See also 2fall
1fall ಹಾಲ್‍
ಕ್ರಿಯಾಪದ
(ಭೂತರೂಪ fell, ಭೂತಕೃದಂತ fallen).
ಸಕರ್ಮಕ ಕ್ರಿಯಾಪದ

(ಮರ, ಪ್ರಾಣಿ ಮೊದಲಾದವನ್ನು) ಬೀಳಿಸು; ಕೆಡವು; ಉರುಳಿಸು; ಬೀಳುವಂತೆ ಮಾಡು.

ಅಕರ್ಮಕ ಕ್ರಿಯಾಪದ
  1. ಕೆಳಗೆ ಬೀಳು; ಕೆಡೆ.
  2. ಹೊರಬೀಳು; ಹೊರಬರು; ಉದುರು; ಉದಿರು: this remark fell from him ಈ ಮಾತು ಅವನಿಂದ ಹೊರಬಿದ್ದಿತು.
  3. (ಪ್ರಾಣಿಗಳ, ಮರಿಗಳ ವಿಷಯದಲ್ಲಿ) ಹುಟ್ಟು: lambs fall ಕುರಿಮರಿಗಳು ಹುಟ್ಟುತ್ತವೆ.
  4. ಕೆಳಕ್ಕೆ ಬರು; ಇಳಿ.
  5. (ಉನ್ನತ ಪದವಿ, ಸ್ಥಾನ) ಕಳೆದುಕೊ; ಉರುಳು; ಪತನವಾಗು; ಚ್ಯುತಿಹೊಂದು: the government falls ಸರ್ಕಾರ ಉರುಳುತ್ತದೆ.
  6. ಎರಗು; ಮೇಲೆ ಬೀಳು: vengeance fell ಸೇಡು ಎರಗಿತು.
  7. ಕಳಚಿಬೀಳು, ಕಳಚಿ ಉದುರು; ಕಳಚಿ ಬೇರ್ಪಡು.
  8. ಇಳಿಬೀಳು; ಜೋಲುಬೀಳು; ನೇತಾಡು: her hair falls to her shoulders ಅವಳ ಕೂದಲು ಭುಜದವರೆಗೂ ಇಳಿಬೀಳುತ್ತದೆ.
  9. ಇಳಿ; ತಗ್ಗು; ಕೆಳಮಟ್ಟಕ್ಕೆ ಇಳಿ; ಕಡಮೆಯಾಗು; ಕುಸಿ: prices fall ಬೆಲೆಗಳು ಇಳಿಯುತ್ತವೆ; ಧಾರಣೆಗಳು ತಗ್ಗುತ್ತವೆ.
  10. ಕೆಳಗಿಳಿ; ಇಳಿತರವಾಗು; ಇಳಿಜಾರಾಗು: the field falls gently to the stream ಮೈದಾನ ಸ್ವಲ್ಪ ಸ್ವಲ್ಪವಾಗಿ ತೊರೆಯ ಕಡೆಗೆ ಇಳಿಜಾರಾಗಿದೆ.
  11. (ನದಿ ಮೊದಲಾದವು) ಒಳಕ್ಕೆ – ಹರಿ, ಸುರಿ: rivers that fall into the lake ಸರೋವರದೊಳಕ್ಕೆ ಹರಿಯುವ ನದಿಗಳು.
  12. ಇಳಿ; ತಗ್ಗು; ಕುಗ್ಗು; ಕಡಮೆಯಾಗು: the wind fell ಗಾಳಿಯ ವೇಗ ಕಡಮೆಯಾಯಿತು.
  13. ಕಳೆಗುಂದು; ಬಾಡು; ಕಂಗೆಡು; ಜೋಲುಬೀಳು; ನಿರಾಶೆ ತೋರು; ನಿರುತ್ಸಾಹಗೊಳ್ಳು: faces fall ಮುಖಗಳು ಜೋತುಬೀಳುತ್ತವೆ, ಕಳೆಗುಂದುತ್ತವೆ.
  14. (ಕಣ್ಣು, ದೃಷ್ಟಿ, ಮೊದಲಾದವುಗಳ ವಿಷಯದಲ್ಲಿ) ಇಳಿಬೀಳು; ಕೆಳಮುಖವಾಗು; ತಗ್ಗು: eyes fall ದೃಷ್ಟಿ ತಗ್ಗುತ್ತದೆ.
  15. (ನಿಲ್ಲಲಾರದೆ) ಬೀಳು; ಬಿದ್ದು ಹೋಗು; ಅಡ್ಡಬೀಳು; ನೆಲಮುಟ್ಟ ಬೀಳು.
  16. ಪಾಪಮಾಡು; ಪತಿತನಾಗು; ಅನೀತಿಗೆ ಬೀಳು.
  17. (ಮುಖ್ಯವಾಗಿ ಹಿಂಸಾಚಾರದಿಂದ) ಉರುಳು; ತಲೆಕೆಳಗಾಗು; ಹಾಳಾಗು; ಅಳಿದುಹೋಗು; ಅಂತ್ಯಗೊಳ್ಳು: after a succession of centuries, the Roman Empire fell ಶತಮಾನಗಳು ಸಂದಮೇಲೆ ರೋಮನ್‍ ಚಕ್ರಾಧಿಪತ್ಯ ಅಳಿದು ಹೋಯಿತು.
  18. ಬೀಳು; ಸಾಯಿ; ಸತ್ತುಹೋಗು; ಸಾವಿಗೆ ತುತ್ತಾಗು; ಮರಣಹೊಂದು; ಮಡಿ: seven lions fell to his rifle ಅವನ ಕೋವಿಗೆ ಏಳು ಸಿಂಹಗಳು ಬಿದ್ದವು, ಸತ್ತವು.
