See also 2family
1family ಹ್ಯಾಮಿಲಿ
ನಾಮವಾಚಕ
  1. ಕುಟುಂಬ; ಒಕ್ಕಲು; ಮನೆತನ; ಸಂಸಾರ; (ತಾಯಿತಂದೆಯರು, ಮಕ್ಕಳು, ಆಳುಕಾಳುಗಳು ಮೊದಲಾದ) ಒಂದು ಮನೆಯ ವ್ಯಕ್ತಿಗಳು.
  2. ಕುಟುಂಬವರ್ಗ; (ಒಟ್ಟಿಗೆ ಇರುವ ಯಾ ಇಲ್ಲದ) ತಂದೆತಾಯಿಗಳು ಮತ್ತು ಮಕ್ಕಳ ಸಮುದಾಯ.
  3. ಬಂಧುವರ್ಗ; ದಾಯಾದಿಗಳು; ರಕ್ತಸಂಬಂಧ ಯಾ ಬೇರೆ ತೆರನ ನಿಕಟ ಸಂಬಂಧದಿಂದ ಒಂದಾದ ಸಮಷ್ಟಿ.
  4. ಒಬ್ಬನ ಮಕ್ಕಳು; ಸಂತಾನ; ಸಂತತಿ.
  5. ವಂಶ; ಸಾಲು; ಪೀಳಿಗೆ; ಪಂಕ್ತಿ; ಕುಲ; ಮನೆತನ.
  6. ಜನಾಂಗ; ಜಾತಿ; ಬುಡಕಟ್ಟು; ಗೋತ್ರ; ಕುಲ; ಒಂದೇ ಮೂಲದಿಂದ ಹುಟ್ಟಿಬಂದ ಜನಗಳ ಒಟ್ಟು ಸಮುದಾಯ.
  7. ಕುಟುಂಬ:
    1. ರಾಜಕೀಯ ಯಾ ಧಾರ್ಮಿಕ ಸಂಬಂಧಗಳಿಂದ ಒಂದುಗೂಡಿದ ಜನರು ಯಾ ಜನಾಂಗಗಳು.
    2. ಸಮಾನ ಲಕ್ಷಣಗಳಿಂದ ವಿಶಿಷ್ಟತೆ ಪಡೆದಿರುವ ವಸ್ತು ಸಮುದಾಯ.
  8. (ಜೀವವಿಜ್ಞಾನ) ವಂಶ; ಪರಸ್ಪರ ಸಂಬಂಧವುಳ್ಳ ಕುಲ(genus)ಗಳ ಗುಂಪು ಹಾಗೂ ಗಣ(order)ದ ಒಂದು ವಿಭಾಗ.
  9. (ಭಾಷಾಶಾಸ್ತ್ರ) ವರ್ಗ; ಕುಲ; ಸಮಾನ ಮೂಲಭಾಷೆಯಿಂದ ಜನಿಸಿದ ಭಾಷೆಗಳ ಸಮುದಾಯ: the Dravidian family of languages ದ್ರಾವಿಡ ಭಾಷಾವರ್ಗ.
  10. ವರ್ಗ; ಸಮುದಾಯ; ಸಮೂಹ; ಒಂದೇ ರೀತಿಯ ಯಾ ಸಮಾನ ಲಕ್ಷಣಗಳನ್ನು ಹೊಂದಿರುವ ವಸ್ತುಗಳ ಗುಂಪು.
  11. (ಗಣಿತ) ವಕ್ರರೇಖಾವರ್ಗ; ಒಂದು ಪರಿಮಾಣವನ್ನು ಬದಲಾಯಿಸುವುದರಿಂದ ಬರುವ ವಕ್ರರೇಖೆಗಳು ಮೊದಲಾದವುಗಳ ಸಮೂಹ.
ಪದಗುಚ್ಛ

happy family ಸುಖಸಂಸಾರ; ಒಂದೇ ಬೋನಿನಲ್ಲಿರುವ ಬೇರೆ ಬೇರೆ ಜಾತಿಯ ಪ್ರಾಣಿಗಳು.

ನುಡಿಗಟ್ಟು
  1. in a family way
    1. ಸಲಿಗೆಯಿಂದ; ಉಪಚಾರ ಹೇಳದೆ ಯಾ ಹೇಳಿಸಿಕೊಳ್ಳದೆ; ಅನೌಪಚಾರಿಕವಾಗಿ.
    2. = ನುಡಿಗಟ್ಟು \((2)\).
  2. in the family way (ಹೆಂಗಸಿನ ವಿಷಯದಲ್ಲಿ) ಬಸಿರಾಗಿರುವ; ಗರ್ಭಿಣಿಯಾಗಿರುವ.
  3. of good family ಒಳ್ಳೆಯ ಕುಲದ; ಸತ್ಕುಲದ; ಕುಲೀನ; ಸದ್ವಂಶದ.
See also 1family
2family ಹ್ಯಾಮಿಲಿ
ಗುಣವಾಚಕ

ಕೌಟುಂಬಿಕ; ವಾಂಶಿಕ; ಕುಟುಂಬದ; ಕುಟುಂಬಕ್ಕೆ ಸಂಬಂಧಿಸಿದ; ಕುಟುಂಬದ ಲಕ್ಷಣವಾದ: a family trait ವಂಶಲಕ್ಷಣ; ಕುಟುಂಬದ ಲಕ್ಷಣ.