹೆಸರಿನ ಹಿಂದೆ ಸೇರಿಸುವ ಒಕ್ಕಣೆ.
  13. ಹಿರಿಯ; ಪ್ರಮುಖ; ಅತ್ಯಂತ ಹಿರಿಯ ಸದಸ್ಯ: Father of the House of Commons ಕಾಮನ್ಸ್‍ ಸಭೆಯ ಹಿರಿಯ ಸದಸ್ಯ; ಕಾಮನ್ಸ್‍ ಸಭೆಯಲ್ಲಿ ಅತಿ ಹೆಚ್ಚುಕಾಲ ನಿರಂತರವಾಗಿ ಸದಸ್ಯನಾಗಿರುವವ.
  14. (ಬಹುವಚನದಲ್ಲಿ) ಪಿತೃಗಳು; ಪ್ರಮುಖರು; ಹಿರಿಯರು; ಮುಖಂಡರು; ಸಮಸ್ತರು: city fathers ನಗರಪಿತೃಗಳು; ಪೌರಸಭೆಯ ಸದಸ್ಯರು.
  15. ಪೂಜ್ಯ; ಪೂಜನೀಯ; ಗೌರವಾರ್ಹ ವ್ಯಕ್ತಿ.
ಪದಗುಚ್ಛ
  1. adoptive father ದತ್ತುತಂದೆ.
  2. (Conscript) Fathers ರೋಮನ್‍ ಸೆನೆಟರುಗಳು; ರೋಮನ್‍ ವರಿಷ್ಠ ಸಭೆಯ ಸದಸ್ಯರು.
  3. Father $^1$christmas.
  4. Father of English poetry ಚಾಸರ್‍ ಕವಿ; ಇಂಗ್ಲಿಷ್‍ ಕಾವ್ಯದ ಪ್ರಾರಂಭಕರ್ತ.
  5. Father of History (ಗ್ರೀಕ್‍ ಇತಿಹಾಸಕಾರ) ಹಿರೊಡೊಟಸ್‍; ಚರಿತ್ರೆಯ ಮೂಲಪುರುಷ.
  6. Father of lies ಸುಳ್ಳಪ್ಪ; ಸುಳ್ಳಿನ ಜನಕ; ಸೈತಾನ.
  7. Fathers of Waters (ಅಮೆರಿಕನ್‍ ಪ್ರಯೋಗ) ಮಿಸಿಸಿಪಿ (ನದಿ).
  8. Fathers (of the Church) ಮುಖ್ಯವಾಗಿ ಮೊದಲ ಐದು ಶತಮಾನಗಳ ಕ್ರಿಶ್ಚಿಯನ್‍ ಬರಹಗಾರರು.
  9. Father Thames ಥೇಮ್ಸ್‍ ದೇವತೆ; ಇಂಗ್ಲಂಡಿನ ಥೇಮ್ಸ್‍ ನದಿ.
  10. Father $^1$time.
  11. Holy Father ಪೋಪ್‍ ಗುರು.
  12. Most Reverend Father in God ಬಿಷಪ್ಪನ ಬಿರುದು.
  13. Right Reverend Father in God = ಪದಗುಚ್ಛ \((12)\).
ನುಡಿಗಟ್ಟು
  1. the child is father to(or of) the man ಮನುಜನಿಗೆ ಮಗು ತಂದೆ; ಮಗುವಾಗಿದ್ದಾಗಿನ ಪ್ರವೃತ್ತಿಗಳು ವಯಸ್ಕ ಬೆಳವಣಿಗೆಯ ಮುನ್‍ಸೂಚನೆಗಳಾಗಿರುತ್ತವೆ.
  2. the father and mother of a (ಆಡುಮಾತು) ಅತ್ಯಂತ ಭಾರಿಯಾದುದು, ದೊಡ್ಡದು, ತೀವ್ರವಾದುದು, ಮೊದಲಾದವು.
  3. the wish is father to the thought ನಂಬಿಕೆಗೆ ಇಚ್ಛೆಯೇ ಮೂಲ; ನಂಬಲು ಇಷ್ಟಪಡುವುದರಿಂದಲೇ (ಒಂದನ್ನು) ನಂಬುತ್ತಾನೆ.
See also 1father
2father ಹಾದರ್‍
ಸಕರ್ಮಕ ಕ್ರಿಯಾಪದ
  1. ಹುಟ್ಟಿಸು; (ಮಗುವಿಗೆ) ಜನ್ಮಕೊಡು; ತಂದೆಯಾಗಿರು; ಜನಕನಾಗಿರು.
  2. (ಹೇಳಿಕೆ ಮೊದಲಾದವಕ್ಕೆ) ಮೂಲಕರ್ತನಾಗಿರು.
  3. (ತಾನು ಮಗುವಿನ) ತಂದೆಯೆಂದು ಒಪ್ಪಿಕೊ; ಜನಕನೆಂದು ಹೇಳಿಕೊ.
  4. (ಗ್ರಂಥದ) ಕರ್ತೃವೆಂದು – ಒಪ್ಪಿಕೊ, ಹೇಳಿಕೊ.
  5. (ಪ್ರಾಚೀನ ಪ್ರಯೋಗ) ತಂದೆಯಂತೆ (ವಾತ್ಸಲ್ಯದಿಂದ) – ಪಾಲನೆಮಾಡು, ಅಧಿಕಾರಮಾಡು, ಜವಾಬ್ದಾರಿ ವಹಿಸು.
  6. ಒಬ್ಬನ ಮೇಲೆ (ಮಗುವಿನ) ಪಿತೃತ್ವವನ್ನು – ಹೊರಿಸು, ಆರೋಪಿಸು.
  7. ಒಬ್ಬನ ಮೇಲೆ (ಗ್ರಂಥದ) ಕರ್ತೃತ್ವ – ಹೊರಿಸು, ಆರೋಪಿಸು.
  8. (ಶಿಕ್ಷಣ, ವಿದ್ಯಾಭ್ಯಾಸ, ಮೊದಲಾದವುಗಳ ಮೂಲಕ) ರೂಪಿಸು; ನಿರ್ಮಿಸು; ಉತ್ಪತ್ತಿ ಮಾಡು; ಉತ್ಪಾದಿಸು.