See also 2fain  3fain
1fain ಹೇನ್‍
ಆಖ್ಯಾತಕ ಗುಣವಾಚಕ

(ಪ್ರಾಚೀನ ಪ್ರಯೋಗ)

  1. (ಇರುವ ಯಾ ಸದ್ಯದ ಪರಿಸ್ಥಿತಿಯಲ್ಲಿ) ಮಾಡಲು ಇಷ್ಟವುಳ್ಳ.
  2. ಬೇರೆ ದಾರಿ ಇಲ್ಲದ; ಅನಿವಾರ್ಯವಾದ; ಉಪಾಯಗಾಣದೆ (ಮಾಡಲು) ಒಪ್ಪಬೇಕಾಗಿರುವ.
See also 1fain  3fain
2fain ಹೇನ್‍
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ) ಸಂತೋಷದಿಂದ; ಸಂತೋಷವಾಗಿ.

ಪದಗುಚ್ಛ

would fain ಸಂತೋಷದಿಂದ; (ಮಾಡಲು) ಇಷ್ಟವುಳ್ಳವನಾಗಿ.

See also 1fain  2fain
3fain ಹೇನ್‍
ಸಕರ್ಮಕ ಕ್ರಿಯಾಪದ

(ಬ್ರಿಟಿಷ್‍ ಪ್ರಯೋಗ) ಅಂಬಾಲ್‍; ನಿಲ್ಲಿಸು; ಇಚ್ಛೆಯಿಲ್ಲದಿರು (ಮಾಡಲು ಇಷ್ಟವಿಲ್ಲದ ಕೆಲಸದ ವಿಷಯದಲ್ಲಾಗಲಿ, ಆಟವಾಡುವಾಗ ಆಟವನ್ನು ಕೆಲವು ಕ್ಷಣ ನಿಲ್ಲಿಸುವುದಕ್ಕಾಗಲಿ ಸಾಮಾನ್ಯವಾಗಿ ಮಕ್ಕಳು ಬಳಸುವ ವಿನಾಯತಿ ಸೂತ್ರ).

ಪದಗುಚ್ಛ

fain I ನಾನೊಲ್ಲೆ; ನನಗಿಷ್ಟವಿಲ್ಲ. fain I wicket-keeping ವಿಕೆಟ್‍ ಕಾಯುವುದನ್ನು ನಾನೊಲ್ಲೆ.