  19. (ಒಂದು ದಿಕ್ಕಿಗೆ) ಬೀಳು; ತಿರುಗು: his eye fell upon me ಅವನ ಕಣ್ಣು ನನ್ನ ಮೇಲೆ ಬಿದ್ದಿತು.
  20. ಬೀಳು; ಅಂಥ ಸ್ಥಾನದಲ್ಲಿರು: accent falls on first syllable ಸ್ವರಭಾರ ಮೊದಲನೆಯ ಉಚ್ಚಾರಾಂಶದ ಮೇಲೆ ಬೀಳುತ್ತದೆ.
  21. ಒದಗಿಬರು; ಅಕಸ್ಮಾತ್ತಾಗಿ ಲಭಿಸು; ಸಂಭವಿಸು; ಆಗು: the lot fell upon me ಆ ಅದೃಷ್ಟ ನನ್ನ ಪಾಲಿಗೆ ಒದಗಿ ಬಂದಿತು.
  22. (ಯಾವುದೇ ಸ್ಥಿತಿಗೆ) ಒಳಗಾಗು; ಸಿಕ್ಕು; ಆ ಸ್ಥಿತಿಗೆ ಬರು: he fell into a rage ಆತ ವಿಪರೀತ ಕೋಪಕ್ಕೆ ಒಳಗಾದ, ರೊಚ್ಚಿಗೆದ್ದ.
  23. ಆಗು; ಆಗಿಬರು: fall due ಸಲ್ಲಿಸಬೇಕಾಗು.
  24. ಹಿಂದಕ್ಕೆ ಹೋಗು; ವಾಪಸಾಗು: revenues fall to the Crown ಆದಾಯದ ಬಾಬುಗಳು ರಾಜನಿಗೆ ವಾಪಸು ಹೋಗುತ್ತವೆ.
  25. (ಯಾವುದೇ ದಿನ) ಬರು; ಆಗು; ಸಂಭವಿಸು: Dasara falls early ದಸರಾ ಹಬ್ಬ ಬೇಗನೆ ಬರುತ್ತದೆ.
  26. ಎಡೆಗೆಡು; ಅವಕಾಶಕೊಡು; ಆಸ್ಪದಕೊಡು: what now falls to be described ಯಾವುದು ಈಗ ವಿವರಣೆಗೆ ಎಡೆಗೊಡುತ್ತದೆಯೋ.
  27. (ಕೋಟೆ, ನಗರ, ಮೊದಲಾದವುಗಳ ವಿಷಯದಲ್ಲಿ) ವಶವಾಗು; ಇನ್ನೊಬ್ಬನ ಅಧೀನಕ್ಕೆ ಹೋಗು.
  28. (ಹೆಂಗಸಿನ ವಿಷಯದಲ್ಲಿ) ಬೀಳು; ಶೀಲ ಕಳೆದುಕೊ; ಪತಿತಳಾಗು; ಪಾತಿವ್ರತ್ಯ ಕಳೆದುಕೊ.
  29. (ಹೆಂಗಸಿನ ವಿಷಯದಲ್ಲಿ) ಬಸುರಾಗು; ಗರ್ಭಿಣಿಯಾಗು; ಗರ್ಭಧರಿಸು.
  30. (ಮನೆಯ ವಿಷಯದಲ್ಲಿ) ಕುಸಿ; ಕುಸಿದು ಬೀಳು; ಬಿದ್ದು ಹೋಗು.
  31. (ವಾಯುಭಾರಮಾಪಕ ಮೊದಲಾದವುಗಳ ವಿಷಯದಲ್ಲಿ) ಇಳಿ; ಕಡಮೆ ವಾಯು ಒತ್ತಡ ತೋರಿಸು.
  32. ಸೋಲು; ಪರಾಭವ ಹೊಂದು.
  33. (ಹಕ್ಕಿನಿಂದ) ಒದಗು; ಬರು: the property fell to the only living heir ಆಸ್ತಿ ಜೀವಂತನಾಗಿದ್ದ ಏಕಮಾತ್ರ ಹಕ್ಕುದಾರನಿಗೆ ಬಂದಿತು.
  34. ಒಡೆ; ವಿಂಗಡವಾಗು; ವಿಭಾಗವಾಗು: the subject falls into three parts ವಿಷಯ ಮೂರು ಭಾಗಗಳಾಗಿ ವಿಂಗಡವಾಗುತ್ತದೆ.
  35. (ಇಸ್ಪೀಟ್‍ ಎಲೆಯ ವಿಷಯದಲ್ಲಿ) ಒಂದೇ ಪಟ್ಟಿನಲ್ಲಿ ಮೇಲಿನ ಎಲೆಯಾಗಿ ಆಡಿರು, ಇಳಿದಿರು.
ಪದಗುಚ್ಛ
  1. hair falls ಕೂದಲು ಉದುರುತ್ತದೆ.
  2. the fallen ಯುದ್ಧದಲ್ಲಿ ಮಡಿದವರು.
ನುಡಿಗಟ್ಟು
  1. fall about (ಮುಖ್ಯವಾಗಿ ನಗೆ ಯಾ ವಿನೋದ ತುಂಬಿ) ಅಸಹಾಯಕನಾಗು; ಹತೋಟಿ ಕಳೆದುಕೊ; (ನಗುವನ್ನು) ತಡೆಹಿಡಿಯಲಾಗದಿರು: the spectators fell about when the hero slipped on the banana skin ನಾಯಕ ಪಾತ್ರದವನು ಬಾಳೆಹಣ್ಣಿನ ಸಿಪ್ಪೆ ತುಳಿದು ಜಾರಿ ಬಿದ್ದಾಗ ಪ್ರೇಕ್ಷಕರು ತಡೆಯಲಾಗದೆ ನಕ್ಕರು.
