faithful ಹೇತ್‍ಹುಲ್‍
ಗುಣವಾಚಕ
  1. ಶ್ರದ್ಧಾವಂತ; ನಂಬಿಕೆ ಇರುವ.
  2. (ವ್ಯಕ್ತಿ, ತತ್ತ್ವ, ಮೊದಲಾದವುಗಳಿಗೆ) ನಿಷ್ಠೆಯುಳ್ಳ; ನಿಷ್ಠಾವಂತ: a faithful friend ನಿಷ್ಠಾವಂತ ಗೆಳೆಯ.
  3. ಕರ್ತವ್ಯನಿಷ್ಠ; ನಿಷ್ಠಾವಂತ; ಕರ್ತವ್ಯಪಾಲನೆಯಲ್ಲಿ ತಪ್ಪದ ಯಾ ಸಮರ್ಥನಾದ: a faithful worker ನಿಷ್ಠಾವಂತ ಕೆಲಸಗಾರ.
  4. ವಚನಪಾಲಕ; (ಕೊಟ್ಟ) ಮಾತಿಗೆ ತಪ್ಪದ; ವಾಗ್ದಾನ, ಭರವಸೆ, ಪ್ರತಿಜ್ಞೆ, ಮೊದಲಾದವುಗಳಿಗೆ ಬದ್ಧನಾದ.
  5. ಆತ್ಮಸಾಕ್ಷಿಯಾಗಿ ನಡೆದುಕೊಳ್ಳುವ ಪ್ರಾಮಾಣಿಕ: a faithful public official ಆತ್ಮಸಾಕ್ಷಿಯಾಗಿ ಕೆಲಸ ಮಾಡುವ ಸಾರ್ವಜನಿಕ ಆಧಿಕಾರಿ.
  6. ನೆಚ್ಚಿನ; ನಂಬಿಕೆಯ; ನಂಬಿಕೆಗೆ ಅರ್ಹನಾದ; ವಿಶ್ವಾಸಾರ್ಹನಾದ.
  7. (ವಾಸ್ತವಾಂಶ, ಅಸಲು ಪ್ರತಿ ಮೊದಲಾದವಕ್ಕೆ) ಸರಿಯಾದ; ಯಥಾವತ್ತಾದ; ಕರಾರುವಾಕ್ಕಾದ; ಯಥಾರ್ಥವಾಗಿರುವ; ಯಥಾಮೂಲವಾಗಿರುವ: a faithful account ಕರಾರುವಾಕ್ಕು ಲೆಕ್ಕ.
ಪದಗುಚ್ಛ

the faithful (ಬಹುವಚನ) ನಿಜವಾದ ಶ್ರದ್ಧಾವಂತರು; ನಿಜವಾಗಿ ನಂಬುವವರು (ಮುಖ್ಯವಾಗಿ ಮಹಮ್ಮದೀಯರು).