See also 2fast  3fast
1fast ಹಾಸ್ಟ್‍
ಸಕರ್ಮಕ ಕ್ರಿಯಾಪದ

ಉಪವಾಸವಿರಿಸು; ಆಹಾರ ಕೊಡದಿರು: the patient is fasted ರೋಗಿಯನ್ನು ಉಪವಾಸವಿರಿಸಲಾಗಿದೆ.

ಅಕರ್ಮಕ ಕ್ರಿಯಾಪದ
  1. ಉಪವಾಸ ಮಾಡು; ವ್ರತಾಚರಣೆ ಯಾ ದುಃಖಸೂಚನೆಗಾಗಿ ಎಲ್ಲಾ ಬಗೆಯ ಯಾ ಕೆಲವು ಬಗೆಯ ಆಹಾರ ಸೇವಿಸದಿರು, ತ್ಯಜಿಸು: fasting day ಉಪವಾಸದ ದಿನ.
  2. ಅನ್ನಾಹಾರ ಬಿಡು; ಉಪವಾಸವಿರು; ನಿರಾಹಾರಿಯಾಗಿರು.
See also 1fast  3fast
2fast ಹಾಸ್ಟ್‍
ನಾಮವಾಚಕ
  1. ಉಪವಾಸಾಚರಣೆ; ಉಪೋಷಣ; ಲಂಘನ.
  2. ಉಪವಾಸದ, ನಿರಾಹಾರದ ದಿನ; ನಿರಾಹಾರ ಕಾಲ.
  3. ಉಪವಾಸವಿರುವುದು; ಅನ್ನಾಹಾರ ಬಿಡುವುದು.
ಪದಗುಚ್ಛ

break one’s fast ಉಪವಾಸ ಮುಗಿಸು; (ಮುಖ್ಯವಾಗಿ ಬೆಳಗಿನ) ಉಪಾಹಾರ ತೆಗೆದುಕೊ.

See also 1fast  2fast
3fast ಹಾಸ್ಟ್‍
ಗುಣವಾಚಕ
  1. ಭದ್ರವಾದ; ಬಿಗಿಯಾದ; ಗಟ್ಟಿಯಾದ; ದೃಢವಾದ; ಸ್ಥಿರವಾದ; ಭದ್ರವಾಗಿ, ಗಟ್ಟಿಯಾಗಿ, ಬಿಗಿಯಾಗಿ – ಬಂಧಿಸಿದ: stake fast in the ground ನೆಲದಲ್ಲಿ, ಭದ್ರವಾಗಿ ನೆಟ್ಟ ದಸಿ ಯಾ ಗೂಟ.
  2. ವೇಗವಾದ; ವೇಗದಿಂದ ಚಲಿಸುವ; ಶೀಘ್ರಗಾಮಿ; ಬಿರುಸಿನ; ಶೀಘ್ರಚಲನೆಯನ್ನುಂಟುಮಾಡುವ ಯಾ ಅದಕ್ಕೆ ಎಡೆಕೊಡುವ.
  3. (ಕ್ರಿಕೆಟ್‍ ಪಿಚ್ಚು, ಟೆನಿಸ್‍ಕೋರ್ಟು, ಗಾಲ್ಫ್‍ಮೈದಾನ, ಮೊದಲಾದವುಗಳ ವಿಷಯದಲ್ಲಿ) ವೇಗದ; ಚೆಂಡು ಬೇಗ ಪುಟ ನೆಗೆಯುವ ಯಾ ವೇಗವಾಗಿ ಚಲಿಸುವ.
  4. (ಗಡಿಯಾರದ ವಿಷಯದಲ್ಲಿ) ಮುಂದೆ ಹೋಗುವ; ಮುಂದೆ ಓಡುವ; ಮುಂದಿನ ಸಮಯವನ್ನು ತೋರಿಸುವ.
  5. (ವ್ಯಕ್ತಿಯ ವಿಷಯದಲ್ಲಿ) ಅನೀತಿಯ; ಶೀಲಗೆಟ್ಟ; ವ್ಯಭಿಚಾರಿ; ದುರ್ವ್ಯಸನಿಯಾದ.
  6. (ಹೋಟೋಗ್ರಾಹಿಕ್‍ ಫಲಕದ ವಿಷಯದಲ್ಲಿ) ಅಲ್ಪಕಾಲ ಮಾತ್ರ ಬೆಳಕಿಗೆ ಒಡ್ಡಬೇಕಾದ.
  7. (ಹೋಟೋಗ್ರಾಹಿಕ್‍ ಫಲಕದ ವಿಷಯದಲ್ಲಿ) ದೊಡ್ಡ ರಂಧ್ರವಿರುವ ; ಅಲ್ಪಕಾಲದಲ್ಲಿ ಬಹಳ ಬೆಳಕನ್ನು ಒಳಕ್ಕೆ ಬಿಡುವ.
ಪದಗುಚ್ಛ
  1. a fast prisoner ಕಟ್ಟು ಕೈದಿ; ಬಂಧಿತ ಸೆರೆಯಾಳು, ಕೈದಿ.
  2. fast asleep ಗಾಢ ನಿದ್ರೆಯಲ್ಲಿ.
  3. fast colour ಮಾಸದ ಬಣ್ಣ; ಗಟ್ಟಿ ಬಣ್ಣ; ಒಗೆದರೂ ಹೋಗದ ಬಣ್ಣ.
  4. fast friend, or friendship ಗಾಢ, ದೃಢ ಸ್ನೇಹಿತ ಯಾ ಸ್ನೇಹ.
  5. make fast ಬಿಗಿ; ಭದ್ರಪಡಿಸು; ಬಿಗಿಯಾಗಿ ಬಂಧಿಸು; ಭದ್ರವಾಗಿ ಕಟ್ಟು.
  6. take fast hold of ಬಿಗಿಯಾಗಿ ಯಾ ಭದ್ರವಾಗಿ ಹಿಡಿದುಕೊ.
ನುಡಿಗಟ್ಟು
  1. $^1$hard and fast.
  2. play fast and loose
    1. ಕರ್ತವ್ಯವನ್ನು ಕಡೆಗಣಿಸು; ಬೇಜವಾಬ್ದಾರಿಯಿಂದ ವರ್ತಿಸು; ಬೇಕಾಬಿಟ್ಟಿ ಮಾಡು: play fast and loose with someone else’s money ಇನ್ನೊಬ್ಬರ ಹಣವನ್ನು ಬೇಕಾಬಿಟ್ಟಿ ಖರ್ಚುಮಾಡು.
    2. ಸ್ಥಿರವಾಗಿಲ್ಲದಿರು; ದೃಢವಾಗಿರದಿರು; ಚಂಚಲವಾಗಿರು; ಪದೇಪದೇ – ಬದಲಾಯಿಸುತ್ತಿರು, ವ್ಯತ್ಯಾಸವಾಗುತ್ತಿರು.
  3. pull a fast one (ಆಡುಮಾತು) ಮೋಸಮಾಡು; ದಗಾಹಾಕು; ಕಣ್ಣಿಗೆ ಮಣ್ಣೆರಚು.
ಕ್ರಿಯಾವಿಶೇಷಣ

