facility ಹಸಿಲಿಟಿ
ನಾಮವಾಚಕ
  1. ಸೌಲಭ್ಯ; ಸೌಕರ್ಯ; ಸುಲಭವಾಗಿರುವುದು; ಸರಾಗವಾಗಿರುವಿಕೆ; ಕಷ್ಟವಿಲ್ಲದಿರುವಿಕೆ.
  2. ಸಹಾಯ; ಅನುಕೂಲ; ಸದವಕಾಶ; ತಡೆಯಿಲ್ಲದ, ಅಡ್ಡಿಆತಂಕವಿಲ್ಲದ ಅವಕಾಶ: give facilities for ಮಾಡಲು ಅನುಕೂಲ ಒದಗಿಸು.
  3. (ಮುಖ್ಯವಾಗಿ ಬಹುವಚನದಲ್ಲಿ) ಸೌಲಭ್ಯಗಳು; ಸೌಕರ್ಯಗಳು; ಸಹಾಯಗಳು; ಸುಗಮಗೊಳಿಸುವ ಸಾಮಗ್ರಿ, ಸಲಕರಣೆ, ಸಾಧನ, ಮತ್ತು ಪರಿಸ್ಥಿತಿಗಳು: washing facilities ತೊಳೆಯುವ ಸಲಕರಣೆಗಳು. travel facilities ಪ್ರಯಾಣದ ಸೌಲಭ್ಯಗಳು (ಬಸ್ಸು, ರೈಲು, ವಿಮಾನಗಳು). sports facilities ಕ್ರೀಡಾಸೌಕರ್ಯಗಳು (ಓಟದ ಮೈದಾನ, ಈಜುಕೊಳ, ಮೊದಲಾದವು).
  4. (ಭಾಷಣ ಮೊದಲಾದವುಗಳ)
    1. ಸೌಲಭ್ಯ; ಸುಗಮತೆ.
    2. ಸಾಮರ್ಥ್ಯ; ಶಕ್ತಿ.
    3. ಕುಶಲತೆ; ಕೌಶಲ; ಚಾತುರ್ಯ.
    4. ನಿರರ್ಗಳತೆ.
  5. (ಪ್ರಾಚೀನ ಪ್ರಯೋಗ) ಬಗ್ಗುವಿಕೆ; ಅನುನೇಯತೆ; ನಮ್ಯತೆ.