fatality ಹ(ಹೇ)ಟ್ಯಾಲಿಟಿ
ನಾಮವಾಚಕ
  1. ದೈವಾಧೀನತೆ; ವಿಧಿವಶತೆ; ಅದೃಷ್ಟಾಧೀನತೆ; ಅದೃಷ್ಟಕ್ಕೆ ಅಧೀನವಾಗುವುದು: there is a fatality in human affairs that leads to destruction ಮನುಷ್ಯನ ವ್ಯವಹಾರಗಳಲ್ಲಿ ವಿನಾಶಕ್ಕೆ ಕೊಂಡೊಯ್ಯುವ ಒಂದು ದೈವಾಧೀನತೆ ಇದೆ.
  2. ವಿಧಿಪ್ರಾಬಲ್ಯ; ಅದೃಷ್ಟಪ್ರಾಬಲ್ಯ.
  3. ದುರ್ದೈವ; ದುರ್ವಿಧಿ; ದುರದೃಷ್ಟ; ವಿಪತ್ತು ಒದಗಬೇಕೆಂಬ ವಿಧಿಸಂಕಲ್ಪ.
  4. ವಿಷಮಪ್ರಭಾವ; ವಿನಾಶಕರ ಪ್ರಭಾವ.
  5. ಕೇಡು; ಅಪಾಯ; ಹನಿ; ವಿಪತ್ತು; ಆಪತ್ತು.
  6. (ಯುದ್ಧ, ಅಪಘಾತ, ಮೊದಲಾದವುಗಳಲ್ಲಿ ಅಕಸ್ಮಾತ್ತಾಗಿ ಆಗುವ) ಅಪಮೃತ್ಯು; ದುರ್ಮರಣ; ಸಾವು; ಮರಣ.
  7. ಮೃತಸಂಖ್ಯೆ; ಮರಣಸಂಖ್ಯೆ; ಸತ್ತಸಂಖ್ಯೆ; ಸಾವುಸಂಖ್ಯೆ; ಸತ್ತವರ, ಸಾಯುವವರ ಸಂಖ್ಯೆ: there is a rise in highway fatalities ಹೆದ್ದಾರಿಯ ಸಾವುಗಳ ಸಂಖ್ಯೆ ಹೆಚ್ಚಾಗುತ್ತದೆ.