  2. fall a-ing (ಪ್ರಾಚೀನ ಪ್ರಯೋಗ) ಯಾವುದನ್ನೇ ಆರಂಭಿಸು; ಶುರುಮಾಡು: she fell a-weeping ಅವಳು ಅಳಲು ಪ್ರಾರಂಭಿಸಿದಳು.
  3. fall among ಮಧ್ಯೆ – ಸೇರಿಕೊ, ಸೇರಿಹೋಗು; ಅಕಸ್ಮಾತ್ತಾಗಿ ನಡುವೆ ಸಿಕ್ಕಿಬೀಳು: he fell among thieves ಅವನು ಕಳ್ಳರ ನಡುವೆ ಸೇರಿಹೋದ, ಸಿಕ್ಕಿಬಿದ್ದ.
  4. fall apart ಒಡೆ; ವಿಭಾಗವಾಗು.
  5. fall a prey to ಬಲಿಬೀಳು; ಬಲಿಯಾಗು.
  6. fall a sacrifice to = ನುಡಿಗಟ್ಟು \((5)\).
  7. fall astern (ಹಡಗಿನ ವಿಷಯದಲ್ಲಿ) ಹಿಂದುಳಿ; ಹಿಂದೆ ಬೀಳು; ಹಿಂದಾಗು.
  8. fall asunder ತುಂಡುತುಂಡಾಗಿ ಬೀಳು; ಬೇರೆ ಬೇರೆಯಾಗಿ ಬೀಳು.
  9. fall away
    1. ಬಿಟ್ಟು ಹೋಗು; ಬಿಟ್ಟುಬಿಡು; ದೂರ ಮಾಡು; ದೂರ ಸರಿ; ಪರಿತ್ಯಜಿಸು; ಕೈಬಿಡು: his supporters began to fall away ಅವನ ಬೆಂಬಲಿಗರು ಬಿಟ್ಟು ಹೋಗಲು ಪ್ರಾರಂಭಿಸಿದರು.
    2. ತಿರುಗಿ ಬೀಳು; ದಂಗೆಯೇಳು.
    3. ಸ್ವಧರ್ಮ ತ್ಯಜಿಸು ತನ್ನ ತತ್ತ್ವಗಳನ್ನು ಕೈಬಿಡು: many fell away because they were afraid of reprisals ಪ್ರತೀಕಾರಕ್ಕೆ ಹೆದರಿ ಅನೇಕರು ಸ್ವಧರ್ಮ ತ್ಯಜಿಸಿದರು.
    4. ಹಾಳಾಗು; ನಶಿಸು; ಕ್ಷಯಿಸು; ಶಿಥಿಲವಾಗು: till bones and flesh and sinews fall away ಎಲುಬೂ ಮಾಂಸಖಂಡಗಳೂ ಕ್ಷಯಿಸುವವರೆಗೂ.
    5. ಕಣ್ಮರೆಯಾಗು; ಕಾಣದಾಗು; ಅದೃಶ್ಯವಾಗು; ಮಾಯವಾಗು: in this crisis, prejudices fell away ಈ ಬಿಕ್ಕಟ್ಟಿನ ಸ್ಥಿತಿಯಲ್ಲಿ ಪೂರ್ವಗ್ರಹಗಳು ಮಾಯವಾದವು.
    6. ಕಡಮೆಯಾಗು; ಕರಗು; ತೆಳ್ಳಗಾಗು: the crowd fell away when the police appeared on the scene ಪೊಲೀಸರು ಆ ಸ್ಥಳಕ್ಕೆ ಬಂದಾಗ ಗುಂಪು ಕರಗಿತು, ಕಡಮೆಯಾಯಿತು.
  10. fall back ಹಿಮ್ಮೆಟ್ಟು; ಹಿಂದೆ ಸರಿ; ಹಿಂದಿರುಗು: the relentless shelling forced the enemy to fall back ಎಡೆಬಿಡದ ಸಿಡಿಗುಂಡಿನ ದಾಳಿ ಶತ್ರುವನ್ನು ಹಿಮ್ಮೆಟ್ಟುವಂತೆ ಮಾಡಿತು.
  11. fall back upon (or on)
    1. ಮೊರೆಹೋಗು; ಅವಲಂಬಿಸು; ಆಶ್ರಯಿಸು: it is useful to have something to fall back upon ಅವಲಂಬಿಸಲು ಏನಾದರೂ ಇದ್ದರೆ ಉತ್ತಮ.
    2. (ಸೈನ್ಯ) ಮೊದಲಿನ ಸ್ಥಾನಕ್ಕೆ ಹಿಂದಿರುಗು, ವಾಪಸಾಗು.
  12. fall behind
    1. (ಪ್ರಗತಿ ಮೊದಲಾದವುಗಳಲ್ಲಿ) ಹಿಂದೆ ಬೀಳು; ಹಿಂದುಳಿ: a man who has fallen behind his age ಅವನ ಕಾಲಕ್ಕಿಂತ ಹಿಂದುಳಿದ ಮನುಷ್ಯ.
