faculty ಹ್ಯಾಕಲ್ಟಿ
ನಾಮವಾಚಕ
  1. (ಯಾವುದೇ ವಿಶೇಷ ಕಾ ಮಾಡಲು ಒಬ್ಬನಿಗಿರುವ) ಸಹಜ ಶಕ್ತಿ; ಯೋಗ್ಯತೆ; ಸಾಮರ್ಥ್ಯ.
  2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಕಾರ್ಯನಿರ್ವಾಹಕ ಶಕ್ತಿ; ಆಡಳಿತಸಾಮರ್ಥ್ಯ.
  3. (ದೇಹದ ಯಾ ಅವಯವದ) ಸಹಜಶಕ್ತಿ; ಸ್ವಾಭಾವಿಕ ಶಕ್ತಿ.
  4. (ಸಂಕಲ್ಪ, ನೆನಪು, ವಿವೇಚನೆ, ಮೊದಲಾದ) ಮನಶ್ಶಕ್ತಿ.
  5. (ಮಾನವಿಕ, ಕಲೆ, ಯಾ ವಿಜ್ಞಾನದ ಯಾವುದೇ) ಶಾಖೆ.
  6. (ವಿಶ್ವವಿದ್ಯಾನಿಲಯದ ಯಾವುದೇ) ಬೋಧನಾಂಗ; ಬೋಧನ ವಿಭಾಗ.
  7. (ಅಮೆರಿಕನ್‍ ಪ್ರಯೋಗ) ಒಂದು ವಿಶ್ವವಿದ್ಯಾನಿಲಯದ ಯಾ ಕಾಲೇಜಿನ ಅಧ್ಯಾಪಕವರ್ಗ; ಶಿಕ್ಷಕವರ್ಗ.
  8. (ಮುಖ್ಯವಾಗಿ ಕ್ರೈಸ್ತಮಠಕ್ಕೆ ಸಂಬಂಧಪಟ್ಟಂತೆ) (ಯಾವುದೇ ಕೆಲಸ ಮಾಡಲು ಕಾಯಿದೆಯಿಂದಲೋ ಮೇಲಧಿಕಾರಿಯಿಂದಲೋ ಕೊಡಲಾದ) ಸ್ವಾತಂತ್ರ್ಯ , ಅಧಿಕಾರ, ಯಾ ಅಪ್ಪಣೆ.
  9. ವೃತ್ತಿಬಾಂಧವರು; ವೃತ್ತಿಗರು; ವೃತ್ತಿಗವರ್ಗ; ಒಂದು ವೃತ್ತಿಯವರು ಯಾ ವೃತ್ತಿಗೆ (ಮುಖ್ಯವಾಗಿ ವೈದ್ಯವೃತ್ತಿಗೆ) ಸೇರಿದವರು.
ಪದಗುಚ್ಛ
  1. the French faculty ವೈದ್ಯವೃತ್ತಿಯವರು.
  2. the four faculties ಚತುಶ್ಶಾಖೆಗಳು; ದೇವತಾಶಾಸ್ತ್ರ, ನ್ಯಾಯಶಾಸ್ತ್ರ, ವೈದ್ಯಶಾಸ್ತ್ರ, ಕಲೆಗಳು – ಈ ನಾಲ್ಕು ಬೋಧನಶಾಖೆಗಳು.