falsify ಹಾಲ್ಸಿಹೈ
ಸಕರ್ಮಕ ಕ್ರಿಯಾಪದ
  1. (ದಸ್ತಾವೇಜನ್ನು) ಮೋಸದಿಂದ – ಬದಲಾಯಿಸು. ವ್ಯತ್ಯಾಸಮಾಡು, ತಿದ್ದು.
  2. ತಪ್ಪಾಗಿ ನಿರೂಪಿಸು.
  3. ತಪ್ಪಾಗಿಸು; ತಪ್ಪಾಗುವಂತೆ ಮಾಡು: falsifying the balance by deceit ತಕ್ಕಡಿಯನ್ನು ಮೋಸದಿಂದ ತಪ್ಪಾಗಿ ಮಾಡುವುದು.
  4. ಸುಳ್ಳೆಂದು ತೋರಿಸು.
  5. ವಿಕಾರಗೊಳಿಸು; ವಿಕೃತಗೊಳಿಸು; ಆಕಾರಗೆಡಿಸು: Spenser falsified accentuation to adapt it to his metre ತನ್ನ ಛಂದಸ್ಸಿಗೆ ಹೊಂದಿಸುವುದಕ್ಕಾಗಿ ಸ್ಪೆನ್ಸರನು ಉಚ್ಚಾರಣೆಯ ರೀತಿಯನ್ನೇ ವಿಕಾರಗೊಳಿಸಿದ.
  6. (ಭರವಸೆ, ಭಯ, ಮೊದಲಾದವನ್ನು) ಹುಸಿಮಾಡು; ಸುಳ್ಳುಮಾಡು; ಭಂಗಗೊಳಿಸು.