See also 2facing
1facing ಹೇಸಿಂಗ್‍
ನಾಮವಾಚಕ
  1. (ಆತ್ಮವಿಶ್ವಾಸದಿಂದ, ಉದ್ಧಟತನದಿಂದ ಯಾ ಧೈರ್ಯವಾಗಿ) ಎದುರಿಸುವುದು; ಹಿಮ್ಮೆಟ್ಟದಿರುವುದು; ಹಿಂದೆಗೆಯದಿರುವುದು; ಹಿಂಜರಿಯದಿರುವುದು; ಎದುರಿಸಿ ನಿಲ್ಲುವುದು.
  2. (ಇಸ್ಪೀಟೆಲೆಯನ್ನು) ಮೇಲ್ಮುಖ ಮಾಡುವುದು; ಅಂಗಾತನಾಗಿ ಇಡುವುದು; ಮೇಲುಮುಖವಾಗಿ ತಿರುಗಿಸುವುದು.
  3. (ಸೈನ್ಯ) (ನಿಂತಿರುವ ಸ್ಥಳದಲ್ಲಿಯೇ ನಿರ್ದೇಶಿತ ದಿಕ್ಕಿಗೆ) ತಿರುಗಿಕೊಳ್ಳುವುದು; ತಿರುಗಿಸುವುದು.
  4. (ಉಡುಪಿಗೆ) ಮುಂಗೈಪಟ್ಟಿ, ಕೊರಳುಪಟ್ಟಿ, ಮೊದಲಾದ ಭಾಗಗಳನ್ನು ಬೇರೆ ಬಟ್ಟೆಯಲ್ಲಿ ಹಾಕುವುದು.
  5. (ಮೇಲ್ಮೈಯನ್ನು) ನಯಗೊಳಿಸುವುದು.
  6. (ಟೀ ಸೊಪ್ಪಿಗೆ) ಬಣ್ಣಕೊಡುವುದು.
  7. (ಮುಖ್ಯವಾಗಿ ಬಹುವಚನದಲ್ಲಿ) ಸೈನಿಕನ ಕವಚಕ್ಕೆ ಹಾಕಿರುವ ಬೇರೆ ಬಣ್ಣದ ಮುಂಗೈಪಟ್ಟಿ, ಕೊರಳುಪಟ್ಟಿ, ಮೊದಲಾದ ಭಾಗಗಳು.
  8. ಮುಖವರಸೆ; ಹೊರಹೊದಿಕೆ; ಗೋಡೆಯ ಹೊರಮೈಗೆ ಬೇರೆ ವಸ್ತುವಿನಿಂದ (ಮುಖ್ಯವಾಗಿ ಕಲ್ಲಿನಿಂದ ) ಕಟ್ಟಿರುವ ವರಸೆ.
  9. ಒಲವು; ಅಭಿಮುಖತೆ; ಪ್ರವೃತ್ತಿ; ಒಬ್ಬನಿಗೆ ಯಾವುದೇ ದಿಶೆಯಲ್ಲಿ ಇರುವ ಪ್ರವೃತ್ತಿ.
ನುಡಿಗಟ್ಟು
  1. go through one’s facings (ಗುಣಗಳು, ಯೋಗ್ಯತೆ, ಮೊದಲಾದವುಗಳ ವಿಷಯದಲ್ಲಿ) ಪರೀಕ್ಷಿತನಾಗು; ಪರೀಕ್ಷೆಗೊಳಗಾಗು.
  2. put person through his facings ಒಬ್ಬನ ಗುಣಗಳನ್ನು (ಯೋಗ್ಯತೆ ಯಾ ಸಾಮರ್ಥ್ಯ ಮೊದಲಾದವನ್ನು) ಪರೀಕ್ಷಿಸು.
See also 1facing
2facing ಹೇಸಿಂಗ್‍
ಗುಣವಾಚಕ

ಎದುರಾಗಿರುವ; ಎದುರಿನಲ್ಲಿರುವ; ಅಭಿಮುಖವಾಗಿರುವ; ಮುಖಾಮುಖಿಯಾಗಿರುವ.