See also 2fashion
1fashion ಹ್ಯಾಷನ್‍
ಸಕರ್ಮಕ ಕ್ರಿಯಾಪದ
  1. ರೂಪಿಸು; ಆಕಾರಕೊಡು; ರಚಿಸು; ಮಾಡು; ನಿರ್ಮಿಸು: fashion the clay into a bowl ಜೇಡಿಮಣ್ಣಿಗೆ ಬೋಗುಣಿಯ ಆಕಾರ ಕೊಡು.
  2. (ತತ್ತ್ವ ಮೊದಲಾದವನ್ನು) ಬದಲಾಯಿಸು; ಮಾರ್ಪಡಿಸು; ಅಳವಡಿಸು; ಹೊಂದಿಸು: doctrines fashioned to the varying hour ಬದಲಾಗುವ ಕಾಲಕ್ಕೆ ತಕ್ಕಂತೆ ಹೊಂದಿಸಿದ ತತ್ತ್ವಗಳು.
  3. ಕಾಲಿನ ಆಕಾರಕ್ಕೆ ಹೊಂದುವಂತೆ ಕಾಲುಚೀಲವನ್ನು ರಚಿಸು ಯಾ ತಯಾರಿಸು.
See also 1fashion
2fashion ಹ್ಯಾಷನ್‍
ನಾಮವಾಚಕ
  1. (ಯಾವುದರದೇ) ಮಾಟ; ಮಾದರಿ; ನಮೂನೆ; ಆಕಾರ; ಪ್ರಕಾರ; ಶೈಲಿ; ರೀತಿ; ಬಗೆ; ಲಕ್ಷಣ: crab fashion ನಳ್ಳಿ ಮಾದರಿ.
  2. (ಮುಖ್ಯವಾಗಿ ಉಡುಪಿನ ವಿಷಯದಲ್ಲಿ) ಹ್ಯಾಷನ್ನು; ಬಳಕೆಯಲ್ಲಿರುವ – ಪದ್ಧತಿ, ರೀತಿ, ರೂಢಿ, ಶೈಲಿ, ಷೋಕು.
  3. (ಸಮಾಜದ ಉನ್ನತ ವರ್ಗದವರ ನಡೆವಳಿಯ) ಸಂಪ್ರದಾಯ; ಮರ್ಯಾದೆ; ರೂಢಿ; ಪದ್ಧತಿ.
  4. ವಿಧಾನ; ರೀತಿ.
  5. ಹ್ಯಾಷನ್‍ ವರ್ಗ; ಉಡುಪು, ವ್ಯವಹಾರ, ಮೊದಲಾದವುಗಳಲ್ಲಿ ಮಾದರಿ ಸ್ಥಾಪಿಸುವ ಸಮಾಜದ ಉಚ್ಚವರ್ಗದವರು.
ಪದಗುಚ್ಛ
  1. after the fashion of ಆ ರೀತಿಯಲ್ಲಿ; ಆ ಮಾದರಿಯಲ್ಲಿ; ಹಾಗೆ; ಅಂತೆ: a painting after the fashion of Rembrandt ರೆಂಬ್ರಾಂಟ್‍ನ ಮಾದರಿಯ ವರ್ಣಚಿತ್ರ.
  2. be all the fashion (ಉಡುಪು, ವರ್ತನೆ, ಮೊದಲಾದವುಗಳಲ್ಲಿ) ಬಹಳ ಜನಪ್ರಿಯವಾಗಿರು.
  3. be in the fashion ಹ್ಯಾಷನ್‍ ಅನುಸರಿಸು; ಹ್ಯಾಷನ್ನಾಗಿರು; ಉಡುಪು, ವರ್ತನೆ ಮೊದಲಾದವುಗಳಲ್ಲಿ ಬೇರೆಯವರು (ಮುಖ್ಯವಾಗಿ ಉಚ್ಚವರ್ಗದವರು) ಮಾಡುವಂತೆ ಮಾಡು.
  4. come into fashion ಹ್ಯಾಷನ್ನಾಗು; ಬಳಕೆಗೆ ಬರು; ಜನಪ್ರಿಯವಾಗು.
