fading ಹೇಡಿಂಗ್‍
ನಾಮವಾಚಕ
  1. ಬಾಡುವುದು; ಕಂದುವಿಕೆ; ಕಳೆಗುಂದುವುದು; ಹೊಸತನವನ್ನೂ ಶಕ್ತಿಯನ್ನೂ ಕಳೆದುಕೊಳ್ಳುವುದು.
  2. (ಬಣ್ಣ ಮೊದಲಾದವುಗಳ ವಿಷಯದಲ್ಲಿ) ಮಂಕಾಗುವುದು; ಬಣ್ಣಗುಂದುವಿಕೆ; ಮಾಸಿಹೋಗುವುದು; ಮಸಕಾಗುವಿಕೆ; ಕಾಂತಿಹೀನವಾಗುವಿಕೆ.
  3. ಬಣ್ಣಗುಂದಿಸುವಿಕೆ; ಬಣ್ಣಹೋಗಿಸುವುದು.
  4. (ಕ್ರಮೇಣ) ಕಾಣದಾಗುವಿಕೆ; ಮರೆಯಾಗುವಿಕೆ; ಅದೃಶ್ಯವಾಗುವುದು; ಅಗೋಚರವಾಗುವುದು; ಅಳಿಸಿಹೋಗುವಿಕೆ.
  5. (ಚಲನಚಿತ್ರದಲ್ಲಿ ಯಾ ರೇಡಿಯೋ ಪ್ರಸಾರದಲ್ಲಿ ಚಿತ್ರವನ್ನು ಯಾ ಧ್ವನಿಯನ್ನು) ಕ್ರಮೇಣ ಸ್ಫುಟವಾಗಿ ಮೂಡಿಸುವುದು ಯಾ ಕ್ರಮೇಣ ಅಳಿಸಿಬಿಡುವುದು.
  6. (ಸ್ವೀಕೃತ ರೇಡಿಯೋ ಅಲೆಗಳ ತೀವ್ರತೆಯಲ್ಲಾಗುವ) ಏರುಪೇರು; ಏರಿಳಿತ; ಅಸ್ಥಿರತೆ.