See also 2fail
1fail ಹೇಲ್‍
ನಾಮವಾಚಕ
  1. ವಿಫಲತೆ; ಸೋಲು; ನಪಾಸು; ತೇರ್ಗಡೆಯಾಗದಿರುವುದು; ಅನುತ್ತೀರ್ಣತೆ; ಉತ್ತೀರ್ಣನಾಗದಿರುವುದು.
  2. (ಪರೀಕ್ಷೆಯಲ್ಲಿ) ನಪಾಸಾದವನು; ತೇರ್ಗಡೆಯಾಗದವನು; ಉತ್ತೀರ್ಣನಾಗದವನು.
ನುಡಿಗಟ್ಟು

without fail (ಆಜ್ಞೆಯನ್ನೋ ವಾಗ್ದಾನವನ್ನೋ ಒತ್ತಾಯಮಾಡಿ ಹೇಳುವಲ್ಲಿ) ತಪ್ಪದೆ; ಬಿಡದೆ; ಖಂಡಿತವಾಗಿ; ನಿಸ್ಸಂಶಯವಾಗಿ; ಅಡ್ಡಿ ಅಡಚಣೆಗಳು ಬಂದರೂ ಲೆಕ್ಕಿಸದೆ.

See also 1fail
2fail ಹೇಲ್‍
ಸಕರ್ಮಕ ಕ್ರಿಯಾಪದ
  1. (ಮಾಡಲು) ತಪ್ಪು; (ತಾತ್ಸಾರದಿಂದಲೋ, ಮರೆವಿನಿಂದಲೋ, ಆಗದಿರುವುದರಿಂದಲೋ, ಮನಸ್ಸಿಲ್ಲದಿರುವುದರಿಂದಲೋ) ಮಾಡದಿರು; ಮಾಡದೆ ಬಿಡು: he failed to come ಅವನು ಬರಲು ತಪ್ಪಿದ.
  2. ನಿರೀಕ್ಷೆಗೆಡಿಸು; ಆಶಾಭಂಗ ಉಂಟುಮಾಡು: the wind failed us ಗಾಳಿ ನಮಗೆ ಆಶಾಭಂಗವುಂಟುಮಾಡಿತು. his friends failed him ಅವನ ಸ್ನೇಹಿತರು ಅವನ ನಿರೀಕ್ಷೆ ಕೆಡಿಸಿದರು.
  3. (ಹಣ) ಸಲ್ಲಿಸುವುದನ್ನು ನಿಲ್ಲಿಸು, ತಪ್ಪಿಸು; ಪಾವತಿ ಮಾಡದಿರು.
  4. ಅಭ್ಯರ್ಥಿಯಾಗಿ ಆಯ್ಕೆಮಾಡದಿರು.
  5. (ಪರೀಕ್ಷೆಯಲ್ಲಿ ಯಾ ವಿಷಯದಲ್ಲಿ) ನಪಾಸಾಗು; ಹೇಲಾಗು; ಅನುತ್ತೀರ್ಣನಾಗು; ತೇರ್ಗಡೆಯಾಗದಿರು; ನಿಗದಿಯಾಗಿರುವುದಕ್ಕಿಂತ ಕಡಮೆ ಅಂಕಪಡೆ: he failed in history ಅವನು ಚರಿತ್ರೆಯಲ್ಲಿ ಹೇಲಾದ.
  6. (ಪರೀಕ್ಷೆಯಲ್ಲಿ) ಹೇಲಾಗಿಸು; ನಪಾಸಾಗಿಸು; ಅನುತ್ತೀರ್ಣವಾಗಿಸು; ತೇರ್ಗಡೆ ಮಾಡಿಸದಿರು; ಅಗತ್ಯವಾಗಿರುವುದಕ್ಕಿಂತ ಕಡಮೆ ಅಂಕ ಕೊಡು.
  7. (ಯಾವುದನ್ನೇ ಮಾಡುವುದರಲ್ಲಿ ಯಾ ಸಾಧಿಸುವುದರಲ್ಲಿ) ವಿಫಲವಾಗು; ಅಯಶಸ್ವಿಯಾಗು.
ಅಕರ್ಮಕ ಕ್ರಿಯಾಪದ
  1. ಇಲ್ಲದಿರು; ಅಭಾವವಾಗು.
