faithfully ಹೇತ್‍ಹುಲಿ
ಕ್ರಿಯಾವಿಶೇಷಣ
  1. ನಂಬಿಕೆಯಿಂದ; ನಿಷ್ಠೆಯಿಂದ.
  2. ಕೊಟ್ಟ ಮಾತಿಗೆ ತಪ್ಪದಂತೆ.
  3. ಪ್ರಾಮಾಣಿಕವಾಗಿ; ಆತ್ಮಸಾಕ್ಷಿಯಾಗಿ.
  4. ಸರಿಯಾಗಿ; ಯಥಾವತ್ತಾಗಿ; ಕರಾರುವಾಕ್ಕಾಗಿ; (ವಾಸ್ತವಾಂಶ, ಅಸಲು ಪ್ರತಿ, ಮೊದಲಾದವಕ್ಕೆ) ಯಥಾರ್ಥವಾಗಿರುವಂತೆ.
  5. (ಆಡುಮಾತು) ದೃಢವಾಗಿ; ಒತ್ತುಹಾಕಿ; ಒತ್ತಿಹೇಳಿ: promise faithfully (ಆಡುಮಾತು) ದೃಢವಾಗಿ ಮಾತುಕೊಡು; ಒತ್ತಿಹೇಳಿ ಮಾತುಕೊಡು.
ಪದಗುಚ್ಛ

yours faithfully ನಿಮ್ಮ ವಿಶ್ವಾಸಿ; ತಮ್ಮ ವಿಶ್ವಾಸಪಾತ್ರ (ವ್ಯಾಪಾರ ಯಾ ಔಪಚಾರಿಕ ಪತ್ರಗಳ ಕೊನೆಯಲ್ಲಿ ಬರೆಯುವ ಸಾಂಪ್ರದಾಯಿಕ, ಔಪಚಾರಿಕ ಮಾತು).