    2. (ಸಾಲ, ಕರ್ತವ್ಯ ಮೊದಲಾದವುಗಳ ವಿಷಯದಲ್ಲಿ) ತಡಮಾಡು; ಸಕಾಲದಲ್ಲಿ – ಸಲ್ಲಿಸದಿರು, ನಿರ್ವಹಿಸದಿರು.
  13. fall down (on) (ಆಡುಮಾತು) ಸೋಲು; ವಿಫಲವಾಗು; ನಿರೀಕ್ಷೆಗೆಡಿಸು; ಮುಗ್ಗರಿಸು: he was doing well on the exam until he fell down on the last question ಕಡೇ ಪ್ರಶ್ನೆಯನ್ನು ಉತ್ತರಿಸುವಲ್ಲಿ ಮುಗ್ಗರಿಸುವವರೆಗೂ ಅವನು ಪರೀಕ್ಷೆಯಲ್ಲಿ ಚೆನ್ನಾಗಿಯೇ ಮಾಡಿದ್ದನು.
  14. fallen angel ಪತಿತ ದೇವತೆ; ಸ್ವರ್ಗದಿಂದ ಭೂಮಿಗೆ ದೂಡಿದ, ಉರುಳಿದ ದೇವತೆ.
  15. fallen arch (ಕಾಲಿನ ಪಾದದ) ಕಮಾನು ಮುರಿದ.
  16. fall flat ವ್ಯರ್ಥವಾಗು; ಉದ್ದೇಶಿಸಿದ ಗುರಿ ಸಾಧಿಸದೆ ಹೋಗು: the scheme fell flat ಯೋಜನೆ ವ್ಯರ್ಥವಾಯಿತು. his jokes fell flat ಅವನ ಹಾಸ್ಯ ಚಟಾಕಿಗಳು ನಗು ಹುಟ್ಟಿಸಲಿಲ್ಲ, ಸಪ್ಪೆಯಾದವು.
  17. fall for (ಆಡುಮಾತು)
    1. ಮೋಹಿತನಾಗು; ಮೋಹಕ್ಕೊಳಗಾಗು; ಮೋಹಕ್ಕೆ ಬೀಳು; ಮರುಳಾಗು; ಸೊಗಸಿಗೋ ಗುಣಕ್ಕೋ ಮಾರುಹೋಗು: he falls for every pretty face he sees ಪ್ರತಿಯೊಂದು ಚೆಲುವಾದ ಮುಖಕ್ಕೂ ಅವನು ಮಾರುಹೋಗುತ್ತಾನೆ.
    2. ಮೋಸಹೋಗು; ವಂಚಿಸಲ್ಪಡು.
  18. fall foul of
    1. (ಮುಖ್ಯವಾಗಿ ಹಡಗುಗಳ ವಿಷಯದಲ್ಲಿ) ತಾಗು; ಡಿಕ್ಕಿ ಹೊಡಿ; ಸಂಘಟ್ಟಿಸು.
    2. ಜಗಳವಾಡು; ಘರ್ಷಣೆಗೆ ಬರು: fell foul on one another ಒಬ್ಬರಿಗೊಬ್ಬರು ಜಗಳವಾಡಿದರು.
    3. ಮೇಲೆ ಬೀಳು; ಎರಗು; ಆಕ್ರಮಣ ನಡೆಸು: I fell foul upon them and put them to flight ಅವರ ಮೇಲೆ ನಾನು ಆಕ್ರಮಣ ನಡೆಸಿ ಎಲ್ಲರನ್ನೂ ಓಡಿಸಿದೆ.
  19. fall from (ಮಾತುಗಳ ವಿಷಯದಲ್ಲಿ) ಹೊರಬೀಳು; ಹೊರಬರು; ಬಾಯಿಂದಬರು; ನಾಲಿಗೆಯಿಂದ ಉದುರು.
  20. fall in
    1. (ಸೈನ್ಯ) ಸಾಲಿನಲ್ಲಿ ನಿಲ್ಲು ಯಾ ನಿಲ್ಲಿಸು: the sergeant ordered his men to fall in ಸಾಲಿನಲ್ಲಿ ನಿಲ್ಲುವಂತೆ ತನ್ನ ಸೈನಿಕರಿಗೆ ಸಾರ್ಜೆಂಟ್‍ ಆಜ್ಞೆ ಮಾಡಿದ. the sergeant fell his men in ಸಾರ್ಜೆಂಟ್‍ ತನ್ನ ಸೈನಿಕರನ್ನು ಸಾಲಿನಲ್ಲಿ ನಿಲ್ಲಿಸಿದ.
    2. (ಕಟ್ಟಡ ಮೊದಲಾದವುಗಳ ವಿಷಯದಲ್ಲಿ) ಒಳಕ್ಕೆ ಬೀಳು, ಕುಸಿ: the roof fell in ಮಾಳಿಗೆ ಒಳಕ್ಕೆ ಕುಸಿಯಿತು.
    3. (ಸಾಲ ಮೊದಲಾದವುಗಳ ವಿಷಯದಲ್ಲಿ) ಅವಧಿ, ಮುಟ್ಟು; ಸಲ್ಲಿಸಬೇಕಾಗಿ ಬರು.
    4. (ಜಈನು ಮೊದಲಾದವುಗಳ ವಿಷಯದಲ್ಲಿ) ದೊರೆಯುವಂತಿರು; ಸಿಕ್ಕು.
    5. (ಗುತ್ತಿಗೆ, ಗೇಣಿಗಳ ವಿಷಯದಲ್ಲಿ) ತೀರು; ಅವಧಿ ಮುಗಿ.
  21. fall in love (with) ಪ್ರೇಮಿಸು; ಪ್ರೀತಿಸು.
