See also 2farewell  3farewell
1farewell ಹೇರ್‍ವೆಲ್‍
ಭಾವಸೂಚಕ ಅವ್ಯಯ

(ನಿನಗೆ) ಒಳ್ಳೆಯದಾಗಲಿ! ದೇವರು ಒಳ್ಳೆಯದು ಮಾಡಲಿ! ಸ್ವಸ್ತಿ! ಶುಭವಾಗಲಿ!

ಪದಗುಚ್ಛ

farewell to ಅದಕ್ಕೆ ನಮಸ್ಕಾರ; ಅದರ ಗೊಡವೆ ಬೇಡ; ಅದರ ವಿಷಯ ಸಾಕು.

See also 1farewell  3farewell
2farewell ಹೇರ್‍ವೆಲ್‍
ನಾಮವಾಚಕ
  1. ಬೀಳ್ಕೊಡುಗೆ; ಬೀಳ್ಕೊಳ್ಳುವುದು; ವಿದಾಯ.
  2. ಹೋಗಿಬರುತ್ತೇನೆಂದು ಹೇಳುವುದು; (ಒಬ್ಬರನ್ನೊಬ್ಬರು ಅಗಲುವಾಗ ಹೇಳುವ) ಆಶಾಸನ; ಶುಭನುಡಿ; ಸ್ವಸ್ತಿವಾಚನ.
  3. (ಪ್ರಾಂತೀಯ ಪ್ರಯೋಗ) ಏನನ್ನಾದರೂ ತಿಂದ ಮೇಲೆ ಯಾ ಕುಡಿದ ಮೇಲೆ ಉಳಿಯುವ ರುಚಿ: the coffee left a good farewell in the mouth ಬಾಯಲ್ಲಿ ಕಾಹಿ ಒಳ್ಳೆಯ ರುಚಿಯನ್ನುಳಿಸಿ ಹೋಯಿತು.
See also 1farewell  2farewell
3farewell ಹೇರ್‍ವೆಲ್‍
ಗುಣವಾಚಕ
  1. ಬೀಳ್ಕೊಡುಗೆಯ; ವಿದಾಯದ; ಅಗಲಿಕೆಯ: a farewell party ಬೀಳ್ಕೊಡಿಗೆಯ ಔತಣ ಸಮಾರಂಭ.
  2. ಕೊನೆಯ; ಅಂತಿಮ: a farewell performance ಕೊನೆಯ ಕಚೇರಿ ಯಾ ಪ್ರದರ್ಶನ.