falter ಹಾರ್‍
ಸಕರ್ಮಕ ಕ್ರಿಯಾಪದ

ತಡವರಿಸುತ್ತಾ ನುಡಿ; ತಡೆದು ತಡೆದು ಉಚ್ಚರಿಸು; ತೊದಲುತ್ತ ಹೇಳು: “I am thine” she faltered “ನಾನು ನಿನ್ನವಳು”, ಎಂದು ಅವಳು ತೊದಲುತ್ತಾ ನುಡಿದಳು. falter an apology ತಡವರಿಸುತ್ತಾ ಕ್ಷಮೆ ಕೇಳು.

ಅಕರ್ಮಕ ಕ್ರಿಯಾಪದ
  1. ಎಡವು; ಮುಗ್ಗರಿಸು; ತತ್ತರಿಸು.
  2. ತೂರಾಡು; ಹೊಂಗಾಡು; ತೂರಾಡುತ್ತಾ ನಡೆ.
  3. ತೊದಲು; ತಡವರಿಸುತ್ತ ಮಾತನಾಡು.
  4. ಹಿಂದುಮುಂದು ನೋಡು; ಅನುಮಾನಿಸು.
  5. ಧೈರ್ಯಗುಂದು; ಎದೆಗೆಡು.
  6. (ಕಾರ್ಯ, ಉದ್ದೇಶ, ಮೊದಲಾದವುಗಳಲ್ಲಿ) ಹಿಂಜರಿ; ಹಿಂದೆಗೆ.
ಪದಗುಚ್ಛ

falter out ತೊದಲುತ್ತಾ ಉಚ್ಚರಿಸು; ತೊದಲುಮಾತಿನಲ್ಲಿ ಹೇಳು; ತಡವರಿಸುತ್ತಾ ಹೇಳು.