faith ಹೇತ್‍
ನಾಮವಾಚಕ
  1. ನಂಬಿಕೆ; ನೆಚ್ಚಿಕೆ; ವಿಶ್ವಾಸ; ಶ್ರದ್ಧೆ; ಭರವಸೆ: faith in another’s ability ಇನ್ನೊಬ್ಬನ ಶಕ್ತಿಯಲ್ಲಿ ನಂಬಿಕೆ.
  2. ಪ್ರಮಾಣ ಗ್ರಂಥ ಯಾ ವಾಕ್ಯವನ್ನು ಅವಲಂಬಿಸಿದ ನಂಬಿಕೆ, ಶ್ರದ್ಧೆ.
  3. (ದೇವ) ಮತಶ್ರದ್ಧೆ; ಧರ್ಮಶ್ರದ್ಧೆ:
    1. (ಮುಖ್ಯವಾಗಿ ಶೀಲ ನಡತೆಗಳ ಮೇಲೆ ಪರಿಣಾಮ ಬೀರುವಂಥ) ಮತತತ್ತ್ವಗಳಲ್ಲಿ ನಂಬಿಕೆ.
    2. ಆಧಾರವಿಲ್ಲದೆ ದೈವಿಕ ಸತ್ಯದ ಆಧ್ಯಾತ್ಮಿಕ ಅರಿವು. ಅನುಭವ.
  4. ಧರ್ಮ; ಮತ: the Christian faith ಕ್ರೈಸ್ತ – ಧರ್ಮ, ಮತ.
  5. ನಂಬಬೇಕಾದವು; ನಂಬಿದವು; ನಂಬಿದ್ದು.
  6. ಆಧಾರ; ಪ್ರಮಾಣ: on the faith of ಆಧಾರದ ಮೇಲೆ; ಭರವಸೆಯ ಮೇಲೆ.
  7. ವಾಗ್ದಾನ; ಭರವಸೆ; ಭಾಷೆ; ಕೊಟ್ಟ ಮಾತು; ವಚನ: keep one’s faith ಕೊಟ್ಟ ಮಾತು ಉಳಿಸಿಕೊ. give, plight, or pledge one’s faith ಮಾತುಕೊಡು; ಭರವಸೆ ಕೊಡು; ಪ್ರಮಾಣ ಮಾಡು; ವಚನ ಕೊಡು.
  8. ಕರ್ತವ್ಯಬದ್ಧತೆ; ನಿಷ್ಠೆ; ಶ್ರದ್ಧೆ.
  9. ಕರ್ತವ್ಯಪಾಲನೆ; ವಚನಪಾಲನೆ.
  10. ಪ್ರಾಮಾಣಿಕತೆ.
ನುಡಿಗಟ್ಟು
  1. bad faith ಮೋಸಮಾಡುವ ಉದ್ದೇಶ; ದುರುದ್ದೇಶ.
  2. break faith with (ಯಾರದೇ, ಯಾವುದರದೇ ಬಗ್ಗೆ) ನಿಷ್ಠನಾಗದಿರು; ನಿಷ್ಠೆಯಿಲ್ಲದಿರು.
  3. by my faith = ನುಡಿಗಟ್ಟು \((5)\).
  4. good faith ಸದ್ಭಾವ; ಪ್ರಾಮಾಣಿಕ ಉದ್ದೇಶ; ಸದುದ್ದೇಶ.
  5. in faith (ಪ್ರಾಚೀನ ಪ್ರಯೋಗ) ನಿಜವಾಗಿ; ಸತ್ಯವಾಗಿ; ವಾಸ್ತವವಾಗಿ.
  6. keep faith with (ಯಾರದೇ, ಯಾವುದರದೇ ಬಗ್ಗೆ) ನಿಷ್ಠನಾಗಿರು; ನಿಷ್ಠೆಯಿಂದಿರು.
  7. pin one’s faith to (or upon, or on) ಸಂಶಯಪಡದೆ ನಂಬಿಕೆಯಿಡು; ನಿಸ್ಸಂದಿಗ್ಧವಾಗಿ ನಂಬು.
  8. Punic faith ನಂಬಿಕೆ ದ್ರೋಹ; ವಿಶ್ವಾಸಘಾತುಕತನ.
  9. put one’s faith in = ನುಡಿಗಟ್ಟು \((7)\).
  10. the faith ಸತ್ಯಮತ; ನಿಜವಾದ – ಮತ, ಧರ್ಮ.