fatal ಹೇಟ್‍(ಟ)ಲ್‍
ಗುಣವಾಚಕ
  1. ವಿಧಿಯಂತಿರುವ; ವಿಧಿಯಂಥ; ವಿಧಿಸದೃಶ.
  2. ಅವಶ್ಯ; ಅನಿವಾರ್ಯ, ಅದೃಷ್ಟದಂತೆ, ವಿಧಿಯಂತೆ – ತಪ್ಪಿಸಲಾರದ.
  3. ವಿಧಿಯ; ದೈವಿಕ; ಅದೃಷ್ಟದ.
  4. ಅದೃಷ್ಟವಶವಾದ; ದೈವನಿಯತವಾದ; ವಿಧಿನಿಯತವಾದ.
  5. ನಿರ್ಣಾಯಕ; ನಿರ್ಧಾರಕ; ಅಂತಿಮವಾಗಿ ನಿರ್ಧರಿಸುವ.
  6. ಮಾರಕ; ನಾಶಕ; ನಾಶಮಾಡುವ; ನಾಶಕಾರಕ; ಕೇಡು ತರುವ; ವಿನಾಶಕರ; ಅಪಾಯಕರ: the withdrawal of funds was fatal to the project ಹಣ ಹಿಂತೆಗೆದುಕೊಂಡದ್ದು ಯೋಜನೆಗೆ ಮಾರಕವಾಯಿತು.
  7. ಮಾರಕ; ಅಂತಕ ಸಾವು ತರುವ; ಕೊಲ್ಲುವ; ಖಂಡಿತವಾಗಿ ಸಾಯಿಸುವ; ಸಾವಿನಲ್ಲಿ – ಮುಗಿಯುವ, ಕೊನೆಗೊಳ್ಳುವ, ಅಂತ್ಯವಾಗುವ, ಮುಕ್ತಾಯವಾಗುವ: fatal accident ಸಾವಿನಲ್ಲಿ ಅಂತ್ಯವಾಗುವ ಅಪಘಾತ.
  8. ಬಾಧಕ; ಘಾತಕ; ಹಾನಿಕಾರಿ: fatal law ಘಾತಕ ಕಾನೂನು.
  9. ಅವಿವೇಕದ; ತಪ್ಪು ಸಲಹೆಯಿಂದಾದ: fatal mistake of being over-confident ಅತಿಯಾದ ಆತ್ಮವಿಶ್ವಾಸದ ಅವಿವೇಕದಿಂದಾದ ತಪ್ಪು.
ನುಡಿಗಟ್ಟು
  1. fatal shears ಜೀವಗತ್ತರಿ; ಸಾವು; ಮೃತ್ಯು.
  2. fatal thread ಆಯುಸ್ಸು; ಹಣೆ ಬರಹದ, ವಿಧಿನಿಯತವಾದ – ಜೀವಿತಕಾಲ.