familiarity ಹಮಿಲಿಆರಿಟಿ
ನಾಮವಾಚಕ
  1. ಬಳಕೆ; ನಿಕಟಸಂಬಂಧ; ಹತ್ತಿರದ ಸಂಬಂಧ.
  2. (ವ್ಯಕ್ತಿ ಯಾ ವಿಷಯದಲ್ಲಿ) ಅನ್ಯೋನ್ಯತೆ; ಹೊಕ್ಕು ಬಳಕೆ; ಆಪ್ತ ಯಾ ಆತ್ಮೀಯ ಸಂಬಂಧ.
  3. (ಯಾವುದೇ ವಿಷಯದಲ್ಲಿ) ಸುಪರಿಚಯ; ನಿಕಟ ಪರಿಚಯ; ಚೆನ್ನಾಗಿ ತಿಳಿದಿರುವುದು.
  4. ಮೈನಂಟು; ಪ್ರಣಯದ ಯಾ ಲೈಂಗಿಕ ಸಂಬಂಧ.
  5. (ಬಹುವಚನದಲ್ಲಿ) ಲಲ್ಲೆ; ಮುದ್ದಾಟ, ಆಲಿಂಗನ, ಮೊದಲಾದವುಗಳು.
  6. ಸಲಿಗೆ; ಸದರ; ಅನೌಪಚಾರಿಕ ವರ್ತನೆ; ತನಗಿಂತಲೂ ಹಿರಿಯ ದರ್ಜೆಯವರನ್ನಾಗಲಿ ಕಿರಿಯ ದರ್ಜೆಯವರನ್ನಾಗಲಿ ಸಮಾನರಂತೆ ಕಾಣುವುದು.
  7. (ಬಹುವಚನದಲ್ಲಿ) ಅತಿ ಸಲಿಗೆ; ಅತಿ ಸದರ; ಮರ್ಯಾದೆಯನ್ನು ಪಾಲಿಸದ ವರ್ತನೆ.
ನುಡಿಗಟ್ಟು

familiarity breeds contempt ಅತಿ ಸಲಿಗೆ ಅನಾದರಕ್ಕೆ ಕಾರಣ; ಅತಿಪರಿಚಯ ಅವಜ್ಞೆಗೆ ಕಾರಣ.