falsification ಹಾಲ್ಸಿಹಿಕೇಸನ್‍
ನಾಮವಾಚಕ
  1. ಬನಾವಟು (ಮಾಡುವುದು); ಖೋಟಾ (ಮಾಡುವುದು).
  2. (ದಸ್ತಾವೇಜು, ತೂಕ, ಅಳತೆ, ಲೆಕ್ಕಪತ್ರ, ಮೊದಲಾದವನ್ನು) ಮೋಸದಿಂದ – ಬದಲಾಯಿಸುವುದು. ವ್ಯತ್ಯಾಸಮಾಡುವುದು, ತಿದ್ದುವುದು.
  3. ಸುಳ್ಳು ಹೇಳಿಕೆ ಕೊಡುವುದು; ವಾಸ್ತವಾಂಶಕ್ಕೆ ಭಿನ್ನವಾಗಿ ಯಾ ವಿರುದ್ಧವಾಗಿ ಹೇಳಿಕೆ ಕೊಡುವುದು, ನಿರೂಪಿಸುವುದು.
  4. ಖೋಟಾ ಸೃಷ್ಟಿ ಮಾಡುವುದು; ಖೋಟಾ ತಯಾರಿ.
  5. (ಯಾವುದೇ ವಿಷಯ) ನಿಷ್ಕಾರಣವೆಂದು ಸಾಧಿಸುವುದು; ನಿರಾಧಾರವೆಂದು ತೋರಿಸುವುದು.