fasten ಹಾಸ್‍ನ್‍
ಸಕರ್ಮಕ ಕ್ರಿಯಾಪದ
  1. (ಹಗ್ಗ, ದಾರ, ಪಟ್ಟಿ, ಗುಂಡಿ, ಕೊಕ್ಕೆ, ಬೀಗ, ಅಗುಳಿ, ಮೊದಲಾದವುಗಳಿಂದ) ಭದ್ರಪಡಿಸು; ಗಂಟುಹಾಕು; ಕಟ್ಟು; ಬಿಗಿ; ಬಿಗಿಸು; ಬಂಧಿಸು; ಅಂಟಿಸು: fasten garment, door ಉಡುಪನ್ನು, ಬಾಗಿಲನ್ನು ಭದ್ರಪಡಿಸು. fasten off thread ದಾರವನ್ನು ಗಂಟು ಮೊದಲಾದವುಗಳಿಂದ ಬಿಗಿಗೊಳಿಸು.
  2. (ದೃಷ್ಟಿ, ಆಲೋಚನೆ, ಮೊದಲಾದವನ್ನು ಯಾವುದರ ಮೇಲಾದರೂ) ಇಡು; ನೆಡು; ನಿಲ್ಲಿಸು.
  3. (ಅಡ್ಡಹೆಸರು, ಆಪಾದನೆ, ಮೊದಲಾದವನ್ನು) ಕಟ್ಟು; ಹಚ್ಚು; ಅಂಟಿಸು; ಆರೋಪಿಸು; ಹೊರಿಸು.
ಅಕರ್ಮಕ ಕ್ರಿಯಾಪದ

ಹಿಡಿದುಕೊ; ಬಿಗಿಯಾಗು; ಸೇರಿಕೊ; ಅಂಟಿಕೊ; ಕಚ್ಚಿಕೊ: door will not fasten ಬಾಗಿಲು ಬಿಗಿಯಾಗಿ ಮುಚ್ಚಿಕೊಳ್ಳುವುದಿಲ್ಲ. this dress fastens down back ಈ ಉಡುಪಿಗೆ ಬೆನ್ನಮೇಲೆ ಗುಂಡಿಗಳಿವೆ; ಈ ಉಡುಪನ್ನು ಬೆನ್ನ ಮೇಲೆ ಬಿಗಿಸಿದೆ.

ಪದಗುಚ್ಛ

fasten quarrel upon (ಒಬ್ಬನ ಜೊತೆ) ಜಗಳ ತೆಗೆ, ಹೂಡು; ಕಾಲ್ಕೆರೆದುಕೊಂಡು ಜಗಳಕ್ಕೆ ಹೊರಡು.

ನುಡಿಗಟ್ಟು

fasten up(on)

  1. ಭದ್ರವಾಗಿ, ಪಟ್ಟಾಗಿ – ಹಿಡಿದುಕೊ: he fastened upon the idea ಅವನು ಆ ಅಭಿಪ್ರಾಯವನ್ನು ಪಟ್ಟಾಗಿ ಹಿಡಿದುಕೊಂಡ.
  2. (ಒಬ್ಬ ವ್ಯಕ್ತಿಯನ್ನು) ಆಯ್ದು ಮೇಲೆರಗು; ಗುರಿಯಿಟ್ಟು ಮೇಲೆ ಬೀಳು.
  3. (ನೆಪವನ್ನು) ತೆಗೆ; ಹೂಡು; ಹಿಡಿ.