See also 2farce
1farce ಹಾರ್ಸ್‍
ನಾಮವಾಚಕ
  1. ನಗೆನಾಟಕ; ಪ್ರಹಸನ; ನಗು ಹುಟ್ಟಿಸುವುದಕ್ಕಾಗಿಯೇ ಬರೆದ, ಕೆಲವೊಮ್ಮೆ ಹುಚ್ಚು ಹುಚ್ಚಾದ ಅವಾಸ್ತವಿಕ ಘಟನೆಗಳಿರುವ ನಾಟಕ ಕೃತಿ.
  2. ಲಘುಹಾಸ್ಯಭರಿತ ನಾಟಕ ಪ್ರಕಾರ.
  3. ಹಾಸ್ಯಾಸ್ಪದವಾದ ವ್ಯರ್ಥ ನಡೆವಳಿ; ನಗೆಪಾಟಲಾದ ನಡೆವಳಿಕೆ.
  4. ಬರಿಯ ನಟನೆ; ವೇಷ; ತೋರ್ಕೆ; ನೆವ; ಸೋಗು; ಅಣಕ; ಲೇವಡಿ; ಗೇಲಿ: the prisoner’s trial was a farce ಸೆರೆಯಾಳಿನ ವಿಚಾರಣೆ ಕೇವಲ ಒಂದು ಲೇವಡಿಯಾಗಿತ್ತು.
  5. ಮಾಂಸದ ಹೂರಣ.
See also 1farce
2farce ಹಾರ್ಸ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ)

  1. (ಅಡುಗೆಯಲ್ಲಿ) ಒಗ್ಗರಿಸು; ಮಸಾಲೆ ಹಾಕು; ರುಚಿ ಕಟ್ಟಿಸು; ಒಗ್ಗರಣೆ, ಮಸಾಲೆ, ಮೊದಲಾದವುಗಳನ್ನು ಹಾಕಿ ರುಚಿಗೊಳಿಸು.
  2. (ಹೂರಣ ಮೊದಲಾದವನ್ನು) ತುಂಬು.
  3. (ರೂಪಕವಾಗಿ) (ಸಾಹಿತ್ಯಕ ಕೃತಿ, ಭಾಷಣಗಳ ವಿಷಯದಲ್ಲಿ) ಬಣ್ಣಕೊಡು; ಸ್ವಾರಸ್ಯ ಹೆಚ್ಚಿಸು; ರಸವತ್ತಾಗಿ ಮಾಡು; ಮಸಾಲೆಹಾಕು; ಮುಖ್ಯವಾಗಿ ಚಮತ್ಕಾರದ ವಿಷಯಗಳನ್ನು ತುಂಬು.