  22. fall into
    1. ಸ್ಥಾನ ಸೇರಿಕೊ; ತನ್ನ ಜಾಗ ತೆಗೆದುಕೊ: in a moment they all fell into their places ಒಂದು ಕ್ಷಣದಲ್ಲಿ ಅವರೆಲ್ಲರೂ ತಮ್ಮ ತಮ್ಮ ಸ್ಥಾನ ಸೇರಿಕೊಂಡರು.
    2. (ಅಭ್ಯಾಸ, ಚಾಳಿ, ಮೊದಲಾದವುಗಳನ್ನು) ಬೆಳೆಸಿಕೊ; ಬಲಿಬೀಳು.
    3. ವಿಭಾಗವಾಗು; ಸಹಜವಾಗಿಯೇ ಭಾಗವಾಗುವಂತಿರು: the subject falls into three divisions ವಿಷಯ ಮೂರು ಭಾಗಗಳಾಗಿ ವಿಭಾಗವಾಗುತ್ತದೆ.
  23. fall into conversation with ಮಾತಿಗೆ ಆರಂಭಿಸು; ಸಂಭಾಷಣೆಯಲ್ಲಿ ತೊಡಗು; ಮಾತುಕತೆ ಶುರುಮಾಡು.
  24. fall into error ತಪ್ಪಿಗೆ ಬೀಳು; ತಪ್ಪು ಮಾಡು; ತಪ್ಪಿಗೆ ಈಡಾಗು.
  25. fall in two ಎರಡಾಗಿ ಒಡೆ; ಇಬ್ಭಾಗವಾಗು.
  26. fall in with
    1. ಅಕಸ್ಮಾತ್ತಾಗಿ ಸಂಧಿಸು; ಇದ್ದಕ್ಕಿದ್ದಂತೆ ಭೇಟಿಯಾಗು: we fell in with a chap from London ನಾವು ಲಂಡನ್ನಿನಿಂದ ಬಂದ ಒಬ್ಬ ಆಸಾಮಿಯನ್ನು ಅಕಸ್ಮಾತ್ತಾಗಿ ಭೇಟಿಯಾದೆವು.
    2. (ಅಭಿಪ್ರಾಯ, ಯೋಜನೆಗಳಿಗೆ) ಒಪ್ಪು; ಸಮ್ಮತಿಸು: he fell in with my views at once ನನ್ನ ಅಭಿಪ್ರಾಯಗಳನ್ನು ಅವನು ಕೂಡಲೇ ಒಪ್ಪಿದ.
    3. (ವ್ಯಕ್ತಿಯೊಡನೆ) ಕಬೂಲಾಗು; ಒಮ್ಮತವುಳ್ಳವನಾಗಿರು.
    4. ಹೊಂದಿಕೊ: how pleasantly he falls in with their several natures and qualities! ಎಷ್ಟು ಚೆನ್ನಾಗಿ ಅವನು ಅವರ ಬೇರೆಬೇರೆ ಸ್ವಭಾವ ಮತ್ತು ಗುಣಗಳಿಗೆ ಹೊಂದಿಕೊಳ್ಳುತ್ತಾನೆ!
    5. ಸರಿಬೀಳು; ಸರಿಹೊಂದು; ತಾಳೆ ಬೀಳು; ತಾಳೆಯಾಗು: his 20th year fell in with his first win in the Olympics ಅವನ 20ನೇ ವರ್ಷವು ಒಲಿಂಪಿಕ್ಸ್‍ ಪಂದ್ಯದಲ್ಲಿ ಅವನ ಮೊದಲನೇ ವಿಜಯ ದಿನಕ್ಕೆ ತಾಳೆಬಿದ್ದಿತು.
  27. fall off
    1. ಹಿಂದಕ್ಕೆ ಹೋಗು; ಹಿಂದಕ್ಕೆ ಸರಿ: dear child, fall off ಮಗೂ, ಹಿಂದಕ್ಕೆ ಸರಿ.
    2. (ಗಾತ್ರ ಯಾ ಸಂಖ್ಯೆಯಲ್ಲಿ) ಕಡಮೆಯಾಗು; ಕುಗ್ಗು: the tourists fall off after summer ಬೇಸಿಗೆ ಮುಗಿದ ಮೇಲೆ ಪ್ರವಾಸಿಗರು ಕಡಮೆಯಾಗುತ್ತಾರೆ.
    3. ಕೆಡು; ಕುಗ್ಗು; ಕುಂದು; ಅವನತಿಹೊಂದು: business falls off in the rainy season ಮಳೆಗಾಲದಲ್ಲಿ ವ್ಯಾಪಾರ ಕುಗ್ಗುತ್ತದೆ.
    4. (ಹಡಗಿನ ವಿಷಯದಲ್ಲಿ) ಗಾಳಿ ಮರೆಯಿರುವ ದಿಕ್ಕಿಗೆ ತಿರುಗು; ದಿಕ್ಕು ಬದಲಾಯಿಸು.
  28. fall on
    1. ಕಾಳಗಕ್ಕೆ ತೊಡಗು; ಕದನ ಆರಂಭಿಸು; ಮೇಲೆ ಬೀಳು; ಆಕ್ರಮಣ ನಡೆಸು: the English were impatient to fall on ಇಂಗ್ಲಿಷರು ಕದನ ಆರಂಭಿಸಲು ತವಕಪಡುತ್ತಿದ್ದರು.
    2. ತಿನ್ನಲು ಮೊದಲು ಮಾಡು; ಊಟಮಾಡಲು ಪ್ರಾರಂಭಿಸು.
