See also 2familiar
1familiar ಹಮಿಲ್ಯರ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ಕುಟುಂಬದ; ಸಂಸಾರದ; ಗೃಹದ.
  2. ಆಪ್ತ; ಆಪ್ತ ಸ್ನೇಹವುಳ್ಳ; ಆತ್ಮೀಯ; ತುಂಬ ಬಳಕೆಯ; ಹೊಕ್ಕುಬಳಕೆಯ.
  3. (ಯಾವುದೇ ವಿಷಯದಲ್ಲಿ) ಸುಪರಿಚಿತ ಪರಿಜ್ಞಾನವುಳ್ಳ; ಚೆನ್ನಾಗಿ ತಿಳಿದಿರುವ; ನಿಕಟ ಪರಿಚಯವಿರುವ: I am not familiar with that subject ನನಗೆ ಆ ವಿಷಯ ಚೆನ್ನಾಗಿ ಗೊತ್ತಿಲ್ಲ.
  4. ಸುಪರಿಚಿತ; ಚೆನ್ನಾಗಿ – ತಿಳಿದ, ಗೊತ್ತಿರುವ; ಹೊಸದೇನೂ ಅಲ್ಲದ: persons who are familiar to you ನಿನಗೆ ಚೆನ್ನಾಗಿ ತಿಳಿದಿರುವ ವ್ಯಕ್ತಿಗಳು, ಹೊಸಬರಲ್ಲದ ವ್ಯಕ್ತಿಗಳು.
  5. ಸಾಮಾನ್ಯ; ಸಾಧಾರಣ.
  6. ಬಳಕೆಯ; ಚಾಲ್ತಿಯ; ರೂಢಿಯ; ವಾಡಿಕೆಯ.
  7. ಅನೌಪಚಾರಿಕ; ಸಾಂಪ್ರದಾಯಿಕ ಉಪಚಾರದ ಯಾ ಮರ್ಯಾದೆ ಯಾ ನಿರ್ಬಂಧವಿಲ್ಲದ.
  8. ಸಲಿಗೆಯ; ಸದರದ.
  9. ಅತಿ ಸಲಿಗೆಯ; ಅತಿ ಸದರದ; ತಲೆಹರಟೆಯ; ಅಧಿಕಪ್ರಸಂಗಿತನದ.
  10. ಪಳಗಿದ; ಸಾಧು.
  11. ಲೈಂಗಿಕ ಸಂಬಂಧವುಳ್ಳ; ಪ್ರಣಯ ಪರಿಚಯವುಳ್ಳ.
See also 1familiar
2familiar ಹಮಿಲ್ಯರ್‍
ನಾಮವಾಚಕ
  1. (ರೋಮನ್‍ ಕ್ಯಾಥೊಲಿಕ್‍ ಚರ್ಚು) ಆಪ್ತಸೇವಕ; ಪೋಪರ ಯಾ ಬಿಷಪ್ಪರ ಮನೆಯಲ್ಲಿ ಕೆಲವು ಬಗೆಯ ಸೇವೆ ಮಾಡುವವನು.
  2. ಆಪ್ತ – ಮಿತ್ರ, ಸ್ನೇಹಿತ.
  3. ಆಪ್ತಸಹೋದ್ಯೋಗಿ ಯಾ ಸಹವರ್ತಿ.
  4. ಆಪ್ತಭೂತ; ನೆಚ್ಚಿನ ಬೇತಾಳ; ಮಂತ್ರವಾದಿ, ಮಾಟಗಾತಿ, ಮೊದಲಾದವರ ವಶವರ್ತಿಯಾದ ಭೂತ.