failure ಹೇಲ್ಯರ್‍
ನಾಮವಾಚಕ
  1. ಇಲ್ಲದಿರುವುದು; ಸಂಭವಿಸದಿರುವುದು.
  2. ಮಾಡದೆ ಹೋಗುವುದು; ಮಾಡಲು ತಪ್ಪುವುದು.
  3. ಕೊರೆ; ಅಭಾವ; ಕೊರತೆ; ಕಡಮೆ ಬೀಳುವುದು; ಸಾಲದೆ ಹೋಗುವುದು; ಸಾಲದೆ ಬರುವುದು; ಖೋತಾ ಬೀಳುವುದು.
  4. ಮುರಿದುಬೀಳುವುದು; ಭಂಗವಾಗುವುದು.
  5. ಸೋಲು; ಅಪಜಯ; ವಿಫಲತೆ; ವೈಫಲ್ಯ.
  6. ಹೇಲು; ತೇರ್ಗಡೆಯಾಗದೆ ಹೋಗುವುದು; ಉತ್ತೀರ್ಣನಾಗದೆ ಹೋಗುವುದು.
  7. ಸೋತವನು, ಸೋತದ್ದು, ಯಾ ಸೋತಪ್ರಯತ್ನ.
  8. ದಿವಾಳಿ; ಪಾಪರ್‍ತನ.
  9. (ವೈದ್ಯಶಾಸ್ತ್ರ) ನಿಲ್ಲುವುದು; ಸ್ತಂಭನ; ಅತಿಮುಖ್ಯವಾದ ಯಾ ಪ್ರಾಣಾಧಾರವಾದ ಶರೀರದ ಕ್ರಿಯೆ ನಿಂತುಹೋಗುವುದು: heart failure ಹೃದಯಸ್ತಂಭನ.
  10. ಅಸಾಮರ್ಥ್ಯ; ಮಾಡಲು ಶಕ್ತಿಯಿಲ್ಲದಿರುವುದು: his failure to answer questions ಪ್ರಶ್ನೆಗಳಿಗೆ ಉತ್ತರ ನೀಡಲು ಅವನ ಅಸಾಮರ್ಥ್ಯ.
  11. (ಯಂತ್ರ ಮೊದಲಾದವುಗಳ) ನಿಷ್ಕ್ರಿಯತೆ; ಸ್ಥಗಿತ ಸ್ಥಿತಿ; ಕೆಲಸ ನಿಲ್ಲಿಸಿದ ಯಾ ನಿಂತುಹೋದ ಸ್ಥಿತಿ.