( ತರರೂಪ faster, ತಮರೂಪ fastest).

  1. ದೃಢವಾಗಿ; ಗಟ್ಟಿಯಾಗಿ; ಭದ್ರವಾಗಿ; ಗಾಢವಾಗಿ; ಬಿಗಿಯಾಗಿ; ಅಲ್ಲಾಡದಂತೆ; ಸ್ಥಿರವಾಗಿ: stand, sit, stick fast ಭದ್ರವಾಗಿ ನಿಲ್ಲು, ಕೊಡು, ಅಂಟಿಕೊ.
  2. (ಕಾವ್ಯಪ್ರಯೋಗ, ಪ್ರಾಚೀನ ಪ್ರಯೋಗ) ಪಕ್ಕದಲ್ಲಿಯೇ; ಹತ್ತಿರದಲ್ಲಿಯೇ; ಬೆನ್ನಹಿಂದೆಯೇ: a mill fast without the town ಪಟ್ಟಣದ ಹೊರಗಡೆ ಹತ್ತಿರದಲ್ಲಿಯೇ ಇದ್ದ ಗಿರಣಿ.
  3. ಸರಸರನೆ; ಒಂದರ ಹಿಂದೆ ಇನ್ನೊಂದು; ಒಂದಾದ ಮೇಲೊಂದರಂತೆ; ಬೇಗಬೇಗನೆ; ಜಾಗ್ರತೆಯಾಗಿ; ತ್ವರಿತವಾಗಿ: my tears fell fast ನನ್ನ ಕಣ್ಣೀರು (ಒಂದರ ಮೇಲೊಂದು) ತಟತಟನೆ ಉದುರಿತು.
  4. (ನಿದ್ರೆಯ ವಿಷಯದಲ್ಲಿ) ಗಾಢವಾಗಿ; ಆಳವಾಗಿ.
ನುಡಿಗಟ್ಟು
  1. fast bind fast find ಕಳೆಯಬಾರದ್ದನ್ನು ಭದ್ರವಾಗಿಡು; ಭದ್ರವಾಗಿಟ್ಟದ್ದು ಭದ್ರವಾಗಿ ಉಳಿದೀತು.
  2. live fast ದುರ್ಮಾರ್ಗದಲ್ಲಿ ಬದುಕು ಕಳೆ; ದುರ್ವ್ಯಸನದ ಬದುಕನ್ನು ಬಾಳು; ದುರ್ವ್ಯಸನಗಳಿಗೆ ಸಿಕ್ಕಿ ಶಕ್ತಿಯನ್ನೂ ಆಯುಸ್ಸನ್ನೂ ಕಳೆದುಕೊ.
  3. stand fast
    1. ಚಲಿಸದಿರು; ಸ್ಥಿರವಾಗಿರು.
    2. ಹಿಮ್ಮೆಟ್ಟದಿರು; ಹಿಂಜರಿಯದಿರು.
    3. ಮಣಿಯದಿರು; ಶರಣಾಗದಿರು.
  4. stick fast
    1. = ನುಡಿಗಟ್ಟು \((3)\).
    2. ಮುಂದುವರಿಯಲಾಗದಿರು; ಪ್ರಗತಿ ಗಳಿಸದಿರು; ಮುಂದೆ ಹೋಗಬಾರದಿರು.