fact ಹ್ಯಾಕ್ಟ್‍
ನಾಮವಾಚಕ
  1. (ಮಾಡಿದ ಯಾ ನಡೆದ) ಕೃತ್ಯ; ಘಟನೆ; ಸಂಗತಿ; (ಮುಖ್ಯವಾಗಿ) ತಪ್ಪಿತ ಯಾ ಅಪರಾಧ: before the fact ಕೃತ್ಯ ನಡೆಯುವ ಮುಂಚೆ. after the fact ಕೃತ್ಯ ನಡೆದ ಮೇಲೆ. confess the fact ಮಾಡಿದ ಕೃತ್ಯ ಒಪ್ಪಿಕೊ.
  2. ಘಟನೆ; ಸಂಗತಿ; ವಿದ್ಯಮಾನ; ಅನುಭವದ ವಿಷಯ; ಖಂಡಿತವಾಗಿ ನಡೆದದ್ದೆಂದು ಯಾ ನಿಜವಾದುದೆಂದು ಗೊತ್ತಾಗಿರುವ ವಿಷಯ: the fact that fire burns ಬೆಂಕಿ ಸುಡುತ್ತದೆಂಬ ಸಂಗತಿ.
  3. (ಅನುಮಾನ ಯಾ ನಿರ್ಣಯದ) ಆಧಾರ; ಆಧಾರಾಂಶ: his facts are disputable ಆತನ ಆಧಾರಾಂಶಗಳು ವಿವಾದಾಸ್ಪದವಾದುವು.
  4. (ಏಕವಚನದಲ್ಲಿ) ಸತ್ಯಸಂಗತಿ; ನಿಜವಾದ ವಿಷಯ; ವಾಸ್ತವಾಂಶ; ಸತ್ಯಾಂಶ; ನಿಜಸ್ಥಿತಿ; ವಾಸ್ತವಸ್ಥಿತಿ.
ಪದಗುಚ್ಛ
  1. as a matter of fact ವಾಸ್ತವವಾಗಿ; ವಸ್ತುತಃ; ನಿಜವಾಗಿ.
  2. facts and figures ಅಂಕಿಅಂಶಗಳು; ನಿಖರವಾದ, ಕರಾರುವಾಕ್ಕಾದ ಸಮಾಚಾರ ಯಾ ವಿಷಯ.
  3. fact of life (ಜೀವನದ) ವಾಸ್ತವಾಂಶ; ಸತ್ಯಾಂಶ; ಕಡೆಗಣಿಸಲಾಗದ ಸಂಗತಿ.
  4. in fact
    1. ವಾಸ್ತವವಾಗಿ; ವಸ್ತುತಃ; ನಿಜವಾಗಿ; ನಿಜಕ್ಕೂ.
    2. ಒಟ್ಟಿನಲ್ಲಿ; ಒಟ್ಟಾರೆ; ಸಂಗ್ರಹವಾಗಿ.
  5. in point of fact ವಾಸ್ತವವಾಗಿ; ವಸ್ತುತಃ; ನಿಜವಾಗಿ; ನಿಜಕ್ಕೂ.
  6. matter of fact (ಅನುಮಾನ ಯಾ ನಿರ್ಣಯ ಬೇಕಿಲ್ಲದ) ಸತ್ಯಸಂಗತಿ; ನಿಜಸ್ಥಿತಿ.
  7. the fact of the matter is ವಾಸ್ತವಾಂಶವೇನೆಂದರೆ; ಸತ್ಯಾಂಶವೇನೆಂದರೆ; ನಿಜಸಂಗತಿಯೇನೆಂದರೆ; ದಿಟವೇನೆಂದರೆ; ನಿಜಸ್ಥಿತಿಯೇನೆಂದರೆ.
  8. the facts of life
    1. (ಆಡುಮಾತು, ಸೌಮ್ಯೋಕ್ತಿ) ಲೈಂಗಿಕ ಕ್ರಿಯೆಯ ಪರಿಜ್ಞಾನ ಯಾ ವಿವರಗಳು.
    2. (ಒಂದು ಸನ್ನಿವೇಶದ) ಸತ್ಯಾಂಶಗಳು; ನಿಜಾಂಶಗಳು; ವಾಸ್ತವಾಂಶಗಳು.