    3. (ಒಬ್ಬನ) ಕರ್ತವ್ಯವಾಗಿರು; ಜವಾಬ್ದಾರಿಯಾಗಿರು.
    4. (ಅಕಸ್ಮಾತ್ತಾಗಿ) ಸಂಧಿಸು; ಎದುರಾಗು.
    5. ಒದಗಿಬರು; ಸಂಭವಿಸು; ಹುಟ್ಟು: fear fell on them ಅವರಿಗೆ ಹೆದರಿಕೆ ಹುಟ್ಟಿತು. darkness fell on the scene ಕತ್ತಲಾಯಿತು; ಕತ್ತಲೆ ಸ್ಥಳವನ್ನು ಆವರಿಸಿತು.
  29. fall on evil times ದುರದೃಷ್ಟಕ್ಕೆ ಸಿಕ್ಕು; ಕೇಡುಗಾಲ ಬರು; ಕಷ್ಟಕಾಲ ಒದಗು.
  30. fall on one’s face ಹಾಸ್ಯಾಸ್ಪದವಾಗಿ ಸೋತು ಹೋಗು; ನಗೆಪಾಟಲಾಗುವಂತೆ ಅಯಶಸ್ವಿಯಾಗು.
  31. fall on one’s feet ಕಷ್ಟದಿಂದ ಪೂರ್ತಿ ಪಾರಾಗು; ತೊಂದರೆಯಿಂದ ಪೂರ್ಣವಾಗಿ – ತಪ್ಪಿಸಿಕೊ. ಮುಕ್ತನಾಗು.
  32. fall on one’s sword ತನ್ನ ಕತ್ತಿಯ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊ.
  33. fall out
    1. ಜಗಳವಾಡು; ಕಲಹಮಾಡು: he has fallen out with the girl he was going to marry ಅವನು ಮದುವೆಯಾಗಲಿದ್ದ ಹುಡುಗಿಯೊಡನೆ ಜಗಳವಾಡಿದ್ದಾನೆ.
    2. ಆಗು; ನಡೆ; ಸಂಭವಿಸು: it so fell out that I could not get there in time ಕಾಲಕ್ಕೆ ಸರಿಯಾಗಿ ನಾನು ಅಲ್ಲಿಗೆ ಹೋಗದ ಹಾಗಾಯಿತು.
    3. ಕೊನೆಗೊಳ್ಳು; ಅಂತ್ಯವಾಗು; ಸಮಾಪ್ತಿಗೊಳ್ಳು: the chronicler tells how things fell out ವಿದ್ಯಮಾನಗಳು ಹೇಗೆ ಕೊನೆಗೊಂಡವೆಂಬುದನ್ನು ಚರಿತ್ರಕಾರ ಹೇಳುತ್ತಾನೆ.
    4. ~(ಸೈನ್ಯ) ಸಾಲು ಬಿಡು; ಸಾಲುಬಿಟ್ಟುಹೋಗು: they were ordered to fall out when the parade ended ಪರೇಡು ಮುಗಿದ ಮೇಲೆ ಅವರು ಸಾಲುಬಿಟ್ಟುಹೋಗಲು ಆಜ್ಞೆಯಾಯಿತು.
  34. fall out of (ಅಭ್ಯಾಸ, ಚಾಳಿ, ಮೊದಲಾದವನ್ನು) ಬಿಡು; ತೊರೆ; ತ್ಯಜಿಸು; ಬಿಟ್ಟುಬಿಡು.
  35. fall over
    1. ಎಡವು; ಮುಗ್ಗರಿಸು.
    2. ಬೀಳು; ನೆಟ್ಟಗೆ ನಿಲ್ಲದಿರು; ನೇರವಾಗಿ ನಿಂತುಕೊಳ್ಳದಿರು.
  36. fall over backwards (ರೂಪಕವಾಗಿ) (ಆಡುಮಾತು)
    1. ಇನ್ನೊಂದು (ಕಡೆ) ಅತಿಗೆ, ವಿಪರೀತಕ್ಕೆ ಹೋಗು.
    2. ಮಿತಿಈರಿದ, ಅತಿಯಾದ ಆಸಕ್ತಿ ಯಾ ಆತುರ ತೋರು ಯಾ ಅತಿ ವಿಚಿತ್ರವಾಗಿ ವರ್ತಿಸು: jury fell over backwards in favour of progressive art ನ್ಯಾಯದರ್ಶಿಗಳು ಪ್ರಗತಿಶೀಲ ಕಲೆಯ ಪರವಾಗಿ ಮಿತಿಈರಿದ ಆಸಕ್ತಿ ತೋರಿಸಿದರು.
  37. fall over oneself (ಆಡುಮಾತು)
    1. ಎಡವಟ್ಟಾಗಿ ಆಡು; ಒಡ್ಡೊಡ್ಡಾಗಿ ವರ್ತಿಸು.
    2. ಬಹಳ ಆತುರವಾಗಿರು; ಅತಿಯಾದ ಆಸಕ್ತಿ ತೋರಿಸು; ವಿಪರೀತ ಮುತುವರ್ಜಿ ವಹಿಸು: the political parties were falling over themselves (or each other) for the votes of the weaker sections ದುರ್ಬಲ ವರ್ಗಗಳ ಮತಗಳಿಗಾಗಿ ರಾಜಕೀಯ ಪಕ್ಷಗಳು ಪರಸ್ಪರ ಬಹಳ ಮುತುವರ್ಜಿ ವಹಿಸಿದವು.