  5. go out of fashion ಹ್ಯಾಷನ್ನಳಿ; ಬಳಕೆ ತಪ್ಪಿಹೋಗು; ಜನಗಳಿಗೆ ಮೆಚ್ಚಿಕೆಯಾಗದಿರು.
  6. in (the) fashion ವ್ಯವಹಾರದಲ್ಲಿರುವ; ರೂಢಿಯಲ್ಲಿರುವ; ಚಾಲ್ತಿಯಲ್ಲಿರುವ.
  7. of fashion (ಮುಖ್ಯವಾಗಿ ಉಡುಪು ಮತ್ತು ನಡೆನುಡಿಗಳಲ್ಲಿ ಕಂಡುಬರುವಂತೆ) ಸಮಾಜದ ಉನ್ನತವರ್ಗದ; ಮೇಲ್ತರಗತಿಯ; ಮೇಲುವರ್ಗದ; ಉಚ್ಚವರ್ಗದ: a man of fashion ಉಚ್ಚವರ್ಗದ ಪುರುಷ. a woman of fashion ಉನ್ನತವರ್ಗದ ಸ್ತ್ರೀ.
  8. out of the fashion ರೂಢಿಯಳಿದ; ಚಾಲ್ತಿ ತಪ್ಪಿದ; ಬಳಕೆ ತಪ್ಪಿದ; ರೂಢಿ ತಪ್ಪಿಹೋದ
  9. set the fashion
    1. ಮಾದರಿಯಾಗು; ಹ್ಯಾಷನ್ನುಗಳನ್ನು ಬದಲಾಯಿಸುವಲ್ಲಿ ಯಾ ಹೊಸ ಹ್ಯಾಷನ್ನುಗಳನ್ನು ಬಳಕೆಗೆ ತರುವಲ್ಲಿ ದೃಷ್ಟಾಂತವಾಗು.
    2. ಹೊಸ ಶೈಲಿ, ಮಾದರಿ ಯಾ ಸಂಪ್ರದಾಯ – ಹಾಕು, ಸ್ಥಾಪಿಸು; ಹೊಸ ಶೈಲಿ ಮೊದಲಾದವನ್ನು ಬಳಕೆಗೆ ತರು.
  10. the fashion
    1. ಹ್ಯಾಷನ್ನು; (ಉಚ್ಚ ವರ್ಗದವರ) ಕಾಲಾನುಗುಣವಾಗಿ ಅನುಸರಿಸುವ ಸದ್ಯದ ವರ್ತನೆಗಳು, ರೀತಿರಿವಾಜುಗಳು, ಸಂಪ್ರದಾಯಗಳು, ನಡೆನುಡಿಗಳು.
    2. ಸರ್ವಾದರಣೀಯ: (ಶೈಲಿ, ರೂಪ, ಮೊದಲಾದವುಗಳನ್ನು ಕಂಡು) ಎಲ್ಲರೂ ಮೆಚ್ಚುವ, ಚರ್ಚಿಸುವ ವ್ಯಕ್ತಿ ಯಾ ವಸ್ತು: I should not be tempted to marry him, if he were not the fashion ಅವನು ಇಷ್ಟೊಂದು ಸರ್ವಾದರಣೀಯನಾಗಿಲ್ಲದಿದ್ದರೆ ನಾನವನನ್ನು ಮದುವೆಯಾಗಬೇಕೆಂಬ ಮೋಹಕ್ಕೊಳಗಾಗುತ್ತಿರಲಿಲ್ಲ.
ನುಡಿಗಟ್ಟು
  1. after a fashion ಹೇಗೋ; ಏನೋ; ಎಂತೋ; ಒಂದು ರೀತಿಯಲ್ಲಿ (ತೃಪ್ತಿಕರವಲ್ಲದ ಎಂಬರ್ಥದಲ್ಲಿ): he is an artist after a fashion ಅವನೂ ಒಬ್ಬ ಕಲಾವಿದ; ಅವನೂ ಒಂದು ರೀತಿಯಲ್ಲಿ ಕಲಾವಿದ.
  2. in a fashion = ನುಡಿಗಟ್ಟು(1)