fallacy ಹ್ಯಾಲಸಿ
ನಾಮವಾಚಕ
  1. ಕುತರ್ಕ; ತಪ್ಪು ನಿರ್ಣಯಕ್ಕೊಯ್ಯುವ ವಾದ; ನಿಜವಾಗಿ ಸರಿಯಲ್ಲದ, ಹೊರನೋಟಕ್ಕೆ ಸರಿಯಾಗಿರುವಂತೆ ಕಾಣಿಸುವ ವಾದ.
  2. (ತರ್ಕ) ಹೇತ್ವಾಭಾಸ; ತರ್ಕದೋಷ; ತರ್ಕಾಭಾಸ; ಸಿಲೋಜಿಸಮ್ಮಿನ ತರ್ಕವನ್ನು ಕೆಡಿಸುವ ದೋಷ.
  3. ಹೇತ್ವಾಭಾಸಗಳಲ್ಲಿ ಒಂದು ಬಗೆ.
  4. ಭ್ರಮೆ; ಭ್ರಾಂತಿ; ತಪ್ಪು ತಿಳಿವಳಿಕೆ; ತಪ್ಪಭಿಪ್ರಾಯ: that the earth is flat was at one time a popular fallacy ಭೂಮಿಯು ಚಪ್ಪಟೆಯಾಗಿದೆ ಎಂಬುದು ಒಂದು ಕಾಲದಲ್ಲಿ ಜನರ ಭ್ರಮೆಯಾಗಿತ್ತು.
  5. (ವಾದದ ಯಾ ನಂಬಿಕೆಗಳ)
    1. ಅಸಂಗತತೆ; ಅಸಂಬದ್ಧತೆ; ಅತಾರ್ಕಿಕತೆ; ಯುಕ್ತಿಯುಕ್ತವಾಗಿಲ್ಲದಿರುವಿಕೆ; ತರ್ಕಬದ್ಧವಾಗಿಲ್ಲದಿರುವಿಕೆ.
    2. ಭ್ರಾಮಕತೆ; ಭ್ರಾಂತಿಕಾರಕತೆ.
    3. ನಿರಾಶಾದಾಯಕತೆ.