  38. fall short
    1. ಸಾಲದೆ ಹೋಗು; ಕಡಮೆಬೀಳು; ಕೊರೆಯಾಗು: the supplies began to fall short ಸರಬರಾಯಿ ಕಡಮೆಬೀಳಲು ಶುರುವಾಯಿತು.
    2. (ಕ್ಷಿಪಣಿಯ ವಿಷಯದಲ್ಲಿ) ತಕ್ಕಷ್ಟು ದೂರ ಹೋಗದಿರು: the shot fell short ಗುಂಡು ಸಾಕಷ್ಟು ದೂರ ಹೋಗಲಿಲ್ಲ.
  39. fall short of
    1. ಪಡೆಯದೆ ಹೋಗು; ಹೊಂದದಿರು; ಕೈಗೂಡದಿರು; ನೆರವೇರದಿರು: the soldiers falling short of their hopes were offended ಆಶೆಗಳು ಕೈಗೂಡದ ಸಿಪಾಯಿಗಳು ಅಸಮಾಧಾನಗೊಂಡರು.
    2. ಸಾಲದಿರು; ಕೊರತೆ ಬೀಳು; ಪೂರೈಸದಿರು; ಗುರಿ ಮುಟ್ಟದಿರು; (ನಿರೀಕ್ಷಿಸಿದ) ಮಟ್ಟ ತಲುಪದಿರು.
  40. fall through ತಪ್ಪಿಹೋಗು; ವ್ಯರ್ಥವಾಗು; ವಿಫಲವಾಗು; ಗುರಿತಪ್ಪು; ಆಗದಿರು: his scheme fell through ಅವನ ಯೋಜನೆ ವಿಫಲವಾಯಿತು.
  41. fall to
    1. ಊಟಕ್ಕೆ ಮೊದಲು ಮಾಡು: they fell to with a good appetite ಅವರು ಒಳ್ಳೆಯ ಹಸಿವಿನಿಂದ ಊಟಮಾಡಲು ಪ್ರಾರಂಭಿಸಿದರು.
    2. ~ಕಾದಾಟ ಪ್ರಾರಂಭಿಸು; ಹೊಡೆದಾಡು; ಕೈಮಿಲಾಯಿಸು: I have seen them fall to with their fists ಅವರು ಮುಷ್ಟಾಮುಷ್ಟಿ ಹೊಡೆದಾಡುವುದನ್ನು ನಾನು ನೋಡಿದ್ದೇನೆ.
    3. ~ಮೊದಲು ಮಾಡು; ಪ್ರಾರಂಭಮಾಡು; ಆರಂಭಿಸು; ತೊಡಗು: I fell to wondering where to go for my holidays ರಜಕ್ಕೆ ಎಲ್ಲಿಗೆ ಹೋಗಲೆಂದು ಯೋಚಿಸತೊಡಗಿದೆ.
    4. ತುತ್ತಾಗು; ವಶವಾಗು; ಬಲಿಯಾಗು.
  42. fall together (ಧ್ವನಿಗಳ ವಿಷಯದಲ್ಲಿ) ಒಂದಾಗು; ಐಕ್ಯವಾಗು; ಲೀನವಾಗು.
  43. fall to pieces ಚೂರುಚೂರಾಗು; ಪುಡಿಪುಡಿಯಾಗು.
  44. fall to the ground (ಯೋಜನೆ ಮೊದಲಾದವುಗಳ ವಿಷಯದಲ್ಲಿ) ಬಿದ್ದು ಹೋಗು; ನೆಲಕಚ್ಚು; ನೆಲಕ್ಕೆ ಬೀಳು; ನೆಲಕ್ಕುರುಳು; ಅಯಶಸ್ವಿಯಾಗು; ವಿಫಲವಾಗು.
  45. fall under
    1. (ವಿಭಾಗದಲ್ಲಿ, ವರ್ಗದಲ್ಲಿ) ಸೇರು; ಕೆಳಗೆ ಬರು: the subject falls under three heads ವಿಷಯ ಮೂರು ಶೀರ್ಷಿಕೆಗಳಲ್ಲಿ ಸೇರುತ್ತದೆ.
    2. (ವೀಕ್ಷಣೆ ಮೊದಲಾದವಕ್ಕೆ) ಒಳಗಾಗು; ಒಳಪಡು.
  46. fall upon = ನುಡಿಗಟ್ಟು \((28)\).
  47. fall within (ಒಂದರಲ್ಲಿ) ಸೇರು; ಅಂತರ್ಗತವಾಗು; ವ್ಯಾಪ್ತಿಯಲ್ಲಿ ಬರು; ವ್ಯಾಪ್ತಿಗೆ ಒಳಪಡು: falls within the jurisdiction of this city ಈ ನಗರದ ವ್ಯಾಪ್ತಿಗೆ ಒಳಪಡುತ್ತದೆ.
  48. wicket falls (ಕ್ರಿಕೆಟ್‍) ಬ್ಯಾಟುಗಾರ ಔಟಾದ.
See also 1fall
2fall ಹಾಲ್‍
ನಾಮವಾಚಕ
  1. ಬೀಳು; ಬೀಳುವಿಕೆ; ಪತನ.
  2. (ಮುಖ್ಯವಾಗಿ) (ಬಿದ್ದ ಮಳೆ ಮೊದಲಾದವುಗಳ) ಸುರಿತ; ಸುರಿತದ ಪ್ರಮಾಣ, ಮೊತ್ತ: a heavy fall of rain ಮಳೆಯ ಭಾರಿ ಸುರಿತ.
