See also 2farther
1farther ಹಾರ್ದರ್‍
ಕ್ರಿಯಾವಿಶೇಷಣ
  1. ದೂರ; ದೂರಕ್ಕೆ; ದೂರವಾಗಿ: I will see you farther first ದೂರ ತೊಲಗು (ಬೇಡಿಕೆಯನ್ನು “ನೀನು ನರಕಕ್ಕೆ ಹೋಗು”, “ಹಾಳಾಗಿ ಹೋಗು” ಎಂಬ ಮಾತನ್ನು ಸೌಮ್ಯೋಕ್ತಿಯಲ್ಲಿ ಹೇಳುವಾಗ).
  2. ಮತ್ತು ; ಇದೂ ಅಲ್ಲದೆ; ಜತೆಗೆ; ಮಾತ್ರವಲ್ಲದೆ (ಈಗ ಸಾಮಾನ್ಯವಾಗಿ further).
  3. ಇನ್ನೂ ಕೊಂಚ ಮುಂದೆ; ತುಸು ಮುಂದಕ್ಕೆ: if he could go a little farther ಅವನು ಇನ್ನೂ ತುಸ ಮುಂದುವರಿದರೆ.
  4. ಇನ್ನೂ ಹೆಚ್ಚಿಗೆ; ಇನ್ನೂ ಹೆಚ್ಚಾಗಿ; ಇನ್ನಷ್ಟು ಹೆಚ್ಚಾಗಿ; ಇನ್ನೂ ಹೆಚ್ಚು ಪ್ರಮಾಣದಲ್ಲಿ: we do not extend the idea any farther ಆ ವಿಚಾರವನ್ನು ಇನ್ನು ಹೆಚ್ಚಾಗಿ ನಾವು ಬೆಳೆಸುವುದಿಲ್ಲ.
See also 1farther
2farther ಹಾರ್ದರ್‍
ಗುಣವಾಚಕ

(far ಎನ್ನುವುದರ ತರರೂಪರೂಪ).

  1. ಹೆಚ್ಚು ವಿಸ್ತರಿಸಿದ; (ಈಗಿರುವುದಕ್ಕಿಂತ) ಹೆಚ್ಚುದೂರ – ಹೋಗುವ, ವ್ಯಾಪಿಸುವ.
  2. ಮುಂದಕ್ಕೆ ಸೇರಿಸಿದ; ತರುವಾಯದ; ಅನಂತರದ; ಮುಂದಿನ: a farther volume ಮುಂದಿನ ಸಂಪುಟ.
  3. ಇನ್ನೂ ಹೆಚ್ಚಿನ; ಹೆಚ್ಚಾದ; ಅಧಿಕವಾದ: have no farther illusions about it ಅದರ ವಿಚಾರವಾಗಿ ಇನ್ನೂ ಹೆಚ್ಚಿನ ಭ್ರಮೆ ಬೇಡ.
  4. ಆಚಿನ; ಹೆಚ್ಚು ದೂರದ: the farther room ಆಚೆಕಡೆ ಕೊಠಡಿ; ಆಚಿನ ಖೋಲಿ.