  2. ಸಾಲದಿರು; ಕೊರೆಯಾಗು; ಸಾಲದಾಗು; ಸಾಕಾಗದಿರು; ಸಾಲದೆ ಬರು; ಕಡಮೆ ಬೀಳು; ಮುಗಿದು ಹೋಗಿರು: time would fail me to tell ಹೇಳಲು ಹೊತ್ತು ಸಾಲದೆ ಹೋಗಬಹುದು.
  3. ನಾಶವಾಗು; ಹಾಳಾಗು; ಇಲ್ಲದಾಗು; ಅಳಿದುಹೋಗು; ನಷ್ಟವಾಗು: the crop failed ಬೆಳೆ ನಾಶವಾಯಿತು.
  4. (ಕಟ್ಟಡ, ಯಂತ್ರ, ಮೊದಲಾದವು) ಕುಸಿ; ಭಗ್ನವಾಗು.
  5. (ಬಲ, ಆರೋಗ್ಯ, ಸಾಮರ್ಥ್ಯ, ಮೊದಲಾದವು) ಕುಂದು; ಹಾಳಾಗು; ಕೆಡು; his health failed ಅವನ ಆರೋಗ್ಯ ಕುಂದಿತು.
  6. ಬಲಗುಂದು; ಸಾಮರ್ಥ್ಯಗುಂದು; ದುರ್ಬಲವಾಗು.
  7. ಎಣಿಸದಂತಾಗದಿರು; ಸುಳ್ಳಾಗು; ಆಶಾಭಂಗವಾಗು; ನಿರೀಕ್ಷೆ ಹುಸಿಯಾಗು: the prophecy failed ಭವಿಷ್ಯವಾಣಿ ಸುಳ್ಳಾಯಿತು.
  8. ಸಾಕಷ್ಟು ಸನ್ನದ್ಧವಾಗಿಲ್ಲದಿರು.
  9. ಪಡೆಯಲು ವಿಫಲವಾಗು; ಗುರಿ ಸಾಧಿಸದಿರು; ಸೋಲು.
  10. (ಪರೀಕ್ಷೆಯಲ್ಲಿ) ಹೇಲಾಗು; ತೇರ್ಗಡೆಯಾಗದಿರು; ಉತ್ತೀರ್ಣನಾಗದಿರು.
  11. ಮಾಡಲಾರದೆ ಹೋಗು; ಅಯಶಸ್ವಿಯಾಗು; ಜಯಶೀಲನಾಗದಿರು.
  12. ಗುರಿತಪ್ಪು; ವ್ಯರ್ಥವಾಗು; ನಿಷ್ಫಲವಾಗು.
  13. ದಿವಾಳಿಯಾಗು; ಪಾಪರ್‍ ಆಗು.
  14. ಅಭ್ಯರ್ಥಿಯಾಗಿ ಆಯ್ಕೆಯಾಗದಿರು.
  15. ಸಾಲ ತೀರಿಸಲು ಯಾ ವ್ಯಾಪಾರದ ಜವಾಬ್ದಾರಿ ನಿರ್ವಹಿಸಲು ಸಾಮರ್ಥ್ಯವಿಲ್ಲದಾಗು.
  16. ನಿಷ್ಕ್ರಿಯವಾಗು; ಕೆಲಸ ನಿಲ್ಲಿಸು; ಕೆಲಸ ಮಾಡುವುದು ನಿಂತುಹೋಗುತ್ತದೆ, ಕೆಲಸ ನಿಲ್ಲಿಸುತ್ತದೆ.
ಪದಗುಚ್ಛ

fail safe ನಿರಪಾಯಸ್ಥಿತಿಗೆ ಮರಳು; ಸುರಕ್ಷಿತಸ್ಥಿತಿಗೆ ಮತ್ತೆ ಬರು; ವಿದ್ಯುತ್‍, ಯಂತ್ರ, ಮೊದಲಾದವು ಕೆಟ್ಟುಹೋದರೆ ಯಾ ಯಾವುದೇ ತಪ್ಪು ಘಟಿಸಿದರೆ ಅಪಾಯದಿಂದ ಪಾರುಮಾಡುವ ಸಾಧನವನ್ನು ಹೊಂದಿರು ಯಾ ಅಪಾಯವಾಗದ ಸ್ಥಿತಿಗೆ ಬರು.

ನುಡಿಗಟ್ಟು

words fail me ನನಗೆ ಪದಗಳು ಸಿಗುತ್ತಿಲ್ಲ; ಹೇಳಲು ಯಾ ವರ್ಣಿಸಲು ಮಾತುಗಳು ಸಾಲವು; ಸರಿಯಾಗಿ ವರ್ಣಿಸಲು ನಾನು ಅಸಮರ್ಥ.