  3. (ಅಮೆರಿಕದಲ್ಲಿ) ಮಾಗಿಕಾಲ; ಶರತ್ಕಾಲ.
  4. (ಹುಟ್ಟಿದ ಕುರಿಮರಿ ಮೊದಲಾದವುಗಳ) ಸಂಖ್ಯೆ.
  5. (ಮುಖ್ಯವಾಗಿ ಬಹುವಚನದಲ್ಲಿ) ಜಲಪಾತ; ತಡಸಲು; ಅಬ್ಬಿ; ಜೋಗು; ದಬದಬಿ; ನೀರುಬೀಳು: Jog Falls ಗೇರುಸೊಪ್ಪೆ ಜಲಪಾತ; ಜೋಗ್‍ ಜಲಪಾತ.
  6. (ಕುರಿಮರಿ) ಮೊದಲಾದವುಗಳ ಹುಟ್ಟು; ಜನನ.
  7. ಇಳಿತ; ಇಳಿಮುಖ; ಇಳಿಯುವ ಪ್ರವೃತ್ತಿ: a fall in the temperature ತಾಪಮಾನದಲ್ಲಿ ಇಳಿತ.
  8. ಇಳಿವು; ಇಳಿಕೆ; ಪಾತ; ಉತಾರು; ಇಳಿತದ ಪ್ರಮಾಣ: the fall of the river here is three feet ಇಲ್ಲಿ ನದಿಯ ಇಳಿತದ ಪ್ರಮಾಣ ಮೂರು ಅಡಿ.
  9. ಕುಸ್ತಿಯ ಒಂದು ಸುತ್ತು, ಸೂಳು, ವರಿಸೆ.
  10. ಕುಸ್ತಿಯಲ್ಲಿ ಬೀಳಿಸುವುದು; ನಿರ್ದಿಷ್ಟ ಕಾಲ ನೆಲದ ಮೇಲೆ ಬಿದ್ದಿರುವಂತೆ ಎದುರಾಳಿಯನ್ನು ಕೆಡವುವುದು, ಬೀಳುವುದು.
  11. ಕಪ್ಪಿಯ ಹಗ್ಗ; ಗಡಗಡೆ ಹಗ್ಗ; ಭಾರವೆತ್ತುವ ಸಾಧನದ ಹಗ್ಗ.
  12. ನಾಟಾದ ಪ್ರಮಾಣ; ಕಡಿದು ಹಾಕಿದ ಮರಮುಟ್ಟಿನ ಪ್ರಮಾಣ; ಕತ್ತರಿಸಿ ಹಾಕಿದ ಒಟ್ಟು ದಿಮ್ಮಿ, ನಾಟಾ.
  13. ಪತನ; ಪ್ರಲೋಭನೆಗೆ ಬೀಳುವುದು; ಆಸೆಗೆ ಬಲಿಯಾಗುವುದು; ವಿಲೋಭನೆಗೆ ಒಳಗಾಗುವುದು.
  14. ಬುರಕಿ; ಮುಖಪರದೆ; ಅವಕುಂಠನ; ಹೆಂಗಸಿನ ಒಂದು ಬಗೆಯ ಮುಖ ಮುಸುಕು.
  15. ಚುಂಗು; ಜೋತಾಡುವಂತೆ ವಸ್ತ್ರದ ಅಂಚಿಗೆ ಸೇರಿಸುವ ಜರಿ, ಕಸೂತಿ, ನಿರಿಗೆ, ಮೊದಲಾದವುಗಳ ಪಟ್ಟಿ.
  16. ಇಳಿಬೀಳುವುದು; ಜೋಲಾಟ; ತೊಂಗು: a fall of long hair ನೀಳಗೂದಲಿನ ಜೋಲಾಟ, ತೊಂಗು.
  17. ವಿನಾಶ; ಅಧಃಪತನ; ಮಹತ್ತು, ಶಕ್ತಿ, ಅಂತಸ್ತು, ಯಾ ಪ್ರಭಾವದ ನಾಶ: the fall of the Roman Empire ರೋಮನ್‍ ಚಕ್ರಾಧಿಪತ್ಯದ ವಿನಾಶ.
  18. (ಸರ್ಕಾರದ ಯಾ ಮಂತ್ರಿಮಂಡಲದ) ಪತನ; ಅಧಿಕಾರಚ್ಯುತಿ: the fall of government on a vote of no confidence ಅವಿಶ್ವಾಸಮತದ ಪರಿಣಾಮವಾಗಿ ಸರ್ಕಾರದ ಪತನ.
  19. ಸೋಲು; ಅಪಜಯ.
  20. (ಮುತ್ತಿಗೆಗೊಳಗಾದ ಕೋಟೆಯ, ನಗರದ) ಪತನ; ಶರಣಾಗತಿ; ಸ್ವಾಧೀನ; ಕೈವಶವಾಗುವಿಕೆ: the fall of Troy ಟ್ರಾಯ್‍ ನಗರದ ಪತನ, ವಶ.
  21. (ಅಶಿಷ್ಟ) ದಸ್ತಗಿರಿ; ಬಂಧನ; ಸೆರೆ.
ಪದಗುಚ್ಛ
  1. fall of the year = 2fall(3).
  2. the Fall (of Man) ಮಾನವನ ಪತನ; ಆಡಮ್‍ನ ಪಾತಕ ಮತ್ತು ಅದರ ಫಲ.
  3. try a fall (ಕುಸ್ತಿ) ಒಂದು ಕೈನೋಡು; ಒಂದು ವರಿಸೆ ನೋಡು (ರೂಪಕವಾಗಿ ಸಹ).