See also 2fade
1fade ಹೇಡ್‍
ಸಕರ್ಮಕ ಕ್ರಿಯಾಪದ
  1. ಬಣ್ಣಗುಂದಿಸು; ಮಸುಳಿಸು; ಬಣ್ಣಹೋಗಿಸು.
  2. (ಚಲನಚಿತ್ರದಲ್ಲಿ ಯಾ ದೂರದರ್ಶನದಲ್ಲಿ ಚಿತ್ರವನ್ನು) ಕ್ರಮೇಣ ಸ್ಫುಟವಾಗಿ ಮೂಡಿಸು ಯಾ ಕ್ರಮೇಣ ಕಾಣದೆ ಹೋಗುವಂತೆ ಮಾಡು; ಕಾಣುವಂತಾಗಿಸು ಯಾ ಕಾಣದಂತಾಗಿಸು; ಕ್ರಮೇಣ ದೃಶ್ಯವಾಗಿಸು ಯಾ ಅದೃಶ್ಯಗೊಳಿಸು.
  3. (ಚಲನಚಿತ್ರದಲ್ಲಿ ಯಾ ರೇಡಿಯೋ ಪ್ರಸಾರದಲ್ಲಿ) ಧ್ವನಿಯನ್ನು ಕ್ರಮೇಣ ಏರಿಸು ಯಾ ಕುಗ್ಗಿಸು; ಕ್ರಮೇಣ ಕೇಳುವಂತಾಗಿಸು ಯಾ ಕೇಳದಂತಾಗಿಸು; ಕ್ರಮೇಣ ಹೆಚ್ಚಿಸು ಯಾ ಅಡಗಿಸು.
  4. (ಗಾಲ್ಫ್‍ ಚೆಂಡು ಮೊದಲಾದವನ್ನು) ನೇರವಾಗಿ ಹಾಕಿದ ಚೆಂಡು ಉದ್ದೇಶಪೂರ್ವಕವಾಗಿ ಕೋರೆಯಲ್ಲಿ ತಿರುಗುವಂತೆ ಆಡು.
ಅಕರ್ಮಕ ಕ್ರಿಯಾಪದ
  1. ಬಾಡು; ಬತ್ತು; ಕಂದು; ಕಳೆಗುಂದು; ಸೊರಗು; ಹೊಸತನ ಮತ್ತು ಶಕ್ತಿ ಕಳೆದುಕೊ.
  2. (ಬಣ್ಣ, ಬೆವರು, ಮೊದಲಾದವುಗಳ ವಿಷಯದಲ್ಲಿ) ಮಂಕಾಗು; ಮಸುಳಿಸು; ಮಾಸಿಹೋಗು; ಮಸುಕಾಗು; ಮಬ್ಬಾಗು; ಕಾಂತಿಹೀನವಾಗು.
  3. (ಕ್ರಮೇಣ) ಕಾಣದಾಗು; ಮರೆಯಾಗು; ಅದೃಶ್ಯವಾಗು; ಅಗೋಚರವಾಗು; ಅಳಿಸಿ ಹೋಗು.
  4. (ಶಬ್ದದ ವಿಷಯದಲ್ಲಿ) ಕುಗ್ಗು; ಕ್ಷೀಣವಾಗು; ಅಡಗು; ಕೇಳದಂತಾಗು.
  5. (ಬ್ರೇಕಿನ ವಿಷಯದಲ್ಲಿ) ಕ್ರಮೇಣ ಶಕ್ತಿಯನ್ನು ಕಳೆದುಕೊ.
  6. (ರೇಡಿಯೋ ಸಂಕೇತಗಳ ವಿಷಯದಲ್ಲಿ) ತೀವ್ರತೆಯಲ್ಲಿ ಅನಿಯತವಾಗಿ ಏರುಪೇರಾಗು.
  7. (ಗಾಲ್ಫ್‍ ಚೆಂಡು ಮೊದಲಾದವುಗಳ ವಿಷಯದಲ್ಲಿ) ನೇರಮಾರ್ಗದಿಂದ ಓರೆತಿರುಗು; ಕೋರೆಯಲ್ಲಿ ತಿರುಗು.
See also 1fade
2fade ಹೇಡ್‍
ನಾಮವಾಚಕ
ನುಡಿಗಟ್ಟು

do a fade (ಅಶಿಷ್ಟ) ತೊಲಗು; ಜಾಗ ಖಾಲಿ ಮಾಡು; ಹೊರಟುಹೋಗು.